ಮಾರುಕಟ್ಟೆಯ ತುಪ್ಪ ಖರೀದಿಸುವ ಮುನ್ನ ಅಸಲಿ ನಕಲಿಯ ವ್ಯತ್ಯಾಸ ತಿಳಿದುಕೊಳ್ಳಿ ( Benefits of ghee)
ಭಾರತೀಯರ ಅಡುಗೆಯಲ್ಲಿ ತುಪ್ಪ ಅವಿಭಾಜ್ಯ ಅಂಗವಾಗಿದೆ. ತುಪ್ಪದ ಮಹತ್ವ ನಮ್ಮ ಅಜ್ಜಿಯಂದಿರಿಗೆ ಚೆನ್ನಾಗಿ ತಿಳಿದಿತ್ತು. ಹೀಗಾಗಿ ಮುಂದಿನ ತಲೆಮಾರನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ತುಪ್ಪ ಬಳಸುತ್ತಿದ್ರು. ಅದು ಕೂಡಾ ಮನೆಯಲ್ಲೇ ಮಾಡಿದ ದೇಶಿ ದನದ ತುಪ್ಪ. ಆದರ ಈಗ ಜಾಹೀರಾತು ಯುಗದಲ್ಲಿ ಮರಳು ಮರಳಾಗಿರುವ ತುಪ್ಪದ ಮೊರೆ ಹೋಗಿದ್ದೇವೆ. ( Benefits of ghee) ಅಸಲಿ ತುಪ್ಪಕ್ಕಿಂತ ಹೆಚ್ಚು ನಕಲಿ ತುಪ್ಪಗಳೇ ಮಾರುಕಟ್ಟೆಯಲ್ಲಿದೆ.
ಅಷ್ಟೇ ಯಾಕೆ ಆರೋಗ್ಯ ಕಾಪಾಡಲು ಆಹಾರ ಪದ್ದತಿಯಲ್ಲಿ ಅಳವಡಿಸಿಕೊಂಡಿದ್ದ ತುಪ್ಪದ ಬಗ್ಗೆ ಈಗ ಬಹುತೇಕರಿಗೆ ಭಯಲೇ ಹೆಚ್ಚು. ತುಪ್ಪ ತಿಂದರೆ ದಪ್ಪಗಾಗುವ ಭಯ ಅನೇಕರಲ್ಲಿದೆ. ಹೌದು ಭಾರೀ ಪ್ರಮಾಣದಲ್ಲಿ ತುಪ್ಪ ಸೇವಿಸುವುದು ಅಪಾಯ, ಅತಿಯಾದರೆ ಅಮೃತವೂ ವಿಷ ತಾನೇ.
ಹಾಗಾದ್ರೆ ತುಪ್ಪ ತಿನ್ನುವುದರಿಂದ ಆಗುವ ಪ್ರಯೋಜನಗಳೇನು..?
- ಎದೆ ಉರಿಯ ಸಮಸ್ಯೆಯಿಂದ ಬಳಲುತ್ತಿರುವವರು ಊಟಕ್ಕೆ ತುಪ್ಪವನ್ನು ಮಿಶ್ರ ಮಾಡಿ ತೆಗೆದುಕೊಂಡರೆ ಎದೆಯುರಿ ಸಮಸ್ಯೆ ಮಾಯವಾಗುತ್ತದೆ.
- ಯಾರಿಗೆ ಡೈರಿ ಪದಾರ್ಥಗಳು ಅಲರ್ಜಿಯೂ ಅವರು ತುಪ್ಪ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಹಾಲು, ಬೆಣ್ಣೆ, ಮೊಸರು ಮಜ್ಜಿಗೆಯ ಸೇವನೆ ಮಾಡದ ಮಂದಿ ತುಪ್ಪ ಸೇವಿಸಲೇಬೇಕು. ತುಪ್ಪದಲ್ಲಿ ಅಲರ್ಜಿ ಉಂಟು ಮಾಡುವ ಅಂಶಗಳು ಇರೋದಿಲ್ಲ
- ಸ್ನಾಯುಗಳಿಗೆ ಮತ್ತು ಕೀಲುಗಳಿಗೆ ಬೇಕಾದ ಪೋಷಕಾಂಶಗಳನ್ನು ತುಪ್ಪ ಒದಗಿಸಿತ್ತದೆ. ಹೀಗಾಗಿ ಸ್ನಾಯು ಮತ್ತು ಕಾಲುಗಳು ಬಲಗೊಳ್ಳುತ್ತದೆ. ಅಲ್ಲಿನ ನೋವನ್ನೂ ಶಮನಗೊಳಿಸುತ್ತದೆ
- ದೇಹದಲ್ಲಿ ಅಧಿಕವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಿ, ಉತ್ತಮ ಕೊಲೆಸ್ಟ್ರಾಲ್ ಒದಗಿಸುವಲ್ಲಿ ತುಪ್ಪ ಪ್ರಮುಖ ಪಾತ್ರ ವಹಿಸುತ್ತದೆ.
- ನಿಯಮಿತವಾದ ತುಪ್ಪ ಸೇವನೆಯಿಂದ ಹೃದಯವೂ ಸಂತೋಷವಾಗಿರುತ್ತದೆ.
- ರೋಗ ನಿರೋಧಕ ಶಕ್ತಿ ಹೆಚ್ಚಿಸುವ ತಾಕತ್ತು ತುಪ್ಪಕ್ಕಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ತುಪ್ಪ ಮಾಡುತ್ತದೆ. ಬೆಳೆಯುವ ಮಕ್ಕಳಿಗೆ ನೀಡುವ ಆಹಾರದಲ್ಲಿ ತುಪ್ಪವನ್ನು ಬಳಸುವುದರಿಂದ ಅವರ ರೋಗನಿರೋಧಕ ಶಕ್ತಿ ಹೆಚ್ಚಾಗಿ ಕಾಯಿಲೆ ಬೀಳುವ ಸಂಭವ ಕಡಿಮೆಯಾಗುತ್ತದೆ.
- ಜೇನುತುಪ್ಪದೊಂದಿಗೆ ಬೆರೆಸಿದ ತುಪ್ಪ, ಗಾಯಗಳು ಮತ್ತು ಕೀವುಗುಳ್ಳೆಗಳಿಗೆ ಶಮನಕಾರಕವಾಗಿ ಕಾರ್ಯ ನಿರ್ವಹಿಸುತ್ತದೆ.
- ಸುಟ್ಟ ಗಾಯಗಳಿಗೂ ತಕ್ಷಣ ತುಪ್ಪವನ್ನು ಸವರುವ ಮೂಲಕ ಉರಿ ಕಡಿಮೆಯಾಗುತ್ತದೆ ಹಾಗೂ ಹೊಸ ಚರ್ಮ ಬೆಳೆಯಲು ನೆರವಾಗುತ್ತದೆ.
- ತುಪ್ಪದ ನಿಯಮಿತ ಸೇವನೆಯಿಂದ ದೇಹದ ರಸದೂತಗಳ ಮಟ್ಟ ಸಮತೋಲನದಲ್ಲಿ ಇರಲು ಸಾಧ್ಯವಾಗುತ್ತದೆ.
- ಕೊಬ್ಬಿನಲ್ಲಿ ಕರಗುವ ವಿಟಮಿನ್ನುಗಳೂ ತುಪ್ಪದಲ್ಲಿ ಹೇರಳವಾಗಿವೆ.
- ಮುಖ್ಯವಾಗಿ ಒಮೆಗಾ -3 ಕೊಬ್ಬಿನಾಮ್ಲ ತುಪ್ಪದಲ್ಲಿ ಸಮೃದ್ಧವಾಗಿದೆ. ನರಮಂಡಲದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಆಯುರ್ವೇದ ಔಷಧಿಯ ರೂಪದಲ್ಲಿ ಬಳಸಬಹುದು
ಇದನ್ನು ಓದಿ : cracked heels : ಅಡುಗೆ ಮನೆಯೇ ಆಸ್ಪತ್ರೆ : ಹಿಮ್ಮಡಿ ಬಿರುಕಿಗೆ ಸಿಂಪಲ್ ಪರಿಹಾರ
Discussion about this post