ಬೆಂಗಳೂರಿನ ಶ್ರೀ ವೆಂಕಟೇಶ್ವರ ಗ್ರೂಪ್ ಕಂಪೆನಿಯ ಮೇನಕಾ ಫುಡ್ಸ್ ಫ್ಯಾಮಿಲಿ ರೆಸ್ಟೋರೆಂಟ್ ಬೆಂಗಳೂರಿನ ಜಯನಗರದಲ್ಲಿ ಪ್ರಾರಂಭಗೊಂಡಿದೆ.
ಬೆಂಗಳೂರಿನ ಜಯನಗರದ ಮೂರನೇ ಬ್ಲಾಕ್ ನಲ್ಲಿ ರೆಸ್ಟೋರೆಂಟ್ ಆರಂಭವಾಗಿದ್ದು, ವಿನೂತನ ಕೊಡುಗೆ ಮತ್ತು ವಿಶೇಷ ರಿಯಾಯಿತಿ ಮೂಲಕ ಆಂಧ್ರ ಸ್ಟೈಲ್ ಮತ್ತು ಹೈದ್ರಬಾದಿ ಬಿರಿಯಾನಿಯನ್ನು ಬೆಂಗಳೂರಿಗರಿಗೆ ಉಣಬಡಿಸಲಿದೆ.
ಹೋಟೆಲ್ ಉದ್ಯಮದ ಇತಿಹಾಸದಲ್ಲೇ ವಿನೂತನ ಕೊಡುಗೆ ಹಾಗೂ ವಿಶೇಷ ರಿಯಾಯಿತಿಯನ್ನು ನೀಡಿರುವ ಮೇನಕಾ ಫುಡ್ಸ್ ಫ್ಯಾಮಿಲಿ ರೆಸ್ಟೋರೆಂಟ್ ಶುಚಿ ಮತ್ತು ರುಚಿಗೆ ಹೆಚ್ಚಿನ ಮಹತ್ವ ನೀಡಿದೆ. ಆಂಧ್ರ ಸ್ಟೈಲ್ ಮತ್ತು ಹೈದ್ರಬಾದಿ ಬಿರಿಯಾನಿ ತಿನ್ನುವುದರ ಜೊತೆಗೆ ಬಂಪರ್ ಬಹುಮಾನವನ್ನು ಗೆಲ್ಲಬಹುದಾಗಿದೆ.
ನಾನ್ ವೆಜ್ ಪ್ರಿಯರಿಗೆ ಜಯನಗರದಲ್ಲೊಂದು ಸ್ಪೆಷಲ್ ಹೋಟೆಲ್
250 ರೂಪಾಯಿ ಬಿಲ್ ಮಾಡುವ ಗ್ರಾಹಕರು ಮಾರುತಿ ಆಲ್ಟೋ ಕಾರು ಗೆಲ್ಲಬಹುದಾಗಿದೆ. ಈ ಕೊಡುಗೆ ಮಾರ್ಚ್ 20,20202ವರೆಗೆ ಇರಲಿದೆ. ಹಾಗೇ ಶುಭಾರಂಭದ ಕೊಡುಗೆಯಾಗಿ ಪ್ರತಿ ಖಾದ್ಯಕ್ಕೆ 100 ರೂಪಾಯಿಯ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ಕೊಡುಗೆ ಫೆಬ್ರವರಿ 9ರವರೆಗೆ ಮಾತ್ರ ಅನ್ವಯವಾಗಲಿದೆ.
ಮುಂದಿನ ದಿನಗಳಲ್ಲಿ ಚೆನ್ನೈ, ಪುಣೆ, ಮುಂಬೈ, ದೆಹಲಿ, ಸಿಂಗಾಪುರ, ದುಬೈ, ಕೌಲಲಾಂಪುರ, ಬ್ಯಾಂಕಾಂಕ್ ಮತ್ತು ಹಾಂಕಾಂಗ್ ನಲ್ಲಿ ಮೇನಕಾ ಫುಡ್ಸ್ ಫ್ಯಾಮಿಲಿ ರೆಸ್ಟೋರೆಂಟ್ ನ ಆಂಧ್ರ ಮತ್ತು ಹೈದ್ರಬಾದ್ ಬಿರಿಯಾನಿಯ ಸುವಾಸನೆ ಘಮಘಮಿಸಲಿದೆ.
ಇನ್ನು ಮೇನಕಾ ಫುಡ್ಸ್ ಫ್ಯಾಮಿಲಿ ರೆಸ್ಟೋರೆಂಟ್ ಅನ್ನು ರಾಜ್ಯ ಪ್ರಶಸ್ತಿ ವಿಜೇತ ನಟ ಹಾಗೂ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರು ಉದ್ಘಾಟಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶ್ರೀ ವೆಂಕಟೇಶ್ವರ ಗ್ರೂಪ್ ಕಂಪೆನಿಯ ನಿರ್ದೇಕರಾದ ಎಸ್.ಜಿ. ಪ್ರಕಾಶ್ ರಾವ್ ಸೇಥಿ, ಪಿ. ನೀತಾ ಸೇಥಿ, ಅನೂಪ್ ಕುಮಾರ್, ಎಸ್. ಶೇಷಾದ್ರಿ ಜೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Discussion about this post