ಮುಂಬೈ : ಮಾಜಿ ವಿಶ್ವ ಸುಂದರಿ, ಅಮಿತಾಬ್ ಸೊಸೆ, ಕರಾವಳಿ ಕುವರಿ ಐಶ್ವರ್ಯಾ ರೈ ಮತ್ತೆ ಗರ್ಭಿಣಿಯೇ..? ಇಂತಹುದೊಂದು ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಕಾರಣ ಇತ್ತೀಚೆಗೆ ತೆಗೆಸಿಕೊಂಡಿದ್ದಾರೆ ಎನ್ನಲಾದ ಫೋಟೋ.
ಪ್ರಸ್ತುತ ಐಶ್ವರ್ಯಾ ರೈ ಪಾಂಡಿಚೇರಿಯಲ್ಲಿದ್ದು, ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಸಿನಿಮಾದ ಶೂಟಿಂಗ್ ಸೆಟ್ ನಲ್ಲಿ ಭೇಟಿಯಾದ ನಟಿ ವರಲಕ್ಷ್ಮಿ ಶರತ್ ಕುಮಾರ್ ಜೊತೆಗೆ ಐಶ್ವರ್ಯಾ ಫೋಟೋ ತೆಗೆಸಿಕೊಂಡಿದ್ದಾರೆ.
ಆ ಪೈಕಿ ಒಂದು ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಐಶ್ವರ್ಯಾ ಗರ್ಭಿಣಿಯಾಗಿರಬಹುದೇ ಅನ್ನುವ ಅನುಮಾನ ಕಾಡುತ್ತಿದೆ ಅನ್ನುವುದು ನೆಟ್ಟಿಗರ ಅಭಿಪ್ರಾಯ. ಅಷ್ಟೇ ಅಲ್ಲದೆ ಇದೇ ಕಾರಣಕ್ಕಾಗಿಯೇ ಹೊಟ್ಟೆಯ ಮುಂದೆ ಅವರು ಕೈ ಇಟ್ಟುಕೊಂಡಿದ್ದಾರೆ ಎಂದು ನೆಟ್ಟಿಗರು ಕಾರಣ ಬೇರೆ ಕೊಟ್ಟಿದ್ದಾರೆ.
Discussion about this post