ನವದೆಹಲಿ : ಲಸಿಕೆ ವಿತರಣೆಯಲ್ಲಿ ಭಾರತ ಮತ್ತೊಂದು ಮೈಲುಗಲ್ಲು ಸ್ಥಾಪಿಸುವತ್ತ ಹೆಜ್ಜೆ ಇಟ್ಟಿದೆ. ಗುರುವಾರ ಭಾರತ 1 ಬಿಲಿಯನ್ ಕೋವಿಡ್ ಲಸಿಕೆ ನೀಡಿದ ರಾಷ್ಟ್ರ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜನವರಿ 16, 2021 ರಂದು ರಂದು ಪ್ರಾರಂಭವಾದ ಈ ಲಸಿಕೆ ವಿತರಣೆ 10 ತಿಂಗಳ ಅವಧಿಯಲ್ಲಿ ಈ ಸಂಖ್ಯೆಗೆ ಸಮೀಪಿಸಿದೆ ಅಂದ್ರೆ ಚಿಕ್ಕ ವಿಷಯವಲ್ಲ. ಲಸಿಕೆಯ ಕುರಿತಂತೆ ಅಪಪ್ರಚಾರಗಳು ನಡೆಯದೇ ಇರುತ್ತಿದ್ರೆ 1 ಬಿಲಿಯನ್ ಸಂಖ್ಯೆಯನ್ನು ಎಂದೋ ದಾಟಿಯಾಗಿರುತ್ತಿತ್ತು.
ಮಾಹಿತಿಯ ಪ್ರಕಾರ, ವಯಸ್ಕರಲ್ಲಿ ಸುಮಾರು 75 ಪ್ರತಿಶತದಷ್ಟು ಜನರು ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ ಮತ್ತು 31 ಪ್ರತಿ ಶತದಷ್ಟು ಜನ ಎರಡೂ ಡೋಸ್ ಪಡೆದಿದ್ದಾರೆ. ಉತ್ತರ ಪ್ರದೇಶವು ಅತಿ ಹೆಚ್ಚು ಲಸಿಕೆ ನೀಡಿದ್ದು ಇಲ್ಲಿ 12 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ನಂತರ ಸ್ಥಾನ ಮಹಾರಾಷ್ಟ್ರ ಮತ್ತು ಗುಜರಾತ್ ಗೆ ಸಂದಿದೆ.
ಇನ್ನು ಲಸಿಕೆಯ ವಿತರಣೆಯ ಸಾಧನೆಯನ್ನು ಸಂಭ್ರಮಿಸಲು ಬಿಜೆಪಿ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಸರ್ಕಾರದ ಮಟ್ಟದಲ್ಲೂ ಅನೇಕ ಕಾರ್ಯಕ್ರಮಗಳು ನಡೆಯಲಿದೆ.
Discussion about this post