ಸೊಳ್ಳೆ ಕಚ್ಚಿದ ಕೋಪಕ್ಕೆ ಪತ್ನಿಯೊಬ್ಬಳು ಪತಿಗೆ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಗುಜರಾತಿನ ಅಹಮದಾಬಾದ್ ನಗರದ ನರೋದಾದಲ್ಲಿ ನಡೆದಿದೆ
ಭೂಪೇಂದ್ರ ಲೆವಾ ಎಂಬ ವ್ಯಕ್ತಿ ಕಾರಿನಲ್ಲಿ LED ಲೈಟ್ ಗಳ ಮಾರಾಟ ಮಾಡಿಕೊಂಡಿದ್ದರು. ಈ ವ್ಯಾಪಾರ ಕೈ ಹಿಡಿಯದಿದ್ದ ಕಾರಣ ಮನೆ ನಡೆಸುವುದು ಕಷ್ಟವಾಗಿತ್ತು. ಮಾತ್ರವಲ್ಲದೆ ಮನೆಯ ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಹೀಗಾಗಿ ಅಧಿಕಾರಿಗಳು ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು.
ಮನೆಯಲ್ಲಿ ವಿದ್ಯುತ್ ಇಲ್ಲದ ಕಾರಣ ಮನೆ ಮಂದಿಗೆಲ್ಲಾ ಸೊಳ್ಳೆ ಕಚ್ಚಿತ್ತು. ಭೂಪೇಂದ್ರ ಪತ್ನಿಗೆ ಒಂದಿಷ್ಟು ಹೆಚ್ಚೇ ಕಚ್ಚಿತ್ತು.
ಬೆಳಗ್ಗೆ ಆಗುತ್ತಿದ್ದಂತೆ ಪತ್ನಿ ಸಂಗೀತಾ ರಾತ್ರಿಯೆಲ್ಲ ಸೊಳ್ಳೆ ಕಚ್ಚಿವೆ ಎಂದು ದೂರಿದ್ದಾಳೆ. ವಿದ್ಯುತ್ ಸಂಪರ್ಕವಿರುತ್ತಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಕಿಡಿ ಕಾರಿದ್ದಾಳೆ. ಇದಕ್ಕೆ ನಗುತ್ತಾ ಪತಿ ಭೂಪೇಂದ್ರ ನನ್ನ ಜೊತೆ ಮಲಗಿದ್ದರೆ ಚೆನ್ನಾಗಿ ನಿದ್ದೆ ಬರುತ್ತಿತ್ತು ಅಂದಿದ್ದಾನೆ. ಅಷ್ಟಕ್ಕೇ ಕೋಪಗೊಂಡ ಸಂಗೀತಾ ಅಡುಗೆ ಮನೆಯಿಂದ ಒನಕೆ ತಂದು ಪತಿಗೆ ಥಳಿಸಿದ್ದಾಳೆ. ಅಮ್ಮನಿಗೆ ಪುತ್ರಿ ಚಿತಲ್ ಸಹ ಸಾಥ್ ಕೊಟ್ಟಿದ್ದಾಳೆ.
ಇದೀಗ ಅಕ್ಕ ಪಕ್ಕದವರು ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Discussion about this post