ಚಂದನವನದ ದಿವಂಗತ ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಅವರ ಪುತ್ರ ರಾಯನ್ ರಾಜ್ ಸರ್ಜಾನಿಗೆ ಇಂದು ಮೊದಲನೇ ಹುಟ್ಟು ಹಬ್ಬದ ಸಂಭ್ರಮ.
ಜೂನಿಯರ್ ಚಿರು ಮೊದಲ ವರ್ಷದ ಜನ್ಮದಿನಾಚರಣೆಗೆ ಈಗಾಗಲೇ ತಾಯಿ ಮೇಘನಾ ಭರ್ಜರಿ ಸಿದ್ದತೆ ಮಾಡಿಕೊಂಡಿದ್ದಾರೆ. ಇನ್ನು ಚಿರು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಾಯನ್ ರಾಜ್ ಸರ್ಜಾನಿಗೆ ಶುಭಾಶಯಗಳ ಹೂಮಳೆಗರೆಯುತ್ತಿದ್ದಾರೆ. (Happy Birthday Raayan Raj Sarjaa)
ಮೇಘನಾ ಕೂಡಾ ಸ್ಪೆಷಲ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ನಡುವೆ ರಾಯನ್ ಮೊದಲ ಬರ್ತ್ ಡೇ ಸಂಭ್ರಮದಲ್ಲಿ ಧ್ರುವ ಹಾಗೂ ಕುಟುಂಬ ಸದಸ್ಯರು ಪಾಲ್ಗೊಳ್ಳುತ್ತಾರೆಯೇ ಅನ್ನುವುದು ಈಗಿರುವ ಕುತೂಹಲ.
Discussion about this post