ಬೆಂಗಳೂರು : ಕನ್ನಡಿಗರ ಅಪ್ಪು ಪುನೀತ್ ರಾಜ್ ಕುಮಾರ್ ನಿಧನ ಹೊಂದಿ ಇಂದಿಗೆ 11 ದಿನ. ಈ ಹಿನ್ನಲೆಯಲ್ಲಿ ಪುಣ್ಯತಿಥಿ ಆಚರಿಸಲು ಕುಟುಂಬ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಸಮಾಧಿ ಹಾಗೂ ಸದಾಶಿವನಗರ ನಿವಾಸದಲ್ಲಿ ಹಲವು ಕಾರ್ಯಕ್ರಮಗಳನ್ನು ಕುಟುಂಬದ ಸಂಪ್ರದಾಯದಂತೆ ನಡೆಸಲು ತೀರ್ಮಾನಿಸಲಾಗಿದೆ.
ಈ ನಡುವೆ ಅಪ್ಪನ ಪುಣ್ಯತಿಥಿಯಂದೇ ಅಪ್ಪು ಮಗಳು ವಂದಿತಾ ಪರೀಕ್ಷೆ ಬರೆಯಲಿದ್ದಾಳೆ.
ನಗರದ ಸೋಫಿಯಾ ಶಾಲೆಯಲ್ಲಿ ICSE 10ನೇ ತರಗತಿ ಓದುತ್ತಿರುವ ವಂದಿತಾಳಿಗೆ ಮುಂದಿನ ವಾರದಿಂದ ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭಗೊಳ್ಳಲಿದೆ. ಹೀಗಾಗಿ ಇಂದಿನಿಂದ ಪೂರ್ವ ತಯಾರಿ ಪರೀಕ್ಷೆಗಳು ಪ್ರಾರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ 10ನೇ ತರಗತಿಯ ಪೂರ್ವ ತಯಾರಿ ಪರೀಕ್ಷೆಗಳು ಅಪ್ಪನ 11ನೇ ದಿನವೇ ವಂದಿತಾ ಬರೆಯಲಿದ್ದಾಳೆ.
ಅದ್ಯಾವ ಸಂದರ್ಭದಲ್ಲೂ ಮಕ್ಕಳ ಶಿಕ್ಷಣದ ಬಗೆಗಿನ ಕಾಳಜಿಯನ್ನು ಪುನೀತ್ ಮರೆತವರಲ್ಲ. ತಮ್ಮ ಶಿಕ್ಷಣದ ಸಮಸ್ಯೆ ತನ್ನ ಮಕ್ಕಳಿಗೆ ಮಾತ್ರವಲ್ಲ ಅದ್ಯಾರ ಮಕ್ಕಳಿಗೂ ಬರಬಾರದು ಅನ್ನುವುದು ಅವರ ಕಾಳಜಿಯಾಗಿತ್ತು. ಹೀಗಾಗಿ ಶಿಕ್ಷಣ ಅಂದ್ರೆ ಅವರಿಗೆ ಆಸಕ್ತಿ.
ಇನ್ನು ವಂದಿತಾ ಪರೀಕ್ಷೆ ಬರೆಯಲು ಹೊರಡುವ ಹಿನ್ನಲೆಯಲ್ಲಿ ಬೆಳಗ್ಗೆಯೇ ಆದಷ್ಟು ಬೇಗ 11ನೇ ದಿನದದ ವಿಧಿ ವಿಧಾನಗಳನ್ನು ಮುಗಿಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.
Discussion about this post