ಬೆಂಗಳೂರು : ಕನ್ನಡ ಚಿತ್ರರಂಗದ ನವರಸನಾಯಕ ಎಂದೇ ಪ್ರಸಿದ್ಧರಾಗಿರುವ ಜಗ್ಗೇಶ್ ಅವರಿಗೆ ಸಾಕಷ್ಟು ಗೌರವಗಳಿತ್ತು.
ಅವರು ಬೆಳೆದು ಬಂದ ಹಾದಿ ಅದೆಷ್ಟೋ ಮಂದಿ ಆದರ್ಶವಾಗಿತ್ತು. ಹೀಗಾಗಿ ಬೆಳೆದರೆ ಜಗ್ಗೇಶ್ ಅವರಂತೆ ಬೆಳೆಯಬೇಕೆಂದು ಸಲಹೆ ಕೊಡುವ ಮಂದಿಯೂ ಸಾಕಷ್ಟಿದ್ದಾರೆ.
ಆದರೆ ಇತ್ತೀಚೆಗೆ ಜಗ್ಗೇಶ್ ಮಾಡಿಕೊಳ್ಳುತ್ತಿರುವ ಎಡವಟ್ಟು ಅವರ ಎಲ್ಲಾ ಸಾಧನೆಗಳನ್ನು ಮರೆ ಮಾಚುತ್ತಿದೆ.
ಅದರಲ್ಲೂ ನಟ ದರ್ಶನ್ ಕುರಿತಾಗಿ ಅವರು ಹೇಳಿರುವ ಮಾತುಗಳು ಇದೀಗ ಅವರ ಅಸಲಿ ಬಣ್ಣವನ್ನು ಬಟಾ ಬಯಲು ಮಾಡಿದೆ.
ದರ್ಶನ್ ಅಭಿಮಾನಿಗಳ ಬಗ್ಗೆ ಕೀಳಾಗಿ ಮಾತನಾಡಿದ್ದ ಜಗ್ಗೇಶ್, ಆಡಿಯೋ ವೈರಲ್ ಆಗುತ್ತಿದ್ದಂತೆ ನಾನವನಲ್ಲ… ನಾನವನಲ್ಲ… ನಾನವನಲ್ಲ… ಎಂದು ತಿಪ್ಪೆ ಸಾರುವ ಕೆಲಸ ಮಾಡಿದ್ದರು.
ಆದರೆ ಇದೀಗ ಅದು ಜಗ್ಗೇಶ್ ಅವರದ್ದೇ ದನಿ ಅನ್ನುವುದಕ್ಕೆ ಸಾಕ್ಷಿ ದೊರಕಿದೆ. ಆಡಿಯೋ ಕುರಿತಂತೆ ಮಾತನಾಡಿರುವ ಇನ್ಸ್ ಪೆಕ್ಟರ್ ವಿಕ್ರಮ್ ಚಿತ್ರದ ನಿರ್ಮಾಪಕ ವಿಖ್ಯಾತ್, ಆ ದನಿ ಜಗ್ಗೇಶ್ ಅವರದ್ದೇ, ಅವರು ಮಾತನಾಡಿರುವುದು ನನ್ನೊಂದಿಗೆ ಅಂದಿದ್ದಾರೆ.
ಫೆಬ್ರವರಿ 9 ರಂದು 8.30ಕ್ಕೆ ಕರೆ ಮಾಡಿದ್ದ ಜಗ್ಗೇಶ್ ನನ್ನ ಜೊತೆ ಮಾತನಾಡಿದ್ದರು. ಹಾಗಂತ ಈ ಫೋನ್ ಕಾಲ್ ಅನ್ನು ನಾನು ಯಾವುದೇ ಕಾರಣಕ್ಕೂ ರೆಕಾರ್ಡ್ ಮಾಡಿಕೊಂಡಿಲ್ಲ.

ಜೊತೆಗೆ ಚಿತ್ರದ ಪ್ರಚಾರದ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿಲ್ಲ. ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ಇದು ಯಾರ ಕೆಲಸ ಅನ್ನೋದು ಗೊತ್ತಿಲ್ಲ ಎಂದು ವಿಖ್ಯಾತ್ ಹೇಳಿದ್ದಾರೆ.
ಆಡಿಯೋ ಲೀಕ್ ಆಗಿರುವ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿರುವ ವಿಖ್ಯಾತ್, ನಾನು ಆಡಿರುವ ಮಾತುಗಳ ಬಗ್ಗೆ ತಿಳುವಳಿಕೆ ಇದೆ. ಆಡಿಯೋ ಕ್ಲಿಪ್ ನಲ್ಲಿ ಜಗ್ಗೇಶ್ ಆಡಿರುವ ಮಾತುಗಳಿಗೆ ಅವರೇ ಜವಾಬ್ದಾರರು ಅಂದಿದ್ದಾರೆ.

ದರ್ಶನ್ ಅಭಿಮಾನಿಗಳು ತೊಡೆ ತಟ್ಟಿದ ಬಳಿಕ ಮಾತನಾಡಿದ್ದ ಜಗ್ಗೇಶ್, ಇವೆಲ್ಲ ಒಬ್ಬ ಚಿಕ್ಕ ನಿರ್ಮಾಪಕ ತನ್ನ ಸಿನಿಮಾ ಪ್ರಚಾರ ಸಲುವಾಗಿ ಮಾಡುತ್ತಿರುವ ಕೃತ್ಯ ಅಂದಿದ್ದರು.
ಇದಕ್ಕೆ ಕೌಂಟರ್ ಕೊಟ್ಟಿರುವ ವಿಖ್ಯಾತ್, ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು, ಜಗ್ಗೇಶ್ ಸುಳ್ಳನ್ನು ಬಯಲು ಮಾಡಿದ್ದಾರೆ.
Discussion about this post