ನವದೆಹಲಿ : ಕೊರೋನಾ ಕಾರಣದಿಂದ ಒಂದಿಷ್ಟು ತಿಂಗಳ ಕಾಲ ಕ್ರಿಕೆಟ್ ಮೈದಾನ ಮೌನಕ್ಕೆ ಶರಣಾಗಿತ್ತು. ಇದಾದ ಬಳಿಕ ಪ್ರೇಕ್ಷಕರಿಲ್ಲದ ಮೈದಾನಕ್ಕೆ ಆಟಗಾರರು ಎಂಟ್ರಿ ಕೊಟ್ಟರು. ಈ ಮೂಲಕ ಕ್ರಿಕೆಟ್ ಅಭಿಮಾನಿಗಳು ಸಂಭ್ರಮ ಪಡುವಂತಾಯ್ತು. ಕೊರೋನಾ ಸೋಂಕಿನ ಮೊದಲ ಅಲೆ ಮುಗಿಯುತ್ತಿದ್ದಂತೆ ಐಪಿಎಲ್ ಶುರುವಾಯ್ತು, ಆದರೆ ಅಷ್ಟು ಹೊತ್ತಿಗೆ ಎರಡನೇ ಅಲೆ ಅಬ್ಬರಿಸಿದ ಕಾರಣ ಅದು ಕೂಡಾ ಅರ್ಧಕ್ಕೆ ನಿಂತು ಹೋಯ್ತು.
ಇದೀಗ ಐಪಿಎಲ್ ಮುಂದೂಡಲ್ಪಟ್ಟ ಬಳಿಕ ಭಾರತೀಯ ಆಟಗಾರರ ಮೊದಲ ಬಾರಿಗೆ ಟೂರ್ನಿಯೊಂದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯ ನಡೆಯಲಿದೆ. ಇಂಗ್ಲೆಂಡ್ನಲ್ಲಿ ಜೂನ್ 18ರಿಂದ 22ರ ವರೆಗೆ WTC ಫೈನಲ್ ಪಂದ್ಯ ನಡೆಯಲಿದ್ದು. ಇದಕ್ಕಾಗಿ ಪಂದ್ಯದ ಪ್ರಸಾರದ ಹೊಣೆ ಹೊತ್ತಿರುವ ಸ್ಟಾರ್ ಸ್ಪೋರ್ಟ್ಸ್ ಭರ್ಜರಿ ಸಿದ್ದತೆಗಳನ್ನ ಮಾಡಿಕೊಂಡಿದೆ.
ಅಭಿಮಾನಿಗಳಲ್ಲಿ ಮತ್ತೆ ಕ್ರಿಕೆಟ್ ಕಿಚ್ಚು ಏರಿಸುವ ಸಲುವಾಗಿ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಸ್ಪೆಷಲ್ ಪ್ರೋಮೋ ಬಿಡುಗಡೆ ಮಾಡಿದೆ.
2019ರಿಂದ ಆರಂಭಗೊಂಡಿರುವ ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ ಆವೃತ್ತಿಯ ಫೈನಲ್ ಪಂದ್ಯವಿದು. ಟೆಸ್ಟ್ ಚಾಂಪಿಯನ್ಶಿಪ್: ಅಶ್ವಿನ್ ಹಾಗೂ ಜೆಮಿಸನ್ ನಡುವಿನ ಪೈಪೋಟಿಯಲ್ಲಿ ಗೆಲ್ಲುವವರಾರು? ನ್ಯೂಜಿಲೆಂಡ್-ಭಾರತ ಎರಡೂ ಬಲಿಷ್ಠ ತಂಡಗಳೇ. ಹೀಗಾಗಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಚಾಂಪಿಯನ್ಸ್ ಯಾರಾಗಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ. ಇಂಗ್ಲೆಂಡ್ಗೆ ಪ್ರವಾಸ ಹೋಗಲಿರುವ ವಿರಾಟ್ ಕೊಹ್ಲಿ ಪಡೆ ಸೌತಾಂಪ್ಟನ್ನ ರೋಸ್ ಬೌಲ್ ಸ್ಟೇಡಿಯಂನಲ್ಲಿ ಮೊದಲು ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡಿ ಬಳಿಕ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ.
ಇನ್ನು ಫೈನಲ್ ಗೆಲ್ಲುವ ಬಗ್ಗೆ ಮಾತನಾಡಿರುವ ಪ್ಯಾಟ್ ಕಮಿನ್ಸ್ ಇಂಗ್ಲೆಂಡ್ನಲ್ಲಿ ಒಳ್ಳೆಯ ಮಳೆಯಾಗಿದೆ ಅನ್ನುವ ಸುದ್ದಿ ಬಂದಿದೆ. ಇಂಗ್ಲೆಂಡ್ನ ಮೈದಾನದ ಸ್ಥಿತಿ ನ್ಯೂಜಿಲೆಂಡ್ಗೆ ವರವಾಗುವ ಸಾಧ್ಯತೆಗಳಿದೆ ಅಂದಿದ್ದಾರೆ.
ಐಪಿಎಲ್ ಪಂದ್ಯದ ಅರ್ಧಕ್ಕೆ ಮೊಟಕುಗೊಂಡ ಬಳಿಕ ಹಿಂತಿರುಗಿರುವ ಪ್ಯಾಟ್ ಕಮಿನ್ ಕ್ವಾರಂಟೈನ್ ಮುಗಿಸಿ ಕೆಲ ದಿನಗಳ ಹಿಂದಷ್ಟೇ ತಮ್ಮ ಕುಟುಂಬ ಸದಸ್ಯರನ್ನು ಸೇರಿದ್ದಾರೆ.
ಇನ್ನು WTC ಫೈನಲ್ ಬಳಿಕ ಕೊಹ್ಲಿ ಪಡೆ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ.
Discussion about this post