ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಉಪೇಂದ್ರ ಹಾಗೂ ಆರ್ ಚಂದ್ರು ಜೋಡಿಯ ‘ಐ ಲವ್ ಯು’ ಸಿನಿಮಾದಲ್ಲಿ ನಟಿ ರಚಿತಾ ರಾಮ್ ನಿರೀಕ್ಷೆಗೂ ಮೀರಿ ಹಾಟ್ ಆಗಿ ಕಾಣಿಸಿಕೊಂಡಿದ್ದರು.
ಇದು ಸಾಕಷ್ಟು ದೊಡ್ಡ ಸುದ್ದಿಯೂ ಆಗಿತ್ತು. ಜೊತೆಗೆ ಈ ಬಗ್ಗೆ ಪಶ್ಚಾತ್ತಾಪ ಪಟ್ಟು ಕಣ್ಣೀರಿಟ್ಟಿರುವ ರಚಿತಾ ಇನ್ನೆಂದೂ ಅಷ್ಟು ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಅಂದಿದ್ದಾರೆ.
ಜೊತೆಗೆ ಉಪೇಂದ್ರ ಅವರು ಕೂಡಾ ರಚಿತಾ ಬಗ್ಗೆ ಗರಂ ಆಗಿದ್ದು, ಗೊತ್ತಿದ್ದ ಮೇಲೆ ನಟಿಸಬಾರದಿತ್ತು ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಈ ಎಲ್ಲದರ ನಡುವೆ ರಚಿತಾ ಹೊಸದೊಂದು ಚಿತ್ರಕ್ಕೆ ಸಹಿ ಹಾಕಿದ್ದು, ನಾಗೇಶೇಖರ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ.
ನಾಗಶೇಖರ್ ನಿರ್ದೇಶನದ ‘ಸಂಜಯ್ ಅಲಿಯಾಸ್ ಸಂಜು’ ಸಿನಿಮಾಗೆ ರಚಿತಾ ನಾಯಕಿಯಾಗಿ ಆಯ್ಕೆಯಾಗಿದ್ದು,ರಚಿತಾ ಎದುರು ನಟಿಸಲು ನಾಯಕನಿಗಾಗಿ ಹುಡುಕಾಟ ನಡೆದಿದೆಯಂತೆ. ಸಂಜುಗೆ ಹೊಂದಿಕೆಯಾಗಲ್ಲ ಸಂಜಯ್ ಯಾರು ಅನ್ನುವುದು ಇನ್ನೂ ಡಿಸೈಡ್ ಆಗಿಲ್ಲ.
ಸದ್ಯ ನಾಗಶೇಖರ್ ಅಭಿಷೇಕ್ ಅಂಬರೀಷ್ ನಾಯಕತ್ವದ ‘ಅಮರ್’ ಸಿನಿಮಾ ಮುಗಿಸಿದ್ದು, ಬಾಲಿವುಡ್ ಕಡೆ ಮುಖ ಮಾಡಿದ್ದಾರೆ.
ಖ್ಯಾತ ನಿರ್ಮಾಪಕ ಜೋಗಿಂದರ್ ಸಿಂಗ್ ಅವರ ಪುತ್ರ ಭವೀಶ್ ಅವರಿಗೆ ನಾಗಶೇಖರ್ ಚಿತ್ರ ನಿರ್ದೇಶನ ಮಾಡುತ್ತಿದ್ದು, ಕನ್ನಡದ ‘ಮೈನಾ’ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡುತ್ತಿದ್ದಾರೆ.
ಈ ಪ್ರಾಜೆಕ್ಟ್ ಬಳಿಕ ‘ಸಂಜಯ್ ಅಲಿಯಾಸ್ ಸಂಜು’ ಸಿನಿಮಾ ಪ್ರಾರಂಭವಾಗಲಿದೆ.
Discussion about this post