ಮುಂಬೈ : ಪುತ್ರನ ಡ್ರಗ್ಸ್ ಪ್ರಕರಣದ ಬಗ್ಗೆ ಶಾರುಖ್ ಖಾನ್ ಕೂಡಾ ಇಷ್ಟೊಂದು ತಲೆ ಕೆಡಿಸಿಕೊಂಡಿರಲು ಸಾಧ್ಯವಿಲ್ಲ. ಆದರೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಮಾತ್ರ ಖಾನ್ ಗಿಂತ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ತಮ್ಮ ಸಚಿವಾಲಯದ ಕಡತ ಕಾರ್ಯಗಳ ಬಗ್ಗೆ ಇಷ್ಟೊಂದು ತಲೆ ಕೆಡಿಸಿಕೊಂಡಿದ್ರೆ ವಾಣಿಜ್ಯ ನಗರಿ ಉದ್ಧಾರವಾದ್ರು ಆಗಿರುತ್ತಿತ್ತು. ಸಚಿವಾಲಯದ ಕೆಲಸ ಮರೆತಿರುವ ನವಾಬ್ ದಿನಾ ಬೆಳಗಾದ್ರೆ ಸಮೀರ್ ವಾಖೆಂಡೆ ಜಪ ಶುರುವಿಟ್ಟುಕೊಳ್ತಾರೆ.
ಇದನ್ನೂ ಓದಿ : ಅಯ್ಯೋ ದೇವರೇ… ದೆಹಲಿಯಲ್ಲೂ ತಮ್ಮ ಬುದ್ದಿ ಬಿಡಲಿಲ್ಲ ಅಕ್ಷರ ಸಂತ ಹರೇಕಳ ಹಾಜಬ್ಬ
ಶಾರುಖ್ ಖಾನ್ ಪುತ್ರನ ಡ್ರಗ್ಸ್ ಪ್ರಕರಣದ ಸರಿ ತಪ್ಪುಗಳನ್ನು ತೀರ್ಮಾನಿಸಲು ನ್ಯಾಯಾಲಯವಿದ್ದರೂ, ನವಾಬ್ ಮಲಿಕ್ ಮಾತ್ರ ವಾಖೆಂಡೆ ಮೇಲೆ ಕೆಸರೆರಚುವುದನ್ನು ಮುಂದುವರಿಸಿದ್ದಾರೆ, ವಾಖೆಂಡೆ ಖಾಸಗಿ ವಿಚಾರಗಳನ್ನು ಕೆದಕುವ ಮೂಲಕ ತಮ್ಮ ಮುಖವಾಡ ಕಳಚಿರುವ ನವಾಬ್ ಮಲಿಕ್ ಇದೀಗ ವಾಖೆಂಡೆ ನಾದಿನಿ ವಿಚಾರ ಕೆದಕಿದ್ದಾರೆ.
ಇದನ್ನೂ ಓದಿ : ದಶಕಗಳ ವೈರತ್ವ ಮರೆತು ಭೇಟಿಯಾದ ಅನಂತ ಕುಮಾರ್ ಹೆಗಡೆ ಮತ್ತು ಅನಂದ್ ಅಸ್ನೋಟಿಕರ್
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಡ್ರಗ್ಸ್ ದಂಧೆಯಲ್ಲಿ ನಿಮ್ಮ ನಾದಿನಿಯೂ ಭಾಗಿಯಾಗಿದ್ದಾರೆಯೇ,’ಸಮೀರ್ ದಾವೂದ್ ವಾಂಖೆಡೆ ನಿಮ್ಮ ನಾದಿನಿ ಹರ್ಷದಾ ದಿನಾನಾಥ್ ರೆಡ್ಕರ್ ಅವರು ಡ್ರಗ್ಸ್ ವಹಿವಾಟಿನಲ್ಲಿ ತೊಡಗಿದ್ದಾರೆಯೇ. ಅವರ ವಿರುದ್ಧದ ಪ್ರಕರಣವೊಂದು ಪುಣೆ ನ್ಯಾಯಾಲಯದಲ್ಲಿದೆ. ಇದಕ್ಕೆ ನೀವು ಉತ್ತರಿಸಬೇಕು ಎಂದು ಪ್ರಕರಣದ ಬಗ್ಗೆ ದಾಖಲೆ ಕೊಟ್ಟಿದ್ದಾರೆ.
ಇದನ್ನೂ ಓದಿ : ಮಂಗಳೂರಿನಲ್ಲಿ ಮರಳು ತೆಗೆಯಲು ಅನುಮತಿ… ಆದರೆ ಷರತ್ತುಗಳು ಅನ್ವಯಿಸುತ್ತದೆ
ಆದರೆ ಇದಕ್ಕೆ ಖಡಕ್ಕ್ ಉತ್ತರ ಕೊಟ್ಟಿರುವ NCB ಅಧಿಕಾರಿಯೊಬ್ಬರು ಹರ್ಷದಾ ದಿನಾನಾಥ್ ರೆಡ್ಕರ್ ವಿರುದ್ಧ ಪ್ರಕರಣ ಜನವರಿ 2008ರಲ್ಲಿ ದಾಖಲಾಗಿದೆ. ಆದರೆ ವಾಂಖೆಡೆ ಸೇವೆಗೆ ಸೇರಿದ್ದು ಸೆಪ್ಟೆಂಬರ್ 2008. ಮಾತ್ರವಲ್ಲದೆ ಹರ್ಷದಾ ದಿನಾನಾಥ್ ರೆಡ್ಕರ್ ಅವರ ಸಹೋದರಿಯನ್ನು ವಾಂಖೆಡೆ ಮದುವೆಯಾಗಿದ್ದು 2017ರಲ್ಲಿ ಅನ್ನುವ ಮೂಲಕ ನವಾಬ್ ಮಲಿಕ್ ಗೆ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ : ಶಾಲಾ ಮಕ್ಕಳಿಗೆ ಸಿಹಿ ಸುದ್ದಿ : ಬೊಮ್ಮಾಯಿ ಅಂಕಲ್ ಮನಸ್ಸು ಮಾಡುವುದೊಂದೇ ಬಾಕಿ
Discussion about this post