ಜೂಜಾಡುವ ಅಧಿಕಾರಿಗಳಿಂದ ಅದ್ಯಾವ ನ್ಯಾಯ ನಿರೀಕ್ಷಿಸಲು ಸಾಧ್ಯ. ಈ ದರಿದ್ರಗಳನ್ನು ಇನ್ನೆಷ್ಟು ದಿನ ಸಹಿಸಿಕೊಳ್ಳಬೇಕು ( Saipura bagh palace)
ಜೈಪುರ : ಕರ್ನಾಟಕದ ಮಾನ ಮರ್ಯಾದೆಯನ್ನು ಸರ್ಕಾರಿ ಅಧಿಕಾರಿಗಳು ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದಾರೆ. ಮಹಿಳೆಯರನ್ನೂ ಕಟ್ಟಿಕೊಂಡು ಜೂಜಾಡಲು ತೆರಳಿದ್ದ ಅಧಿಕಾರಿಗಳು ಇದೀಗ ಕರುನಾಡಿನ ಹೆಸರಿಗೆ ಮಸಿ ಬಳಿದಿದ್ದಾರೆ. ( Saipura bagh palace)
ಇದನ್ನೂ ಓದಿ : Agriculture : ತೋಟಕ್ಕೆ ವಿಷ ಸುರಿಯುತ್ತೀರಾ…ಕ್ಯಾನ್ಸರ್ ನಿಮ್ಮ ಮನೆಯಂಗಳಕ್ಕೆ ತಲುಪಿದೆ ಅಂದುಕೊಳ್ಳಿ
ರಾಜಸ್ಥಾನದ ಜೈಸಿಂಗಾಪುರ್ ಖೋರ್ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಇಲ್ಲಿನ ಸಾಯಿಪುರ ಭಾಗ್ ಪ್ಯಾಲೇಸ್ ನಲ್ಲಿ ಅಕ್ರಮವಾಗಿ ಜೂಜು ಅಡ್ಡೆ ನಡೆಸಲಾಗುತ್ತಿದೆ ಅನ್ನುವ ಮಾಹಿತಿ ಹಿನ್ನಲೆಯಲ್ಲಿ ಸ್ಥಳೀಯ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಬೆಂಗಳೂರಿನ ತಹಶೀಲ್ದಾರ್ ನಾಥ್, ಕರ್ನಾಟಕ ಪೊಲೀಸ್ ಇಲಾಖೆಯ ಇನ್ಸ್ ಪೆಕ್ಟರ್ ಅಂಜಯ್ಯ, ಮತ್ತು ಪೊಫ್ರೆಸರ್ ಕೆ ಎಲ್ ರಮೇಶ್ ಸೇರಿದಂತೆ 13 ಮಹಿಳೆಯರೂ ಸೇರಿ 84 ಮಂದಿಯನ್ನು ಬಂಧಿಸಿದ್ದಾರೆ.
ಶನಿವಾರ ರಾತ್ರಿ ಈ ಕಾರ್ಯಾಚರಣೆ ನಡೆದಿದ್ದು, ಅಡ್ಡೆಯಿಂದ 9 ಹುಕ್ಕಾ, 14 IMFL ಬಾಟಲ್ ಗಳು, 14 ಐಷಾರಾಮಿ ಕಾರು, ಒಂದು ಟ್ರಕ್ ಮತ್ತು 23.78 ಲಕ್ಷ ರೂ ನಗದು ವಶಪಡಿಸಿಕೊಳ್ಳಲಾಗಿದೆ.
ಬಂಧಿತರ ಪೈಕಿ ಹೆಚ್ಚಿನವರು ಕರ್ನಾಟಕದವರಾಗಿದ್ದು, ಜೊತೆಗಿ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಮಹಾರಾಷ್ಟ್ರಗಳಿಗೆ ಸೇರಿದವರು ಎಂದು ಜೈಪುರ ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕದಿಂದ ಜೂಜಾಡುವ ಸಲುವಾಗಿ ತಹಶೀಲ್ದಾರ್, ಇನ್ಸ್ ಪೆಕ್ಟರ್ ತೆರಳಿದ್ದಾರೆ ಅಂದ್ರೆ ಇಲ್ಲಿ ಅದೆಷ್ಟು ಲಂಚ ತಿಂದಿರಬೇಡ ಇವರು. ನ್ಯಾಯಯುತ ಮಾರ್ಗದಲ್ಲಿ ಇವರು ನೇಮಕವಾಗಿರುವ ಸಾಧ್ಯತೆಗಳು ಕೂಡಾ ಇಲ್ಲ. ಅದ್ಯಾವುದೋ ಅಡ್ಡ ದಾರಿಯಲ್ಲೇ ಕೆಲಸ ಗಿಟ್ಟಿಸಿಕೊಂಡಿರುತ್ತಾರೆ. ಹೀಗಾಗಿಯೇ ಅಡ್ಡ ದಾರಿಯ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ.
Discussion about this post