ಬೆಂಗಳೂರು : ರಾಜಧಾನಿಯ ದಿ ಪಾರ್ಕ್ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಆರೋಪದಡಿಯಲ್ಲಿ ನಟಿ ಶ್ರದ್ಧಾ ಕಪೂರ್ ಸಹೋದರ ನಟ ಸಿದ್ದಾಂತ್ ಕಪೂರ್ ( Shraddha Kapoor’s brother Siddhanth Kapoor ) ನನ್ನು ಹಲಸೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಯಾರಿವನು ಸಿದ್ದಾಂತ್ ಕಪೂರ್…?
ಹಲಸೂರು ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿರುವ ಸಿದ್ದಾಂತ್ ಕಪೂರ್ , ಚಿತ್ರರಂಗದ ಹಿನ್ನಲೆಯಿಂದ ಬಂದವರು. ತಂದೆ ಶಕ್ತಿ ಕಪೂರ್ ಬಾಲಿವುಡ್ ನಲ್ಲಿ ಜನಪ್ರಿಯ ನಟ. ಶಕ್ತಿ ಕಪೂರ್ ಅವರಿಗೆ ಭಾರತೀಯ ಚಿತ್ರರಂಗದಲ್ಲೇ ಒಳ್ಳೆಯ ಹೆಸರಿದೆ. ಇನ್ನು ಸಹೋದರಿ ಶ್ರದ್ಧಾ ಕಪೂರ್ ಕೂಡಾ ತನ್ನ ಪ್ರತಿಭೆಯನ್ನು ಹಿಂದಿ ಚಿತ್ರರಂಗದಲ್ಲಿ ಸಾಬೀತು ಮಾಡಿದ್ದಾರೆ. ಬಣ್ಣದ ಮನೆಯಿಂದ ಕಾರಣಕ್ಕೆ ಸಿದ್ದಾಂತ ಕಪೂರ್ ಕೂಡಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಆದರೆ ಡ್ರಗ್ಸ್ ಸಹವಾಸದಿಂದ ಸಂಕಷ್ಟ ಎದುರಾಗಿದೆ.
ಶಕ್ತಿ ಕಪೂರ್ ಮಗ ಅನ್ನುವ ಕಾರಣಕ್ಕೆ ಸಿದ್ದಾಂತ್ ಅವರಿಗೆ ಅವಕಾಶಗಳು ಸುಲಭವಾಗಿ ಸಿಕ್ಕಿತ್ತು. ನಿರ್ದೇಶನ ವಿಭಾಗಕ್ಕೆ ಕೈ ಹಾಕಿದ್ದ ಸಿದ್ದಾಂತ್ 2006ರಲ್ಲಿ ಭಾಗಂ ಭಾಗ್ ಅನ್ನೋ ಸಿನಿಮಾಗೆ ಸಹಾಯ ನಿರ್ದೇಶವಕನಾಗಿ ಕೆಲಸ ಮಾಡಿದ್ದರು. ಚುಪ್ ಚುಪ್ ಕೇ , ಭೂಲ್ ಭುಲಯ್ಯ, ಡೋಲ್ ಅನ್ನುವ ಸಿನಿಮಾಗಳಿಗೂ ಸಿದ್ದಾಂತ್ ಸಹಾಯಕ ನಿರ್ದೇಶಕರಾಗಿದ್ದರು.
ಇದಾದ ಬಳಿಕ ನಟನಾಗಬೇಕು ಎಂದು ಬಣ್ಣ ಹಚ್ಚಿದ್ದ ಸಿದ್ದಾಂತ್ ಹಲೋ ಚಾರ್ಲಿ, ಅಗ್ಲಿ, ಜಝ್ಬಾ, ಹಸೀನಾ ಪಾರ್ಕರ್ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದರು. ಆದರೆ ಆದ್ಯಾಕೋ ನಟನೆ ಅವರಿಗೆ ಒಲಿಯಲಿಲ್ಲ. ಇದಾದ ಬಳಿಕ ವೆಬ್ ಸಿರೀಸ್ , ಮ್ಯೂಸಿಕ್ ವಿಡಿಯೋ ಎಂದು ಓಡಾಡುತ್ತಿದ್ದರು. ಜೊತೆಗೆ ಡಿಜೆ ಆಗಿಯೂ ಕೆಲಸ ಮಾಡುತ್ತಿದ್ದರು.
ಬೆಂಗಳೂರು : ರಾಜಧಾನಿಯ ದಿ ಪಾರ್ಕ್ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಆರೋಪದಡಿಯಲ್ಲಿ ನಟಿ ಶ್ರದ್ಧಾ ಕಪೂರ್ ಸಹೋದರ ನಟ ಸಿದ್ದಾಂತ್ ಕಪೂರ್ ನನ್ನು ಹಲಸೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದೊಡ್ಡ ಮಟ್ಟದ ಡ್ರಗ್ಸ್ ಪಾರ್ಟಿ ನಡೆಯುತ್ತಿದೆ ಅನ್ನುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದು, ರಾತ್ರಿ 12 ಗಂಟೆ ಸುಮಾರಿಗೆ ಇನ್ಸ್ ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ 25ಕ್ಕೂ ಅಧಿಕ ಪೊಲೀಸರು ದಾಳಿ ಮಾಡಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದ ಶ್ರದ್ಧಾ ಕಪೂರ್ ಸಹೋದರ
ಪಾರ್ಟಿಯಲ್ಲಿ 50ಕ್ಕೂ ಹೆಚ್ಚು ಜನ ಭಾಗಿಯಾಗಿದ್ದು, ಇವೆರೆಲ್ಲರ ಮೆಡಿಕಲ್ ಟೆಸ್ಟ್ ನಡೆಸುವ ಸಲುವಾಗಿ ಟಿಟಿ ವಾಹನಗಳನ್ನು ಪೊಲೀಸರು ತರಿಸಿಕೊಂಡಿದ್ದರು. ಇದೀಗ ಪಾರ್ಟಿಯಲ್ಲಿ 5 ಜನ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದ್ದು, ಇವರ ವಿರುದ್ಧ NDPS ACT ಅಡಿಯಲ್ಲಿ ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ಪಾರ್ಟಿಯಲ್ಲಿ ನಟಿ ಶ್ರದ್ಧಾ ಕಪೂರ್ ಸಹೋದರ ನಟ ಸಿದ್ದಾಂತ್ ಕಪೂರ್ ಕೂಡಾ ಭಾಗಿಯಾಗಿದ್ದು, ಈತ ಕೂಡ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. ಇದೀಗ ಸಿದ್ದಾಂತ್ ಹಲಸೂರು ಪೊಲೀಸರ ವಶದಲ್ಲಿದ್ದಾನೆ.
Discussion about this post