ಜನತೆಯ ರಾಜ್ಯಪಾಲ ಎಂದೇ ಗುರುತಿಸಿಕೊಂಡಿರುವ ಜಗದೀಪ್ ಧನ್ಖರ್ ( jagdeep dhankhar vice president ) ಇದೀಗ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಲಿದ್ದಾರೆ
ನವದೆಹಲಿ : ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ NDA ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಲದ ರಾಜ್ಯಪಾಲ ಜಗದೀಪ್ ಧನ್ಖರ್ ( jagdeep dhankhar vice president ) ಆಯ್ಕೆಯಾಗಿದ್ದಾರೆ. ನವದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜುಲೈ 19 ಕೊನೆಯ ದಿನವಾಗಿದೆ. ಆಗಸ್ಟ್ 6 ರಂದು ಚುನಾವಣೆ ನಡೆಯಲಿದೆ. ಇಂದು ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜಗದೀಪ್ ಧನ್ಖರ್ ಹೆಸರನ್ನು ಪ್ರಕಟಿಸಿದ್ದಾರೆ. ( Jagdeep Dhankhar is NDA’s candidate for Vice President )
ಇದನ್ನೂ ಓದಿ : TRP ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದ ಕುಮಾರಸ್ವಾಮಿ ಒಡೆತನದ ಕಸ್ತೂರಿ ನ್ಯೂಸ್
ಯಾರು ಜಗದೀಪ್ ಧನ್ಖರ್..?
1989ರಲ್ಲಿ ಜುಂಜುನು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅವರು ಚೊಚ್ಚಲ ಪ್ರಯತ್ನದಲ್ಲೇ ಆಯ್ಕೆಯಾಗಿದ್ದರು. ಆಗ ಅವರು ಜನತಾದಳ ಪಕ್ಷದಲ್ಲಿದ್ದರು. ಬಳಿಕ 1990ರಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1993ರಲ್ಲಿ ಅಜ್ಮೀರ್ ನ ಕಿಶನ್ ಗಢ್ ಕ್ಷೇತ್ರದಿಂದ ಸ್ಪರ್ಧಿಸಿ ರಾಜಸ್ಥಾನ ವಿಧಾನಸಭೆ ಪ್ರವೇಶಿಸಿದ್ದರು.ಈ ನಡುವೆ ಸುಪ್ರೀಂಕೋರ್ಟ್ ನ ಹಿರಿಯ ವಕೀಲರಾಗಿ ಗುರುತಿಸಿಕೊಂಡಿದ್ದ ಧನ್ಖರ್ 2003ರಲ್ಲಿ ಬಿಜೆಪಿ ಸೇರಿದ್ದರು.
ಜುಲೈ 2019ರಲ್ಲಿ ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು. ಅಲ್ಲಿ ಮಮತಾ ಬ್ಯಾನರ್ಜಿಯ ಅಬ್ಬರಕ್ಕೆ ಬ್ರೇಕ್ ಹಾಕುವಲ್ಲಿ ರಾಜ್ಯಪಾಲರು ಯಶಸ್ವಿಯಾಗಿದ್ದರು. ಮಾತ್ರವಲ್ಲದೆ ಪೀಪಲ್ಸ್ ಗವರ್ನರ್ ಆಗಿಯೂ ಗುರುತಿಸಿಕೊಂಡಿದ್ದರು.
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಆಗಸ್ಟ್ 10ರಂದು ಅಂತ್ಯಗೊಳ್ಳಲಿದೆ. ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 6ರಂದು ಚುನಾವಣೆ ನಡೆಯಲಿದೆ. ರಾಷ್ಟ್ರಪತಿ ಚುನಾವಣೆಗೆ ಜುಲೈ 18ರಂದು ಮತದಾನ ನಡೆಯಲಿದ್ದು, ಜುಲೈ 21ರಂದು ಫಲಿತಾಂಶ ಹೊರಬರಲಿದೆ.ಈಗಾಗಲೇ ಎನ್ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರು ಸ್ಪರ್ಧಿಸಿದ್ದರೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಕಣಕ್ಕಿಳಿದಿದ್ದಾರೆ.
ರೈಲು ಡಿಕ್ಕಿ ಹೊಡೆದು 96 ಕುರಿಗಳ ಸಾವು : ಮಳೆ ತಂದ ಆಪತ್ತು
ವಿಜಯಪುರ : ರೈಲು ಡಿಕ್ಕಿಯಾಗಿ 96 ಕುರಿಗಳು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ-ಕೊಡಗಿ ಮಧ್ಯೆ ನಡೆದಿದೆ. ಗದಗ ವಿಜಯಪುರ ರೈಲ್ವೆ ಮಾರ್ಗದಲ್ಲಿ ಈ ದುರ್ಘಟನೆ ನಡೆದಿದ್ದು, ಕುರಿಗಳ ಮಾಲೀಕ ಇದೀಗ ಕಂಗಲಾಗಿದ್ದಾನೆ.
ಶನಿವಾರ ಸಂಜೆ ಸಿಕ್ಕಾಪಟ್ಟೆ ಮಳೆ ಸುರಿಯುತ್ತಿದ್ದ ಕಾರಣ ಕುರಿಗಾರರು ಸೇತುವೆ ಕೆಳಗಡೆ ಮಳೆಯಿಂದ ರಕ್ಷಣೆ ಪಡೆಯುತ್ತಿದ್ದರು. ಈ ವೇಳೆ ರೈಲೊಂದು ಸಂಚರಿಸಿದ ನಂತರ ಕುರಿಗಳನ್ನು ಹಳಿ ದಾಟಿಸಲು ಮುಂದಾಗಿದ್ದಾರೆ. ಈ ವೇಳೆ ಮತ್ತೊಂದು ಹಳಿಯಲ್ಲಿ ಗದಗ – ಮುಂಬೈ ರೈಲು ಆಗಮಿಸಿದ ಕಾರಣ ಈ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ : Dharmasthala veerendra hegde : ಧರ್ಮಸ್ಥಳಕ್ಕೆ ಶಾಸನ ಸಭೆ ಹೊಸದಲ್ಲ : ವೀರೇಂದ್ರ ಹೆಗ್ಗಡೆ ತಂದೆ ತಾತ ಕೂಡಾ ಶಾಸಕರಾಗಿದ್ದರು
ರೈಲಿನ ವೇಗದ ರಭಸಕ್ಕೆ ಕುರಿಗಳ ದೇಹ ಛಿದ್ರ ಛಿದ್ರವಾಗಿದ್ದು ಹಳಿ ತುಂಬಾ ಕುರಿಗಳ ಮೃತ ದೇಹವೇ ಕಾಣಿಸುತ್ತಿತ್ತು. ಘಟನೆಯಲ್ಲಿ ಕೊಲ್ಹಾರ ತಾಲೂಕಿನ ಕಳೆವಾಡ ಗ್ರಾಮದ ಶಿವಪ್ಪ ಕಲ್ಲಪ್ಪ ಮೂಕನ್ನವರ 25 ಕುರಿ, ಚಂದ್ರ ಖರ್ಗೆಯವರಿಗೆ ಸೇರಿದ 43 ಕುರಿ ಹಾಗೂ ಶೇಖಪ್ಪ ಮೂಕನವರ ಮತ್ತು ಕಾಡಸಿದ್ದ ಮಲ್ಲಪ್ಪ ಅವರ 28 ಕುರಿಗಳು ಮೃತಪಟ್ಟಿದೆ.
Discussion about this post