ಹಣ್ಣುಗಳ ರಾಜ ಮಾವಿನ ಹಣ್ಣುಗಳ ಸೀಜನ್ ಶುರುವಾಗಿದೆ. ಮಾರುಕಟ್ಟೆ ತರೇಹವಾರಿ ಮಾವುಗಳು ಪರಿಮಳ ಬೀರುತ್ತಿದೆ, ಬಾಯಲ್ಲಿ ನೀರೂರಿಸುತ್ತಿದೆ. ಮಾರುಕಟ್ಟೆಗೆ ಅದ್ಯಾವ ಮಾವುಗಳು ಬಂದರೂ ಕೂಡಾ, ಕಾಡುಮಾವಿನ ಹಣ್ಣಿನ ರುಚಿಯನ್ನು ಮೀರಿಸಲು ಸಾಧ್ಯವಿಲ್ಲ.
ಇನ್ನು ಕಾಡು ಮಾವುಗಳು ಮುಗಿದ ನಂತ್ರ ಅದರ ರುಚಿ ಸವಿಯೋದು ಹೇಗೆ, ಹೀಗಾಗಿ ಮಾವಿನ ಹಣ್ಣಿನ ಕಾಲ ಮುಗಿದ ನಂತರವೂ ಕಾಡು ಮಾವಿನ ಹಣ್ಣುಗಳನ್ನು ಸವಿಯುವ ಸಲುವಾಗಿ ಕಾಡುಮಾವಿನ ಹಣ್ಣುಗಳ ಪಲ್ಪ್ ಮಾಡೋದು ಹೇಗೆ ಅನ್ನುವುದನ್ನು ಉಡುಪಿಯ ಜಯಸುಧಾ ಅವರು ಹೇಳಿಕೊಟ್ಟಿದ್ದಾರೆ.
ಬೇಕಾಗುವ ಪದಾರ್ಥಗಳು.
ಮಾವಿನಹಣ್ಣು10-20
ಸಕ್ಕರೆ-1/4ಕೆ.ಜಿ
ಮಾಡುವ ವಿಧಾನ : ಮೊದಲು ಮಾವಿನ ಹಣ್ಣುಗಳನ್ನು ಚೆನ್ನಾಗಿ ತೊಳೆದು ನೀರಿನ ಪಸೆಯಿಲ್ಲದಂತೆ ಒರೆಸಿಕೊಳ್ಳಬೇಕು. ನಂತ್ರ ಸಿಪ್ಪೆಯನ್ನು ತೆಗೆದು ಒಂದು ಪಾತ್ರೆಯಲ್ಲಿ ಹಾಕಿ ಸ್ವಲ್ಪ ನೀರುಹಾಕಿ ಬೇಯಿಸಿ.
ತಣ್ಣಗಾದ ನಂತರ ಅದನ್ನು ಚೆನ್ನಾಗಿ ಕಿವುಚಿ ಓಟೆಯನ್ನು ತೆಗೆದುಹಾಕಿ. ಮಿಕ್ಸಿಗೆ 1/4ಕೆಜಿ ಸಕ್ಕರೆ ಹಾಕಿ ಕಿವುಚಿದ ಮಾವಿನ ಹಣ್ಣಿನ ರಸ ಹಾಕಿ2ಸುತ್ತು ತಿರುಗಿಸಿ.
ನಂತರ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ ಇಳಿಸಿ. ಆರಿದ ನಂತರ ಅದನ್ನು ಒಂದು ಬಾಟ್ಲಿಯಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಇಡಿ. ಬೇಕಾದಾಗ ತಣ್ಣನೆಯ ನೀರಿಗೆ ಹಾಕಿ ಜ್ಯೂಸ್ ಮಾಡಿಕೊಂಡು ಕುಡಿಯಲು ತುಂಬಾ ರುಚಿಯಾಗಿರುತ್ತದೆ. ಇನ್ನು.ಮನೆಗೆ ಗೆಸ್ಟ್ ಬಂದರೆ ದಿಡೀರ್ ಆಗಿಯೂ ಕಾಡು ಮಾವಿನ ಹಣ್ಣಿನ ಜ್ಯೂಸ್ ಮಾಡಿಕೊಡಬಹುದು
Discussion about this post