ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಮೆಸೇಜ್ ( whatsapp message ) ಚಟ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ
ಬಂಟ್ವಾಳ : ಈ ಮೊಬೈಲ್ ಅನ್ನುವುದು ಈಗ ಸಂವಹನ ಸಾಧನವಾಗಿ ಉಳಿದಿಲ್ಲ. ಅದೊಂದು ಚಟವಾಗಿ ಪರಿಣಮಿಸಿದೆ. ಅದರಲ್ಲೂ ಗೇಮ್ಸ್, ವಿಡಿಯೋ ಕಥೆಗಳನ್ನು ಕೇಳುವುದೇ ಬೇಡ. ಆದರೆ ಬಂಟ್ವಾಳದ ತಾಲೂಕಿನ ಹಳ್ಳಿಯೊಂದರಲ್ಲಿ ನಡೆದಿರುವುದು ಸ್ವಲ್ಪ ಡಿಫರೆಂಟ್ ಸ್ಟೋರಿ. ಸಂಬಂಧಿಕ ಮಹಿಳೆಯೊಬ್ಬಳು ಮೆಸೇಜ್ ( whatsapp message ) ಮಾಡುವುದನ್ನು ನಿಲ್ಲಿಸಿದಳು ಅನ್ನುವ ಕಾರಣಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಕೊಲೆ ಮಾಡಲು ಮುಂದಾಗಿದ್ದಾನೆ. ಅಂದ್ರೆ ಮೆಸೇಜ್ ಚಟ ಎಷ್ಟರಮಟ್ಟಿಗೆ ಹತ್ತಿರಬೇಕು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೆಸೇಜ್ ಮಾಡಿಲ್ಲ ಅನ್ನುವ ಕಾರಣಕ್ಕೆ ಆಕೆಯ ಮನೆಗೆ ನುಗ್ಗಿ ಮಹಿಳೆಯನ್ನು ಕೊಲ್ಲುವ ಯತ್ನ ನಡೆದಿದೆ.
ಇದನ್ನೂ ಓದಿ : ಸಿದ್ದರಾಮಯ್ಯ ಕಾರಿಗೆ ಹಣ ಎಸೆದ ಪ್ರಕರಣದಲ್ಲಿ SDPI ಕೈವಾಡ : ವಿಜಯಾನಂದ ಕಾಶಪ್ಪನವರ ಗಂಭೀರ ಆರೋಪ
ಪಿಲಮೊಗರು ನಿವಾಸಿ ಲತಾ ಹಾಗೂ ಪಲ್ಲಿಪಾಡಿ ನಿವಾಸಿ ರಮೇಶ್ ಸಂಬಂಧಿಗಳಾಗಿದ್ದು, ಇದೇ ಕಾರಣದಿಂದ ವಾಟ್ಸಾಪ್ ನಲ್ಲಿ ಪರಸ್ಪರ ಸಂದೇಶ ವಿನಿಮಯಗಳಾಗುತ್ತಿತ್ತು. ಲತಾ ಅವರಿಗೆ ಉಮೇಶ್ ಅನ್ನುವವರೊಂದಿಗೆ ಮದುವೆಯಾಗಿದ್ದು, ಸಂಸಾರ ಕೂಡಾ ಚೆನ್ನಾಗಿಯೇ ಸಾಗಿತ್ತು. ಈ ನಡುವೆ ರಮೇಶ್ ಕೆಲವೊಮ್ಮೆ ಉಮೇಶ್ ಮನೆಗೆ ಬಂದು ಹೋಗುತ್ತಿದ್ದ ಕೂಡಾ. ಆದರೆ ಆತನೇ ಸಂಸಾರಕ್ಕೆ ಕೊಳ್ಳಿ ಇಡ್ತಾನೆ ಅಂದುಕೊಂಡಿರಲಿಲ್ಲ.
ಇನ್ನು ಲತಾ ಮತ್ತು ರಮೇಶನ ಮೆಸೇಜ್ ವಿಚಾರದಲ್ಲಿ ಗಂಡ ಉಮೇಶ್ ಅಸಮಾಧಾನ ಹೊಂದಿದ್ದರು. ಹೀಗಾಗಿ ಹೆಂಡತಿಗೆ ಸಹಜವಾಗಿಯೇ ಬುದ್ದಿ ಮಾತು ಹೇಳಿದ್ದರು. ಗಂಡನ ಮಾತಿಗೆ ಗೌರವ ಕೊಟ್ಟು ಅವರು ಮೆಸೇಜ್ ಮಾಡುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಕೋಪಗೊಂಡ ರಮೇಶ ಲತಾ ಅವರ ಮನೆಗೆ ಬಂದು ತರಾಟೆಗೆ ತೆಗೆದುಕೊಂಡಿದ್ದಾನೆ. ಮನೆಯವರಿಗೆ ಇವೆಲ್ಲಾ ಇಷ್ಟ ಆಗೋದಿಲ್ಲ ಹೀಗಾಗಿ ನಾನು ಮೆಸೇಜ್ ಮಾಡೋದಿಲ್ಲ ಅಂದ್ರೆ ಕುಪಿತನಾದ ರಮೇಶ ಮನೆಯ ಒಳಗೆ ನುಗ್ಗಿ ಕತ್ತಿ ತೆಗೆದು ಲತಾ ಅವರಿಗೆ ಬೀಸಿದ್ದಾನೆ.
ಈ ವೇಳೆ ಲತಾ ಅವರ ಕೂಗು ಕೇಳಿದ ನೆರೆ ಹೊರೆಯವರು ಧಾವಿಸಿದ್ದು ಅಪಾಯದಿಂದ ಪಾರು ಮಾಡಿದ್ದಾರೆ ಈ ವೇಳೆ ಈ ಆರೋಪಿ ಓಡಿ ಹೋಗಿದ್ದು, ರಮೇಶನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಈ ಸಾವು ನ್ಯಾಯವೇ : ಪ್ರತ್ಯೇಕ ಘಟನೆಯಲ್ಲಿ ಎರಡು ಮಕ್ಕಳ ದಾರುಣ ಸಾವು
ಒಂದು ಮಗು ಕಾರಿನಡಿಗೆ ಬಿದ್ರೆ ಮತ್ತೊಂದು ಮಗುವನ್ನು ವಿದ್ಯುತ್ ಬಲಿ ಪಡೆದಿದೆ. ಹೀಗಾಗಿ ಮಕ್ಕಳ ಬಗ್ಗೆ ಎಚ್ಚರವಾಗಿರಿ, ಮಕ್ಕಳ ಮೇಲೆ ಹದ್ದಿನಕಣ್ಣಿಡಿ ಅನ್ನೋದು
ಬೆಂಗಳೂರು : ಆಟವಾಡುತ್ತಿದ್ದ ಮಗುವಿಗೆ ಕಾರು ಡಿಕ್ಕಿ ಹೊಡೆದು ನಾಲ್ಕೂವರೆ ವರ್ಷದ ಮಗು ಮೃತಪಟ್ಟ ಘಟನೆ ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಾದರಮಂಗಲದ ಮಹಾ ಶ್ರೀನಿವಾಸ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದೆ.
ಅಪಾರ್ಟ್ ಮೆಂಟ್ ನಿವಾಸಿ ದೀಪು ಜೋಶ್ ಅನ್ನುವವರು ತಮ್ಮ ಕಾರನ್ನು ಅಪಾರ್ಟ್ ಮೆಂಟ್ ನಿಂದ ಹೊರ ತಂದಿದ್ದಾರೆ. ಈ ವೇಳೆ ಅಪಾರ್ಟ್ ಮೆಂಟ್ ನ ಸೆಕ್ಯೂರಿಟಿ ಗಾರ್ಡ್ ನ ಪುತ್ರ ಕೃಷ್ಣ ಕಟಾಯತ್ ಏಕಾಏಕಿ ಕಾರಿನ ಮುಂದೆ ಬಂದಿದ್ದಾರೆ. ಈ ವೇಳೆ ಕಾರು ಮಗುವಿಗೆ ಗುದ್ದಿದೆ.
ವಿದ್ಯುತ್ ಕಂಬ ಮುಟ್ಟಿದ ಮಗು ಸಾವು
ಮತ್ತೊಂದು ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ರಸ್ತೆ ಬದಿಯ ವಿದ್ಯುತ್ ಕಂಬವನ್ನು ಮುಟ್ಟಿದ ಮಗು ದಾರುಣವಾಗಿ ಉಸಿರು ಚೆಲ್ಲಿದೆ. ಮೃತ ಬಾಲಕನನ್ನು ಕೇರಳ ಮೂಲದ ರುಕ್ಕಾನ್ ಸೈಯದ್ ಎಂದು ಗುರುತಿಸಲಾಗಿದೆ.
ರಸ್ತೆ ಬದಿಯ ವಿದ್ಯುತ್ ಕಂಬವನ್ನು ಬಾಲಕ ಆಕಸ್ಮಿಕವಾಗಿ ಮುಟ್ಟಿದ್ದಾನೆ. ಆಗ ವಿದ್ಯುತ್ ಪ್ರವಹಿಸಿ ಬಾಲಕ ಮೃತ ಪಟ್ಟಿದ್ದಾನೆ. ಶರೀಫ್ ನಗರದಲ್ಲಿರುವ ತನ್ನ ಸಂಬಂಧಿಕರ ಮನೆ ಬಳಿ ಆಟವಾಡುತ್ತಿದ್ದ ಬಾಲಕ ರಸ್ತೆಯ ಬದಿಯ ವಿದ್ಯುತ್ ಕಂಬವನ್ನು ಮುಟ್ಟಿದ್ದಾನೆ. ಶನಿವಾರ ಸಂಜೆ 4 ಗಂಟೆಯ ಹೊತ್ತಿಗೆ ಈ ದುರ್ಘಟನೆ ಸಂಭವಿಸಿದೆ.
Discussion about this post