ಪೊಲೀಸ್ ದೌರ್ಜನ್ಯದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ ಸಾಕಷ್ಟು ಸಾಕ್ಷಿಗಳನ್ನು ಬಿಟ್ಟು ಹೋಗಿದ್ದಾನೆ. ( cop torture ) ಇದೀಗ ಪಿಎಸ್ಐ ಅಮಾನತುಗೊಂಡಿದ್ದಾನೆ. ಆದರೆ ಒಂದಿಷ್ಟು ತಿಂಗಳ ನಂತ್ರ ಮತ್ತೆ ಅವನು ಕರ್ತವ್ಯಕ್ಕೆ ಬರ್ತಾನೆ ತಾನೇ
ವಿಜಯಪುರ : ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆ. ಬಡವರ ಕಣ್ಣೀರು ಒರೆಸಬೇಕಾದ ಖಾಕಿ ಬಡವರ ರಕ್ತ ಹೀರುತ್ತಿದೆ. ನೊಂದವನಿಗೆ ನ್ಯಾಯ ಕೊಡಿಸಬೇಕಾದ ( cop torture ) ಇಲಾಖೆ ನೊಂದವನನ್ನೇ ಪೀಡಿಸುತ್ತಿದೆ. ಉಳ್ಳವರ ಪರವಾಗಿ ವರ್ತಿಸುತ್ತಿರುವ ಕೆಲ ಅಧಿಕಾರಿಗಳು ಇಲಾಖೆಯ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ. ಇದಕ್ಕೆ ಮತ್ತೊಂದು ಹೆಸರು ಸೇರ್ಪಡೆ ಪಿಎಸ್ಐ ಸೋಮೇಶ ಗೆಜ್ಜಿ.
ಸೋಮನಾಥ ಅಶೋಕ ನಾಗಮೋತಿ ಅನ್ನುವ ಯುವಕ ವಿಜಯಪುರದ ಸಂತೋಷ್ ದೇಗಿನಾಳ ಮಾಲೀಕತ್ವದ ಟಯರ್ ಅಂಗಡಿಯಲ್ಲಿ ಕೆಲಸಕ್ಕಿದ್ದ. ಜುಲೈ 9 ರಂದು ಎಂಪಿಎಂಸಿ ಪಿಎಸ್ಐ ಸೋಮೇಶ ಗೆಜ್ಜಿ ಸಹೋದರ ಚೇತನ್ ತನ್ನ ಫೋರ್ಡ್ ಎಂಡೋವರ್ ಕಾರನ್ನು ವೀಲ್ ಅಲೈನ್ ಮೆಂಟ್ ಗೆ ಬಿಟ್ಟಿದ್ದ.
ಇದನ್ನೂ ಓದಿ : kerala monkeypox : ಭಾರತಕ್ಕೆ ಕಾಲಿಟ್ಟ ಮಂಕಿಪಾಕ್ಸ್ : ಕೇರಳದಲ್ಲಿ ದೃಢಪಟ್ಟ ಸೋಂಕು : ಕರ್ನಾಟಕಕ್ಕೂ ಕಾದಿದೆ ಆತಂಕ
ಈ ಸಂದರ್ಭದಲ್ಲಿ ಸುನೀಲ ಕುಮಾರ ಶಾಂತಪ್ಪ ಇಂಡಿ ಕಾರನ್ನು ಚಲಾಯಿಸಿಕೊಂಡು ಬಂದಿದ್ದ. ಅದೇ ಸಂದರ್ಭದಲ್ಲಿ ಕಾರಿನಲ್ಲಿದ್ದ ಹಣವನ್ನು ಆತನೇ ತೆಗೆದುಕೊಂಡಿದ್ದಾನೆ ಅನ್ನುವುದು ಸೋಮನಾಥ ಅಶೋಕ ನಾಗಮೋತಿ ಮಾತು. ಆದರೆ ಕಾರನ್ನು ತೆಗೆದುಕೊಂಡು ಹೋದ ಬಳಿಕ 1 ಲಕ್ಷ ರೂಪಾಯಿ ಕದ್ದ ಆರೋಪವನ್ನು ನಾಗಮೋತಿಯ ಮೇಲೆ ಹೊರಿಸಲಾಗಿದೆ.
ಆದರ್ಶನಗರ ಠಾಣಾ ವ್ಯಾಪ್ತಿಯಲ್ಲಾದ ಪ್ರಕರಣದಲ್ಲಿ ಮೂಗು ತೂರಿಸಿದ ಗೆಜ್ಜಿ ನಾಗಮೋತಿಯ ಮೇಲೆ ಹಲ್ಲೆ ಮಾಡಿದ್ದಾನೆ. ಕದ್ದ ಹಣವನ್ನು ವಾಪಾಸ್ ಕೊಟ್ರೆ ಸರಿ, ತಪ್ಪಿದ್ರೆ ಭವಿಷ್ಯ ಹಾಳು ಮಾಡುತ್ತೇನೆ ಎಂದು ಬೆದರಿಸಿದ್ದಾನೆ. ಸಿಸಿಟಿವಿ ನೋಡಿ ನಾನು ತಪ್ಪಿತಸ್ಥನಲ್ಲ ಅನ್ನೋದು ಗೊತ್ತಾಗುತ್ತದೆ ಅಂದ್ರೂ ಕೇಳಿರಲಿಲ್ಲ.
ಇಷ್ಟೆಲ್ಲಾ ಹಿಂಸೆಗಳನ್ನು ಸಹಿಸಿದ ಜೀವ ಕೊನೆಗೆ ಮಾಡದ ತಪ್ಪಿಗೆ ಶಿಕ್ಷೆ ಯಾಕೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ವಿವರವಾದ ವಿಡಿಯೋ ಮಾಡಿದ್ದಾನೆ. ಜೊತೆಗೆ ಪೊಲೀಸಪ್ಪನ ದೌರ್ಜನ್ಯಕ್ಕೆ ಸಾಕ್ಷಿಯನ್ನೂ ಕೊಟ್ಟಿದ್ದಾನೆ.
ಇದೀಗ ಸೋಮೇಶ ಗೆಜ್ಜಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಅಮಾನತು ಮಾಡಿದ್ರೆ ಸಾಕಾ ಅನ್ನುವುದು ಪ್ರಜ್ಞಾವಂತರ ಮಾತು. ಮೊದಲು ಕೇಸು ದಾಖಲಿಸಿ ಜೈಲಿಗೆ ಅಟ್ಟಬೇಕು ತಾನೇ. ಒಂದು ವೇಳೆ ತಪ್ಪು ಮಾಡಿರುವುದು ಸಾಬೀತಾದ್ರೆ ಕೆಲಸದಿಂದಲೇ ವಜಾಗೊಳಿಸಬೇಕು. ಇಲ್ಲವಾದ್ರೆ ಸೋಮೇಶ ಗೆಜ್ಜಿ ಸಾಕ್ಷಿ ನಾಶ ಮಾಡುವ ಸಾಧ್ಯತೆಗಳು ಕೂಡಾ ಇಲ್ಲದಿಲ್ಲ.
Discussion about this post