ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಪರಾರಿಯಾಗಿರುವ ಲಲಿತ್ ಮೋದಿ ಲಂಡನ್ ನಲ್ಲಿ ಮಜಾ ಉಡಾಯಿಸುತ್ತಿದ್ದಾರೆ. ಇದೀಗ ಮೋದಿ ತೆಕ್ಕೆಯಲ್ಲಿ ಸುಶ್ಮಿತಾ ಸೇನ್ ಇರುವ ಸುದ್ದಿ ಬಂದಿದೆ ( lalit modi sushmita sen _
ಸುಶ್ಮಿತಾ ಸೇನ್ ಇತ್ತೀಚೆಗೆ ರೊಹಮನ್ ಶ್ವಾಲ್ ಅನ್ನುವ ವ್ಯಕ್ತಿಯ ಜೊತೆ ಎರಡೂವರೆ ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ಇಬ್ಬರ ನಡುವೆ 15 ವರ್ಷಗಳ ಅಂತರವಿತ್ತು. ಸುಶ್ಮಿತಾ ಸೇನ್‌ಗೆ 46 ವರ್ಷವಾಗಿದ್ದರೆ, ರೊಹಮನ್‌ಗೆ 30 ವರ್ಷ ವಯಸ್ಸಾಗಿತ್ತು. ಎರಡೂವರೆ ವರ್ಷವೂ ಇವರು ಲಿವ್ ಇನ್ ಸಂಬಂಧದಲ್ಲಿದ್ದರು. ಆದಾದ ಬಳಿಕ ಈ ಸಂಬಂಧದಲ್ಲಿ ಬ್ರೇಕಪ್ ಆಗಿತ್ತು. ( lalit modi sushmita sen )

ಲಲಿತ್ ಮೋದಿ ತನ್ನ ತಾಯಿಯ ಸ್ನೇಹಿತೆಯನ್ನೇ ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದರು. ತಾಯಿಯ ಆಪ್ತ ಸ್ನೇಹಿತೆ ಮೀನಲ್‌ರ ಪ್ರೀತಿಯಲ್ಲಿ ಬಿದ್ದ ಲಲಿತ್ ಮೋದಿ ತಾಯಿಯ ವಿರೋಧದ ನಡುವೆ ಮದುವೆಯಾಗಿದ್ದರು. ಮೀನಲ್ ಹಾಗೂ ಲಲಿತ್ ನಡುವೆ 9 ವರ್ಷಗಳ ಅಂತರವಿತ್ತು. ಕೆಲ ವರ್ಷಗಳ ಹಿಂದೆ ಮೀನಲ್ ತೀರಿಕೊಂಡಿದ್ದಾರೆ.
ಇದನ್ನೂ ಓದಿ : cop torture : ರಾಕ್ಷಸನಾದ ಪೊಲೀಸ್ : ಮಾಡದ ತಪ್ಪಿಗೆ ಯುವಕನನ್ನು ಕೊಂದ ಖಾಕಿ
ಈ ನಡುವೆ ಇದೀಗ ಲಲಿತ್ ಮೋದಿ ಹಾಗೂ ಸುಶ್ಮಿತಾ ಸೇನ್ ಡೇಟಿಂಗ್ ಮಾಡುತ್ತಿರುವ ಸುದ್ದಿ ಬಂದಿದೆ. ಭಾರತದಲ್ಲಿ ವಂಚನೆ ಆರೋಪ ಎದುರಿಸುತ್ತಿರುವ ಲಲಿತ್ ಮೋದಿ ಲಂಡನ್ ಗೆ ಪರಾರಿಯಾಗಿದ್ದು, ಅಲ್ಲಿ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಈ ಸಂಭ್ರಮದಲ್ಲಿ ಸುಶ್ಮಿತಾ ಸೇನ್ ಪಾಲುದಾರರಾಗಿದ್ದಾರೆ.
ಈ ಸಂಬಂಧ ಲಲಿತ್ ಮೋದಿಯವರೇ ಟ್ವೀಟ್ ಮಾಡಿದ್ದು, ಸುಶ್ಮಿತಾ ಸೇನ್ ರನ್ನು ಬೆಟರ್ ಹಾಫ್ ಎಂದು ಕರೆದಿದ್ದಾರೆ. ಜೊತೆಗೆ ಸುಶ್ಮಿತಾ ಸೇನ್ ಜೊತೆಗೆ ಹೊಸ ಇನ್ನಿಂಗ್ಸ್ ಆರಂಭಿಸಿರುವುದಾಗಿಯೂ ಘೋಷಿಸಿದ್ದಾರೆ. ಹಾಗಂತ ಮದುವೆಯಾಗಿಲ್ಲ. ಲಲಿತ್ ಮೋದಿಯೇ ಹೇಳಿರುವಂತೆ ಬರೀ ಡೇಟಿಂಗ್ ಮಾಡುತ್ತಿದ್ದು, ಮುಂದೊಂದು ದಿನ ಮದುವೆಯಾದರೂ ಆಗಬಹುದು ಅಂದಿದ್ದಾರೆ.
ಐಪಿಎಲ್ ಗೆ ಸಂಬಂಧಿಸದ ತೆರಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದ ತನಿಖೆಯ ನಡುವೆ ಲಲತ್ ಮೋದಿ 2010ರಲ್ಲಿ ಲಂಡನ್ ಗೆ ಪರಾರಿಯಾಗಿದ್ದರು.
Discussion about this post