ಬೆಂಗಳೂರು : ಕೊರೋನಾ ನಿಯಂತ್ರಣದ ನಿಟ್ಟಿನಲ್ಲಿ ಬಿಬಿಎಂಪಿ ಇತ್ತೀಚೆಗೆ ಮನೆ ಮನೆ ಆರೋಗ್ಯ ಸಮೀಕ್ಷೆಯನ್ನು ಹಮ್ಮಿಕೊಂಡಿತ್ತು. ಈ ಸಮೀಕ್ಷೆಯಲ್ಲಿ ಅನೇಕ ಆತಂಕಕಾರಿ ಅಂಶಗಳು ಬಯಲಾಗಿದ್ದು, ರಾಜ್ಯ ರಾಜಧಾನಿ ಡಯಾಬಿಟಿಸ್ ಕ್ಯಾಪಿಟಲ್ ಆಗುತ್ತಾ ಅನ್ನುವ ಪ್ರಶ್ನೆ ಎದ್ದಿದೆ.
2 ಲಕ್ಷ 48 ಸಾವಿರ 280 ಮನೆಯಲ್ಲಿ ಸಮೀಕ್ಷೆ ನಡೆದಿದ್ದು, 7 ಲಕ್ಷ 11 ಸಾವಿರದ 648 ಮಂದಿಗೆ ಟೆಸ್ಟ್ ಮಾಡಲಾಗಿದೆ. ಈ ಪೈಕಿ 57 ಸಾವಿರದ 528 ಮಂದಿ ವಿವಿಧ ರೋಗಗಳಿಂದ ಬಳಲುತ್ತಿದ್ದಾರೆ. ಇದರಲ್ಲಿ ಶೇ40ರಷ್ಟು ಜನರಿಗೆ ಸಕ್ಕರೆ ಕಾಯಿಲೆ ಪತ್ತೆಯಾಗಿದ್ದರೆ, ಶೇ35.82 ಮಂದಿಗೆ ಹೈ ಬಿಪಿ, ಶೇ 2.99 ಮಂದಿಗೆ ಥೈರಾಯ್ಡ್, ಶೇ 2.48ರಷ್ಟು ಜನ ಹೃದಯ ಕಾಯಿಲೆ ಇರುವುದು ಗೊತ್ತಾಗಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಅತೀ ಹೆಚ್ಚು ಮಂದಿ ಕಾಯಿಲೆ ತುತ್ತಾಗಿರುವ ಸಾಧ್ಯತೆಗಳಿದೆ ಎಂದು ವೈದ್ಯರು ಅಂದಾಜಿಸಿದ್ದಾರೆ. ಆದರೆ ಸಕ್ಕರೆ ಕಾಯಿಲೆ ಅತೀ ಹೆಚ್ಚು ಜನರಲ್ಲಿ ಪತ್ತೆಯಾಗುತ್ತಿರುವುದು ಆತಂಕಕಾರಿಯಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಆರೋಗ್ಯ ಇಲಾಖೆ ಮುಂದಾಗದಿದ್ರೆ ಮುಂದೆ ಆಗಬಹುದಾದ ಅನಾಹುತವನ್ನು ಊಹಿಸಲು ಸಾಧ್ಯವಿಲ್ಲ.
Discussion about this post