Karnataka election ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಹೊಸ ತಂತ್ರ ಪ್ರಯೋಗಿಸಿದೆ. ಇಬ್ಬರಿಗೆ ಎರಡೆರಡು ಕಡೆ ಟಿಕೆಟ್ ಕೊಡುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯೋ ತಂತ್ರ ರೂಪಿಸಲಾಗಿದೆ
ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ( Karnataka election) ಬಿಜೆಪಿ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯನ್ನು ಗಮನಿಸಿದರೆ, ಈ ಬಾರಿ ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಳ್ಳುವುದು ಡೆಲ್ಲಿ ನಾಯಕರಿಗೆ ಈಗಾಗಲೇ ಗೊತ್ತಾದಂತೆ ಗೋಚರಿಸುತ್ತಿದೆ. ಹೀಗಾಗಿಯೇ ಮುಂಬರುವ ಲೋಕಸಭಾ ಚುನಾವಣೆಗೆ ಈಗ್ಲೇ ತಯಾರಿಸಿ ನಡೆಸುತ್ತಿರುವಂತೆ ಕಾಣಿಸುತ್ತಿದೆ. ಕರ್ನಾಟಕದಲ್ಲಿ ತಿರುಗಿ ಬಿದ್ದಿರುವ ತಳಮಟ್ಟದ ಕಾರ್ಯಕರ್ತರನ್ನು ಸಮಾಧಾನಗೊಳಿಸುವ ಮೂಲಕ ಲೋಕಸಭೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸೋ ತಾಲೀಮು ಇದಾಗಿದೆ. ಜೊತೆಗೆ 2028ರಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಿಕ್ಕೆ ತರೋದು ಡೆಲ್ಲಿ ನಾಯಕರ ಯೋಚನೆಯಾಗಿದೆ. ( Karnataka election) ಈ ಸಲುವಾಗಿ ಕ್ಲಿನಿಂಗ್ ಕೆಲಸ ಪ್ರಾರಂಭವಾಗಿದೆ.
ಅದರಲ್ಲೂ ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಮತ್ತು ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸುವ ಮೂಲಕ ಬೀಗಿದ ಬಿಜೆಪಿ ಈ ಬಾರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಕಟ್ಟಿ ಹಾಕಲು ಮುಂದಾಗಿದೆ. ಈ ಇಬ್ಬರು ನಾಯಕರು ಕಾಂಗ್ರೆಸ್ ಗೆ ಪ್ರಬಲ ಶಕ್ತಿಯಾಗಿದ್ದಾರೆ. ( Karnataka election) ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಅವರನ್ನು ಕಣಕ್ಕಿಳಿಸಲಾಗಿದೆ. ಹೇಳಿ ಕೇಳಿ ಸೋಮಣ್ಣ, ಯಡಿಯೂರಪ್ಪ ಅವರ ನಂತ್ರದ ಲಿಂಗಾಯತರ ನಾಯಕ ಎಂದೇ ಗುರುತಿಸಿಕೊಂಡಿದ್ದಾರೆ. ಸುತ್ತೂರು ಮತ್ತು ಸಿದ್ದಗಂಗಾ ಮಠದ ಸಂಪೂರ್ಣ ಅಶೀರ್ವಾದ ಸೋಮಣ್ಣ ಬೆನ್ನಿಗಿದೆ. ಜೊತೆಗೆ ವರುಣಾದಲ್ಲಿ ಅಂದಾಜು 60 ಸಾವಿರ ಲಿಂಗಾಯತ ಮತದಾರರಿದ್ದು, ಕುರುಬರು 35 ಸಾವಿರ, ಪರಿಶಿಷ್ಟ ಜಾತಿಯ 43 ಸಾವಿರ ಮತದಾರರು, ಪರಿಶಿಷ್ಟ ಪಂಗಡದ 23 ಸಾವಿರ, ಒಕ್ಕಲಿಗರು 12 ಸಾವಿರ ಹಾಗೂ ಇತರ ಹಿಂದುಳಿದ ವರ್ಗಗಳ ಸಮುದಾಯದವರು 12 ಸಾವಿರ ಮತದಾರರಿದ್ದಾರೆ. ಹೀಗಾಗಿಯೇ ಸೋಮಣ್ಣ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕುವ ಸಿದ್ದರಾಮಯ್ಯ ಕ್ಷೇತ್ರ ಬಿಟ್ಟು ರಾಜ್ಯ ಸುತ್ತಾಡಲು ಸಾಧ್ಯವಾಗೋದಿಲ್ಲ. ಸಿದ್ದರಾಮಯ್ಯ ಅವರು ಪ್ರಚಾರಕ್ಕೆ ತೆರಳದೇ ಹೋದರೆ ಕಾಂಗ್ರೆಸ್ ಗೆ ದೊಡ್ಡ ನಷ್ಟ.
ಈ ಲೆಕ್ಕಚಾರದ ಪ್ರಕಾರ, ಒಂದು ವೇಳೆ ಇಲ್ಲಿ ಸೋಮಣ್ಣ ಗೆದ್ದರೆ ಲಿಂಗಾಯತ ನಾಯಕನಾಗಿ ಹೊರ ಹೊಮ್ಮುತ್ತಾರೆ. ( ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ವಿರುದ್ಧ ಇದೇ ಸೋಮಣ್ಣ ಮತ್ತು ಅವರ ಪುತ್ರ ತೊಡೆ ತಟ್ಟಿದ್ದರು.) ಜೊತೆಗೆ ಸಿದ್ದರಾಮಯ್ಯ ಅವರನ್ನು ಸೋಲಿಸಿದಂತಾಗುತ್ತದೆ. ಸೋಮಣ್ಣ ಸೋತರೆ ಲಿಂಗಾಯತ ನಾಯಕ ಅನ್ನುವ ಪಟ್ಟ ಕಳಚಿಕೊಳ್ಳುತ್ತದೆ.
Read More : BJP Ticket : ಕರಾವಳಿಯ 5 ಹಾಲಿ ಶಾಸಕರಿಗೆ ಕೈ ತಪ್ಪಿದ ಟಿಕೆಟ್ : ಕಾರ್ಯಕರ್ತರನ್ನು ನಿರ್ಲಕ್ಷ್ಯಿಸಿದವರು ಸೈಡ್ ಲೈನ್
ಇನ್ನು ಆರ್ ಅಶೋಕ್, ಪದ್ಮನಾಭನಗರದಲ್ಲಿ ಹೊಂದಾಣಿಕೆ ರಾಜಕೀಯದ ಮೂಲಕ ಕ್ಷೇತ್ರ ಗಟ್ಟಿಮಾಡಿಕೊಂಡ ಅವರು ಒಕ್ಕಲಿಗ ನಾಯಕ ಎಂದು ಬಿಂಬಿಸಿಕೊಂಡಿದ್ದಾರೆ. ದೇವೇಗೌಡರನ್ನು ಒಕ್ಕಲಿಗ ನಾಯಕ ಎಂದೇ ಗುರುತಿಸಲಾಗಿದೆ. ಆದಾದ ಬಳಿಕ ಎಸ್ .ಎಂ. ಕೃಷ್ಣ, ಕುಮಾರಸ್ವಾಮಿ, ಡಿಕೆಶಿ, ಅಶೋಕ್ ಹೆಸರುಗಳು ಕೂಡಾ ಕೇಳಿ ಬಂದಿದೆ.
ಇದೀಗ ಕನಕಪುರದಲ್ಲಿ ಅಶೋಕ್ ಅವರನ್ನು ಕಣಕ್ಕಿಳಿಸುವ ಮೂಲಕ ಸಾಮರ್ಥ್ಯ ತೋರಿಸುವ ಚಾಲೆಂಜ್ ಅನ್ನು ಹೈಕಮಾಂಡ್ ಅಶೋಕ್ ಅವರಿಗೆ ನೀಡಿದೆ. ಡಿಕೆಶಿ ವಿರುದ್ಧ ಅಶೋಕ್ ಎಷ್ಟು ಮತ ಪಡೆಯುತ್ತಾರೆ ಅನ್ನುವ ಮೂಲಕ ಅಶೋಕ್ ತಾಕತ್ತು ಸಾಬೀತಾಗಲಿದೆ. ಇಲ್ಲೂ ಅಷ್ಟೇ ಅಶೋಕ್ ಅವರು ದೊಡ್ಡ ಸಂಖ್ಯೆಯಲ್ಲಿ ಮತಗಳನ್ನು ಪಡೆಯದೇ ಹೋದರೆ ಭವಿಷ್ಯದಲ್ಲಿ ಅವರಿಗೂ ಪಕ್ಷ ಸೇವೆ ಅನಿವಾರ್ಯವಾಗಲಿದೆ. ಹೊಸಬರಿಗೆ ಅವರು ಕೂಡಾ ದಾರಿ ಮಾಡಿಕೊಡಬೇಕಾಗುತ್ತದೆ.
ಜೊತೆಗೆ ಕನಕಪುರದಲ್ಲಿ ಅಶೋಕ್ ಸ್ಪರ್ಧೆಯಿಂದ ಡಿಕೆಶಿಯವರು ಕೂಡಾ ಒತ್ತಡಕ್ಕೆ ಸಿಲುಕುತ್ತಾರೆ. ಒಕ್ಕಲಿಗ ಮತ ಬ್ಯಾಂಕ್ ಭದ್ರಗೊಳಿಸಲು ಅವರು ಕನಕಪುರದಲ್ಲೇ ಮೊಕ್ಕಾಂ ಹೂಡಬೇಕಾಗುತ್ತದೆ. ಆಗ ರಾಜ್ಯದಲ್ಲಿ ಪ್ರವಾಸ ಕಷ್ಟವಾಗುತ್ತದೆ. ಬಿಜೆಪಿಯ ಈ ಪ್ಲ್ಯಾನ್ ಅರಿತಿರುವ ಕಾಂಗ್ರೆಸ್ ಇದೀಗ ಪದ್ಮನಾಭನಗರದಲ್ಲಿ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಅವರನ್ನು ಕಣಕ್ಕಿಳಿಸಲು ಚಿಂತಿಸಿದೆ. ಈಗಾಗಲೇ ಆ ಕ್ಷೇತ್ರಕ್ಕೆ ರಘುನಾಥ್ ನಾಯ್ಡು ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ. ಒಂದ್ಸಲ ಟಿಕೆಟ್ ಘೋಷಿಸಿ ಮತ್ತೆ ಹಿಂದಕ್ಕೆ ಪಡೆಯಲು ಕಾಂಗ್ರೆಸ್ ಒಲವು ತೋರಿಸುತ್ತಾ…?
Discussion about this post