Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
Home ಟ್ರೆಂಡಿಂಗ್

ಹಾಲಾಯ್ತು ಮೊಸರಾಯ್ತು ತುಪ್ಪವಾಯ್ತು ಬೆಣ್ಣೆಯಾಯ್ತು – ಇದೀಗ ಶಿವನಿಗೆ ಐಸ್ ಕ್ರೀಂ ಅಭಿಷೇಕ

ಶಿವ ಅಭಿಷೇಕ ಪ್ರಿಯ ನಿಜ. ಹಾಗಂತ ಶಿವನಿಗೆ ನೀರಿನಿಂದ ಮಾಡುವ ಅಭಿಷೇಕ ತುಂಬಾ ಪ್ರಿಯ ಅನ್ನುವುದನ್ನು ಮರೆಯುವ ಹಾಗಿಲ್ಲ. ಈಗ ಐಸ್ ಕ್ರೀಂ ನಾಳೆ ಇನ್ನೇನು ಕಾದಿದೆಯೇ

Radhakrishna Anegundi by Radhakrishna Anegundi
December 10, 2021
in ಟ್ರೆಂಡಿಂಗ್
Share on FacebookShare on TwitterWhatsAppTelegram

ಶಿವನಿಗೆ 10 ಕೆಜಿ ಐಸ್ ಕ್ರೀಂ ಪಾಲಕೋಲಿನ ದೇವಲ್ಲ ನರಸಿಂಹಮೂರ್ತಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಇನ್ನು ಭಕ್ತರು ಪ್ರಸಾದ ರೂಪದಲ್ಲಿ ಸಿಕ್ಕ ಐಸ್ ಕ್ರೀಂ ಸವಿದು ಬಾಯಿ ಚಪ್ಪರಿಸಿದ್ದಾರೆ.

ಹೈದರಾಬಾದ್ :  ಅಭಿಷೇಕ ಪ್ರಿಯ ಅನ್ನಿಸಿಕೊಂಡ ಶಿವನಿಗೆ ಹಾಲು, ಮೊಸರು, ಬೆಣ್ಣೆ, ತುಪ್ಪ, ನೀರು, ಜೇನು ತುಪ್ಪ ಸಕ್ಕರೆ ಹೀಗೆ ಅಭಿಷೇಕ ಮಾಡುವುದನ್ನು ಕೇಳಿದ್ದೇವೆ ನೋಡಿದ್ದೇವೆ. ಆದರೆ ಶಿವನಿಗೆ ಐಸ್ ಕ್ರೀಂ ಅಭಿಷೇಕ ಮಾಡಿರುವುದನ್ನು ಕೇಳಿದ್ದೀರಾ. ಇದೀಗ ಅದು ಕೂಡಾ ನಡೆದು ಹೋಗಿದೆ.

Follow us on:

ಆಂಧ್ರಪ್ರದೇಶದ ಪಾಲಕೋಲ್ ನ ಪಂಚರಾಮ ಕ್ಷೇತ್ರಗಳಲ್ಲಿ ಒಂದು ಎಂದು ಕರೆಸಿಕೊಂಡಿರುವ ಕ್ಷೀರ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವನಿಗೆ ಐಸ್ ಕ್ರೀಂ ಅಭಿಷೇಕ ನೆರವೇರಿಸಲಾಗಿದೆ. ಪಾಲಕೋಲಿನ ದೇವಲ್ಲ ನರಸಿಂಹಮೂರ್ತಿ ಅನ್ನುವವರು ಈ ಸಲುವಾಗಿ 10 ಕೆಜಿ ಐಸ್ ಕ್ರೀಂ ಅನ್ನು ದೇವರಿಗೆ ಸಮರ್ಪಿಸಿದ್ದಾರೆ.

ಇದೀಗ ಈ ವಿಷಯ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ದೇವರಿಗಿಂತ ನರಸಿಂಹ ಮೂರ್ತಿ ಸುದ್ದಿಯಲ್ಲಿದ್ದಾರೆ. ಈಗ ಐಸ್ ಕ್ರೀಂ ಅಭಿಷೇಕ ನೆರವೇರಿದೆ. ಮುಂದೆ ತಂಪು ಪಾನೀಯ, ಕೋಲ, ಪೆಪ್ಸಿ ಅಭಿಷೇಕ ನೆರವೇರಿದರೂ ಅಚ್ಚರಿ ಇಲ್ಲ.

ಅರಬರ ನಾಡಿನಲ್ಲಿ ಒಂಟೆಗೂ ಸೌಂದರ್ಯ ಸ್ಪರ್ಧೆ :  ನಿಯಮ ಮೀರಿದ್ರೆ ದಂಡವೂ ಉಂಟು

ದುಬೈ : ಇತ್ತೀಚಿನ ವರ್ಷಗಳಲ್ಲಿ ಕ್ಯಾಟ್ ವಾಕ್, ಸೌಂದರ್ಯ ಸ್ಪರ್ಧೆ ಅನ್ನುವುದು ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ.  ಬದಲಾಗಿ ಪ್ರಾಣಿಗಳಿಗೂ ಸೌಂದರ್ಯ ಸ್ಪರ್ಧೆಗಳು ಶುರುವಾಗಿದೆ. ನಾಯಿ, ಬೆಕ್ಕು, ಕೋಳಿ ಹೀಗೆ ತಮ್ಮ ನೆಚ್ಚಿನ ಪ್ರಾಣಿ ಪಕ್ಷಿಗಳನ್ನು ತಂದು ಪ್ರದರ್ಶಿಸಿ ಬಹುಮಾನ ಗಿಟ್ಟಿಸುವ ಮಂದಿ ಸಾಕಷ್ಟಿದ್ದಾರೆ.

ಹೀಗೆ ಇಂತಹುದೇ ಸ್ಪರ್ಧೆ ಸೌದಿ ಆರೇಬಿಯಾದಲ್ಲಿ ಆಯೋಜಿಸಲಾಗುತ್ತದೆ. ಹೇಳಿ ಕೇಳಿ ಅರಬರ ನಾಡಿನಲ್ಲಿ ಬಿಸಿಲು ಮತ್ತು ಮರಳು ಯಥೇಚ್ಛವಾಗಿದೆ. ಈ ಕಾರಣದಿಂದ ಒಂಟೆಗಳು ಇಲ್ಲಿ ಜೀವನದ ಭಾಗವಾಗಿಯೇ ಹೋಗಿದೆ.  ಹಾಗಂತ ಇಲ್ಲಿ ಒಂಟೆಗಳನ್ನು ಅಗತ್ಯಕ್ಕಾಗಿ ಮಾತ್ರ ಸಾಕುತ್ತಿಲ್ಲ, ಬದಲಾಗಿ ಶೋಕಿಗಾಗಿಯೂ ಒಂಟೆ ಸಾಕುವವರಿದ್ದಾರೆ.

ಹೀಗೆ ಶೋಕಿಗಾಗಿ ಒಂಟೆ ಸಾಕಿದವರೇ ಸೇರಿ ಸೌದಿ ಅರೇಬಿಯಾದಲ್ಲಿ ಕಿಂಗ್ ಅಬ್ದುಲ್ ಅಜೀಜ್ ಒಂಟೆ ಉತ್ಸವ ಆಯೋಜಿಸಲಾಗುತ್ತದೆ. ಒಂಟೆ ಬ್ರೀಡರ್ ಗಳು ತಮ್ಮ ಒಂಟೆಗಳೊಂದಿಗೆ ಸ್ಪರ್ಧೆಗೆ ಆಗಮಿಸುತ್ತಾರೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ 66 ಮಿಲಿಯನ್ ಡಾಲರ್ ಬಹುಮಾನವೂ ಸಿಗುತ್ತದೆ. ಒಂಟೆಗಳ ತಲೆ, ಕುತ್ತಿಗೆ, ಡುಬ್ಬ, ಉಡುಗೆ ಮತ್ತು ಭಂಗಿಗಳ ಆಕಾರದ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

ಹಾಗಂತ ಒಂಟೆಗಳು ನೈಸರ್ಗಿಕವಾಗಿಯೇ ಸೌಂದರ್ಯವಾಗಿ ಕಾಣಬೇಕು. ಅದನ್ನು ಹೊರತುಪಡಿಸಿ ಚುಚ್ಚುಮದ್ದು ಸೇರಿದಂತೆ ಅಡ್ಡ ಮಾರ್ಗದ ಮೂಲಕ ಒಂಟೆಯ ಸೌಂದರ್ಯ ಹೆಚ್ಚಿಸಿದ್ರೆ ಸ್ಪರ್ಧೆಯಿಂದ ಗೇಟ್ ಪಾಸ್ ನೀಡಲಾಗುತ್ತದೆ. ಮಾತ್ರವಲ್ಲದೆ ದೊಡ್ಡ ಮೊತ್ತದ ದಂಡವನ್ನೂ ವಿಧಿಸಲಾಗುತ್ತದೆ.

ಅಂದ ಹಾಗೇ ಸೌದಿಯ ರಾಜಧಾನಿ ರಿಯಾದ್‍ನ ಈಶಾನ್ಯ ಮರುಭೂಮಿಯಲ್ಲಿ ಈ ತಿಂಗಳ ಮೊದಲ ವಾರದಲ್ಲಿ ಪ್ರಾರಂಭವಾಗಿರುವ ಒಂಟೆಯ ಸ್ಪರ್ಧೆಯಿಂದ ಈಗಾಗಲೇ 40 ಒಂಟೆಗಳಿಗೆ ಗೇಟ್ ಪಾಸ್ ನೀಡಲಾಗಿದೆ.

ಇನ್ನು ಭಾರತದಲ್ಲೂ ಇಂತಹುದೇ ಸ್ಪರ್ಧೆ ನಡೆಯುತ್ತದೆ. ರಾಜಸ್ತಾನದಲ್ಲಿ ಕಾರ್ತಿಕ ಹುಣ್ಣಿಮೆಯಂದು ಆಚರಿಸುವ ಪುಷ್ಕರ್ ಮೇಳದಲ್ಲಿ ಒಂಟೆಗಳ ಶೃಂಗಾರ ನೋಡುವುದೇ ಕಣ್ಣಿಗೆ ಹಬ್ಬ. ಹೆಚ್ಚು ಕಡಿಮೆ ಪ್ರತೀ ವರ್ಷ ನವೆಂಬರ್ ತಿಂಗಳಲ್ಲಿ ನಡೆಯುವ ಪುಷ್ಕರ್ ಮೇಳ ದೇಶದ ಅತ್ಯಂತ ಹಳೆಯ ಪಶು ಮೇಳ ಎಂದು ಕರೆಸಿಕೊಂಡಿದೆ.  

Tags: MAINlord shiva
Share31TweetSendShare

Discussion about this post

Related News

ಕೈ ಕೊಟ್ಟ ಓಲಾ ಸ್ಕೂಟರ್ : ಕತ್ತೆಗೆ ಕಟ್ಟಿ ಮೆರವಣಿಗೆ

ಕೈ ಕೊಟ್ಟ ಓಲಾ ಸ್ಕೂಟರ್ : ಕತ್ತೆಗೆ ಕಟ್ಟಿ ಮೆರವಣಿಗೆ

ಕೋವಿಡ್ ಕಾಲರ್ ಟ್ಯೂನ್ ಗೆ ಶೀಘ್ರವೇ ಮುಕ್ತಿ….!

ಕೋವಿಡ್ ಕಾಲರ್ ಟ್ಯೂನ್ ಗೆ ಶೀಘ್ರವೇ ಮುಕ್ತಿ….!

ರಷ್ಯಾ ಟೀವಿಯಲ್ಲಿ ಯುದ್ಧ ವಿರೋಧಿ ಫಲಕ : ಪತ್ರಕರ್ತೆಗೆ 15 ವರ್ಷ ಜೈಲು ಸಾಧ್ಯತೆ

ಮೂರು ಮದುವೆಯಾದ ಸರ್ಕಾರಿ ಶಿಕ್ಷಕ ಅಮಾನತು

ಕಾರು ಶೋರೂಮ್ ನಲ್ಲಿ ರೈತನಿಗೆ ಅವಮಾನ : ಕೇಸು ದಾಖಲಿಸದ ಪೊಲೀಸರು ಶೋರೂಮ್ ಪರವಾಗಿ ನಿಂತ್ರ…?

ಮೀಸೆ ಬಿಟ್ಟ ಪೇದೆ ಅಮಾನತು…! ಆತ್ಮಗೌರವ ಸಲುವಾಗಿ ಕೆಲಸ ಬಿಟ್ಟ ಖಾಕಿ

30 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗ

22 ವರ್ಷದ ಬಳಿಕ ಒಂದಾದ ತಾಯಿ ಮಗಳು : ಚಿಕ್ಕಮಗಳೂರಿನಲ್ಲೊಂದು ಕರುಳು ಹಿಂಡೋ ಕಥೆ

ಮೊದಲ ದಿನವೇ Sold out : ಸಂಪೂರ್ಣ ವಿದ್ಯುತ್ ಚಾಲಿತ BMW IX ಕಾರಿಗೆ ಮುಗಿ ಬಿದ್ದ ಜನತೆ

ವಿಮಾನ ನಿಲ್ದಾಣದಲ್ಲಿ ಬೋನಿನಿಂದ ತಪ್ಪಿಸಿಕೊಂಡ 2 ಸಿಂಹಗಳು…!

Latest News

afghanistan-on-taliban-diktat-to-cover-faces-afghan-women-anchors-go-virtual-on-news-channels

ಬುರ್ಖಾ ಧರಿಸಿ ಸುದ್ದಿ ಓದಲಾರಂಭಿಸಿದ ಆಘ್ಘನ್ ನಿರೂಪಕಿಯರು

ಭಾರತಕ್ಕೂ ಕಾಲಿಟ್ಟ ಲಸಿಕೆಗೂ ಬಗ್ಗದ ಒಮಿಕ್ರೋನ್ ಉಪತಳಿ

ಭಾರತಕ್ಕೂ ಕಾಲಿಟ್ಟ ಲಸಿಕೆಗೂ ಬಗ್ಗದ ಒಮಿಕ್ರೋನ್ ಉಪತಳಿ

gaurav-bhatia-bjp-attacks-rahul-gandhi-for-making-statement-on-india-at-cambridge-university

ರಾಹುಲ್ ಗಾಂಧಿ ಹೋಪ್ ಲೆಸ್ ಪಕ್ಷದ ಪಾರ್ಟ್ ಟೈಂ ರಾಜಕಾರಣಿ

bjp-has-spread-kerosene-all-over-the-country-just-one-spark-and-rahul-gandhi-at-london-event-article

ಬ್ರಿಟನ್ ನಲ್ಲಿ ದೇಶದ ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

without-prior-permission-videography-and-streaming-in-samvadas-fb-and-youtube-channel-hc-admin-files-complaint

ಹೈಕೋರ್ಟ್ ಆವರಣದಲ್ಲಿ ನಮಾಜ್ ವಿಡಿಯೋ ಚಿತ್ರೀಕರಿಸಿದ ಸಂವಾದ ವಿರುದ್ಧ FIR

belthangady-mla-ed-acb-bjp-worker-controversial-statement-Shekhar Laila

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಸಂಕಷ್ಟ ತಂದಿಟ್ಟ ಕಾರ್ಯಕರ್ತನ ಹೇಳಿಕೆ

ಅವಮಾನದಿಂದ ತಪ್ಪಿಸಿಕೊಳ್ಳಲು ಕಾರು ಕದ್ದ ಖದೀಮ : ಪೊಲೀಸರ ತನಿಖೆಗೊಂದು ಸೆಲ್ಯೂಟ್

ಅವಮಾನದಿಂದ ತಪ್ಪಿಸಿಕೊಳ್ಳಲು ಕಾರು ಕದ್ದ ಖದೀಮ : ಪೊಲೀಸರ ತನಿಖೆಗೊಂದು ಸೆಲ್ಯೂಟ್

nithya bhavishya

ತಾ.16-05-2022 ರ ಸೋಮವಾರದ ರಾಶಿಭವಿಷ್ಯ.

nithya bhavishya

ತಾ.13-05-2022 ರ ಶುಕ್ರವಾರದ ರಾಶಿ ಭವಿಷ್ಯ

30 ಕೋಟಿ ದರೋಡೆ ಮಾಡಿದ ಖಾಕಿ ಗ್ಯಾಂಗ್…!

30 ಕೋಟಿ ದರೋಡೆ ಮಾಡಿದ ಖಾಕಿ ಗ್ಯಾಂಗ್…!

  • Advertise
  • About

©Copyright Torrent Spree.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

©Copyright Torrent Spree.

  • ↓
  • ಗ್ರೂಪ್
  • ಗ್ರೂಪ್