ರಾಹುಲ್ ಗಾಂಧಿ ಪೌರತ್ವದ ಕುರಿತಾಗಿ ನಡೆಯುತ್ತಿರುವ ಚರ್ಚೆಗಳ ನಡುವೆಯೇ ವಯನಾಡ್ ನ 72 ವರ್ಷದ ನಿವೃತ್ತ ನರ್ಸ್ ರಾಜಮ್ಮ ವವಾತಿಲ್ ಕಾಂಗ್ರೆಸ್ ಅಧ್ಯಕ್ಷರ ಜನ್ಮ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ನವಜಾತ ಶಿಶುವನ್ನೆತ್ತಿಕೊಂಡವರಲ್ಲಿ ನಾನೇ ಮೊದಲಿಗಳು ಎಂದು ಕೇರಳ ಮೂಲದ ಓರ್ವ ನಿವೃತ್ತ ನರ್ಸ್ ಹೇಳಿದ್ದು, ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ನಾನು ತರಬೇತಿ ನಿರತ ನರ್ಸ್ ಆಗಿದ್ದ ವೇಳೆ ರಾಹುಲ್ ಜನ್ಮ ಆಯ್ತು ಅಂದಿದ್ದಾರೆ.
ನಾನು ಅದೃಷ್ಟವಂತಳಾಗಿದ್ದೆ, ರಾಹುಲ್ ನವಜಾತ ಶಿಶುವಾಗಿದ್ದಾಗ ಕೈಗೆ ತೀಗೆದುಕೊಂಡಿದ್ದ ಕೆಲವರಲ್ಲಿ ನಾನು ಮೊದಲಿಗಳು. ಅವರು ನೋಡಲು ಬಹಳ ಸುಂದರವಾಗಿದ್ದರು. ನಾನು ಅವರ ಜನ್ಮವಾದ ಕ್ಷಣಕ್ಕೆ ಸಾಕ್ಷಿಯಾಗಿದ್ದೇನೆ. ಪ್ರಧಾನಿ ಇಂದಿರಾಗಾಂಧಿ ಮೊಮ್ಮಗನನ್ನು ಕಾಣಲು ನಾವು ತುದಿಗಾಲಲ್ಲಿ ನಿಂತು ಕಾದಿದ್ದೆವು ಎಂದು 49 ವರ್ಷದ ನಂತರ ರಾಜಮ್ಮ ಈ ಘಟನೆ ನೆನಪಿಸಿಕೊಂಡಿದ್ದಾರೆ.
ರಾಹುಲ್ ಗಾಂಧಿಯವರ ತಂದೆ ರಾಜೀವ್ ಗಾಂಧಿ ಮತ್ತು ಚಿಕ್ಕಪ್ಪ ಸಂಜಯ್ ಗಾಂಧಿ ಅವರು ಆಸ್ಪತ್ರೆಯ ಲೇಬರ್ ರೂಂ ನ ಆಚೆ ಕಾಯುತ್ತಿದ್ದರು. ಆಗ ಸೋನಿಯಾಗಾಧಿವರನ್ನು ಹೆರಿಗೆಗಾಗಿ ಕರೆದೊಯ್ಯಲಾಗಿತ್ತು ಎಂದು ಆಕೆ ನೆನಪಿಸಿಕೊಂಡಿದ್ದಾರೆ.
ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಿಂದ ತನ್ನ ನರ್ಸಿಂಗ್ ಕೋರ್ಸ್ ಮುಗಿಸಿದ ರಾಜಮ್ಮ ನಂತರ ಭಾರತೀಯ ಸೇನೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸಿದ್ದಾರೆ.ಸೇವೆಯಿಂದ ವಿ.ಆರ್.ಎಸ್ ತೆಗೆದುಕೊಂಡ ನಂತರ, ಅವರು 1987 ರಲ್ಲಿ ಕೇರಳಕ್ಕೆ ಮರಳಿ ಈಗ ವಯನಾಡಿನ ಸುಲ್ತಾನ್ ಬತೇರಿಯ ಕಲ್ಲೂರಿನಲ್ಲಿ ನೆಲೆಸಿದ್ದಾರೆ.
ಕೇರಳದ ವಯನಾಡಿನಲ್ಲೇ ರಾಹುಲ್ ಗಾಂಧಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಅಂದಿದ್ದಾರೆ.
Discussion about this post