ನವದೆಹಲಿ : ಈ ಹಿಂದಿನ ಲೆಕ್ಕಚಾರದ ಪ್ರಕಾರ ದೇಶದಲ್ಲಿ ಇಷ್ಟು ಹೊತ್ತಿಗೆ ಮೂರನೇ ಅಲೆ ಅಬ್ಬರಿಸಿ ಹೋಗಬೇಕಾಗಿತ್ತು. ಆದರೆ ಬಹಳ ತಡವಾಗಿ ದೇಶದಲ್ಲಿ ಮೂರನೇ ಅಲೆ ಮುನ್ನುಡಿ ಬರೆದಿದ್ದು, ಜನವರಿ ಫ್ರೆಬ್ರವರಿ ಹೊತ್ತಿಗೆ ಅಬ್ಬರಿಸುವ ಮುನ್ಸೂಚನೆ ಕೊಟ್ಟಿದೆ. ಆದರೆ ದೇಶದಲ್ಲಿ ನಡೆದಿರುವ ಲಸಿಕಾ ಅಭಿಯಾನ ಮೂರನೇ ಅಲೆಗೆ ತಡೆ ನೀಡುವ ಆಶಾವಾದವೊಂದು ಗೋಚರಿಸಿದೆ.
ಈ ನಡುವೆ ದೇಶದಲ್ಲಿ ಮೂರನೇ ಅಲೆಗೆ ಕಾರಣವಾಗಲಿರುವ ಒಮಿಕ್ರಾನ್ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೊರೋನಾ ನಿಯಂತ್ರಣ ಸಂಬಂಧ ಹೊಸ ಸಲಹೆಗಳನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಿದ್ದು ಪಂಚಸೂತ್ರಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದೆ. ಅಗತ್ಯ ಬಿದ್ದರೆ ಲಾಕ್ ಡೌನ್ ಗೂ ಸಲಹೆ ನೀಡಲಾಗಿದ್ದು, ಆದರೆ ಈ ಬಾರಿ ಲೋಕಲ್ ಲಾಕ್ ಡೌನ್ ಗೆ ಒತ್ತು ನೀಡಲಾಗಿದೆ. ಕೊರೋನಾ ಹೆಚ್ಚಿರುವ ಪ್ರದೇಶಗಳಲ್ಲಿ, ಅಂದ್ರೆ ಸ್ಥಳೀಯ ನಿಯಂತ್ರಣ ಕ್ರಮ ತ್ತು ನಿರ್ಬಂಧಗಳನ್ನು ವಿಧಿಸುವಂತೆ ಸೂಚಿಸಲಾಗಿದೆ. ಹೀಗಾಗಿ ಗ್ರಾಮ ಮಟ್ಟದಲ್ಲಿ ಲಾಕ್ ಡೌನ್ ಜಾರಿಯಾಗೋ ಸಾಧ್ಯತೆಗಳಿದೆ.
ಇನ್ನುಳಿದಂತೆ ಕೊರೋನಾ ತಪಾಸಣೆ, ಚಿಕಿತ್ಸೆ, ಲಸಿಕಾಕರಣ, ಸೋಂಕಿತರ ಪತ್ತೆ ಮತ್ತು ಕೊರೋನಾ ನಿಯಮಗಳ ಪಾಲನೆಗೆ ಒತ್ತು ನೀಡಬೇಕು ಎಂದು ಪಂಚಸೂತ್ರಗಳನ್ನು ನೀಡಲಾಗಿದೆ. ಆ ಆತಂಕದ ನಡುವೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿದಿದ್ದು, ಒಮಿಕ್ರೋನ್ ರೂಪಾಂತರಿ ಮೂರು ಪಟ್ಟು ವೇಗದಲ್ಲಿ ಹರಡುವ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ ಏಕಾಕಏಕಿ ಏರುವ ಸಾಧ್ಯತೆಗಳಿದೆ.
Discussion about this post