ಪ್ರಚಾರಕ್ಕಾಗಿ ಸೆಲೆಬ್ರೆಟಿಗಳು ಏನು ಬೇಕಾದ್ರೂ ಮಾಡ್ತಾರೆ. ಇದೀಗ ಬೆತ್ತಲೆ ಫೋಟೋ ಟ್ರೆಂಡ್ ಆಗಿದೆ – Jwala gutta
ಅದೊಂದು ಕಾಲವಿತ್ತು, ಮಾರುಕಟ್ಟೆ ಕಳೆದುಕೊಂಡ ಸೆಲೆಬ್ರೆಟಿಗಳು ಬೆತ್ತಲೆ ಫೋಟೋ ಸದ್ದು ಮಾಡ್ತಾ ಇದ್ರು. ಚಲಾವಣೆಯಲ್ಲಿ ಇಲ್ಲದ ನಾಣ್ಯ ಅಂದುಕೊಳ್ಳುವ ಬದಲು ಹೀಗಾದ್ರೂ ಸುದ್ದಿಯಲ್ಲಿರಬಹುದಲ್ಲ ಅನ್ನುವುದು ಅವರ ನಿರ್ಧಾರವಾಗಿತ್ತು.Jwala gutta
ಇದೀಗ ಕೆಲ ಸೆಲೆಬ್ರೆಟಿಗಳು ಬೆತ್ತಲೆ ಪೋಟೋ ಶೂಟ್ ಮೂಲಕ ಸುದ್ದಿ ಮಾಡಲಾರಂಭಿಸಿದ್ದಾರೆ. ಕೆಲ ದಿನಗಳ ಹಿಂದೆ ಬಾಲಿವುಡ್ ನಟ ರಣವೀರ್ ಸಿಂಗ್ ಸುದ್ದಿಯಾಗಿದ್ದರು. ಇದೀಗ ಮತ್ತೊಬ್ಬ ನಟ ರಣವೀರ್ ಹಾದಿ ತುಳಿದಿದ್ದಾರೆ. ( Jwala gutta)
ಇದನ್ನು ಓದಿ : bengaluru rowdies : ಉಚ್ಚೆ ಹೊಯ್ಯುವ ವಿಚಾರಕ್ಕೆ ಬಾರ್ ನಲ್ಲಿ ಕಿತ್ತಾಡಿಕೊಂಡ ಎರಡು ರೌಡಿ ಗ್ಯಾಂಗ್
ತಮಿಳು ನಟ ವಿಷ್ಣು ವಿಶಾಲ್ ಇದೀಗ ಬೆತ್ತಲೆ ಪೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿ ರಣವೀರ್ ಮ್ಯಾಗಜೀನ್ ಸಲುವಾಗಿ ಬೆತ್ತಲೆಯಾಗಿದ್ದರು. ಇಲ್ಲಿ ಕಾರಣವೇನು ಅನ್ನುವುದು ಗೊತ್ತಿಲ್ಲ. ಆದರೆ ವಿಷ್ಣು ಅವರ ಬೆತ್ತಲೆ ಫೋಟೋಗಳನ್ನು ಅವರ ಪತ್ನಿ ಹಾಗೂ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿರುವ ಜ್ವಾಲಾ ಗುಟ್ಟಾ (Jwala gutta) ಅವರೇ ಸೆರೆ ಹಿಡಿದಿದ್ದಾರಂತೆ.
ಇದನ್ನು ಓದಿ : xi jinping – ಇಸ್ಲಾಂ ಧರ್ಮ ಚೀನಾದಲ್ಲಿ ಚೀನೀ ದೃಷ್ಟಿಕೋನಕ್ಕೆ ಬದ್ಧವಾಗಿರಬೇಕು
ಈ ಬಗ್ಗೆ ಟ್ವೀಟರ್ ನಲ್ಲಿ ಬರೆದುಕೊಂಡಿರುವ ವಿಷ್ಣು, ನಾನು ಕೂಡಾ ರಣವೀರ್ ಸೃಷ್ಟಿಸಿದ ಟ್ರೆಂಡ್ ಸೇರಿದ್ದೇನೆ. ಜೊತೆಗೆ ಪತ್ನಿಯೇ ಛಾಯಾಗ್ರಾಹಕಿ ಅನ್ನುವುದನ್ನು ಸ್ಪೆಷಲ್ ಆಗಿ ತಿಳಿಸಿದ್ದಾರೆ. ಹಾಗಾದ್ರೆ ಸೆಲೆಬ್ರೆಟಿಗಳಿಗೆ ಈ ಬೆತ್ತಲಾಗುವ ಹುಚ್ಚು ಹಿಡಿದಿದ್ದು ಯಾಕೆ, ಸಮಾಜಕ್ಕೆ ಆದ್ಯಾವ ಸಂದೇಶ ಕಳುಹಿಸಲು ಇವರು ಬಯಸಿದ್ದಾರೆ ಅನ್ನುವುದೇ ಅರ್ಥವಾಗುತ್ತಿಲ್ಲ.
ಹಸೆಮಣೆ ಏರಲು ಸಜ್ಜಾದ ಬಿಗ್ ಬಾಸ್ ಮನೆಯ ಮಾರ್ಡನ್ ರೈತ ಶಶಿಕುಮಾರ್
ಬಿಗ್ ಬಾಸ್ ಸೀಸನ್ 6ರಲ್ಲಿ ಸ್ಪರ್ಧಿಯಾಗಿದ್ದ ಶಶಿಕುಮಾರ್, ತಮ್ಮ ಸಹ ಸ್ಪರ್ಧಿಯೊಬ್ಬರನ್ನು ವಿವಾಹವಾಗುತ್ತಾರೆ ಅನ್ನಲಾಗಿತ್ತು. ಆದರೆ ಅವರು ಮತ್ತೊಬ್ಬರ ಕೈ ಹಿಡಿದಿದ್ದಾರೆ.
ಬೆಂಗಳೂರು : ಕನ್ನಡ ಬಿಗ್ ಬಾಸ್ ಸೀಸನ್ 6ರ ಮೂಲಕ ಸಮಾಜಕ್ಕೆ ಪರಿಚಯವಾದ ರೈತ ಪ್ರತಿಭೆ ಶಶಿಕುಮಾರ್ ಇದೀಗ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.
ಬಿಗ್ ಬಾಸ್ ಮನೆಯ ಮೂಲಕ ಮಾರ್ಡನ್ ರೈತ ಎಂದೇ ಪ್ರಸಿದ್ಧರಾಗಿರುವ ಶಶಿಕುಮಾರ್ ಆಗಸ್ಟ್ 6 ಮತ್ತು ಆಗಸ್ಟ್ 7 ರಂದು ಬೆಂಗಳೂರಿನಲ್ಲಿ ಹಸೆಮಣೆ ಏರಲಿದ್ದಾರೆ. ದೊಡ್ಡಬಳ್ಳಾಪುರದ ಸ್ವಾತಿ ಅನ್ನುವವರೊಂದಿಗೆ ಶಶಿಕುಮಾರ್ ವಿವಾಹ ನೆರವೇರಲಿದೆ.
ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲಕ ಶಶಿಕುಮಾರ್ ಜಿಕೆವಿಕೆ ಕೃಷಿ ವಿವಿಯಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದು, ಕೃಷಿಯೊಂದಿಗೆ, ಕೃಷಿಗೆ ಸಂಬಂಧಿಸಿದ ವ್ಯವಹಾರವೊಂದನ್ನು ನಡೆಸುತ್ತಿದ್ದಾರೆ. ಜೊತೆಗೆ ಮೆಹಬೂಬಾ ಸಿನಿಮಾ ಮೂಲಕ ಚಂದನವನದಲ್ಲಿ ಅದೃಷ್ಟ ಪರೀಕ್ಷೆಗೆ ಶಶಿಕುಮಾರ್ ಮುಂದಾಗಿದ್ದಾರೆ.
ಇನ್ನು ಶಶಿಕುಮಾರ್ ಮದುವೆಯಾಗಲಿರುವ ಹುಡುಗಿ ಸ್ವಾತಿ ಇತ್ತೀಚೆಗಷ್ಟೇ ಯುಪಿಎಸ್ಸಿ ಪ್ರಿಲಿಮ್ಸ್ ಪಾಸ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
Discussion about this post