ಮುಂಬೈ : ಭಾರತೀಯ ಚಿತ್ರರಂಗದಲ್ಲಿ ತನ್ನೇ ಆದ ಛಾಪು ಮೂಡಿಸಿರುವ ಕಂಗನಾ ರಣಾವಾತ್ ಈಗಾಗಲೇ ಪದ್ಮ ಪುರಸ್ಕಾರ ಪಡೆದ ಖುಷಿಯಲ್ಲಿದ್ದಾರೆ. ಬಾಲಿವುಡ್ ಲಾಬಿಯ ನಡುವೆ ಒಬ್ಬ ಹೆಣ್ಣು ಮಗಳಾಗಿ ಕಂಗನಾ ಮಾಡಿರುವ ಸಾಧನೆ ಕಡಿಮೆಯೇನಲ್ಲ. ಸ್ಟಾರ್ ನಟರೆಂದು ಕರೆಸಿಕೊಂಡವರ ಮಕ್ಕಳನ್ನು ಬೆಳೆಸಲು ಬಾಲಿವುಡ್ ನ ಸ್ಟಾರ್ ನಿರ್ದೇಶಕರಿದ್ದಾರೆ. ಆದರೆ ಕಂಗನಾ ಹಾಗೇ ಬೆಳೆದಿಲ್ಲ. ಮಾತ್ರವಲ್ಲದೆ ಕಂಗನಾ ಅವರಿಗೆ ಅವಕಾಶಗಳು ಸಿಗಬಾರದೆಂದು ಮಾಡಿದ ಪ್ರಯತ್ನಗಳನ್ನು ಮೆಟ್ಟಿ ನಿಂತ ಅವರ ಹೋರಾಟ ನಿಜಕ್ಕೂ ಪ್ರಶಸ್ತಿ ಅರ್ಹ ಅನ್ನುವುದರಲ್ಲಿ ಎರಡು ಮಾತಿಲ್ಲ.
ಈ ನಡುವೆ ಕಂಗನಾ ತಮ್ಮ ಭವಿಷ್ಯದ ಕನಸುಗಳನ್ನು ತೆರೆದಿಟ್ಟಿದ್ದು, ನಾನು ಪ್ರೀತಿಯಲ್ಲಿದ್ದೇನೆ, you will know soon ಅಂದಿದ್ದಾರೆ. ಟೈಮ್ಸ್ ನೌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ 5 ವರ್ಷಗಳಲ್ಲಿ ನಾನು ಒಳ್ಳೆ ಪತ್ನಿಯಾಗಿ, ಒಳ್ಳೆ ತಾಯಿಯಾಗಿ ಹೊಸ ಭಾರತದ ನಿರ್ಮಾಣದಲ್ಲಿ ತೊಡಗಿಕೊಳ್ಳುತ್ತೇನೆ ಅಂದಿದ್ದಾರೆ.
ಹಾಗಂತ ತಾವು ಯಾರ ಜೊತೆ ಪ್ರೀತಿಯಲ್ಲಿದ್ದೇನೆ ಅನ್ನುವುದನ್ನು ಬಹಿರಂಗಪಡಿಸಿಲ್ಲ.
Discussion about this post