ನವದೆಹಲಿ : ಹೆಲಿಕಾಫ್ಟರ್ ದುರಂತದಲ್ಲಿ ವೀರ ಮರಣ ಹೊಂದಿದ ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸಾವನ್ನು ಸಂಭ್ರಮಿಸಿದವರ ವಿರುದ್ಧ ಕಾರ್ಯಾಚರಣೆ ಪ್ರಾರಂಭವಾಗಿದೆ. ಈಗಾಗಲೇ ಈ ದೇಶ ದ್ರೋಹಿಗಳಿಗೆ ಇನ್ಮುಂದೆ ನೆಮ್ಮದಿಯಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬಹಿರಂಗವಾಗಿಯೇ ಗುಡುಗಿದ್ದಾರೆ.
ಈ ನಡುವೆ ಬಿಪಿನ್ ರಾವತ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಮೂವರನ್ನು ಬಂಧಿಸಲಾಗಿದೆ. ರಾಜಸ್ತಾನ, ಗುಜರಾತ್ ಮತ್ತು ಜಮ್ಮು ಕಾಶ್ಮೀರದಲ್ಲಿ ತಲಾ ಒಬ್ಬರನ್ನು ಬಂಧಿಸಲಾಗಿದೆ.
ಜಮ್ಮು ಕಾಶ್ಮೀರದ ರಜೌರಿಯಾದಲ್ಲಿ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ. ಈತನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಟೋಂಕ್ ಜಿಲ್ಲೆಯ ಜವಾದ್ ಖಾನ್ (21) ಎಂಬಾತ, ‘ ರಾವತ್ ನರಕಕ್ಕೆ ಹೋಗುವ ಮೊದಲೇ ದಹಿಸಿ ಹೋದರು ’ ಎಂದು ಪೋಸ್ಟ್ ಹಾಕಿದ್ದ. ಹೀಗಾಗಿ ತಾಲಿಬಾನಿ ಮನಸ್ಥಿತಿಯ ವ್ಯಕ್ತಿ ಇದೀಗ ಪೊಲೀಸ್ ಠಾಣೆ ಸೇರಿದ್ದಾನೆ.
ಇದನ್ನೂ ಓದಿ : ಮೂರು ವರ್ಷದ ಮಗು ಸೇರಿ 9 ಜನರಿಗೆ ಒಮಿಕ್ರೋನ್ : ರಾಜ್ಯದಲ್ಲಿ ಒಮಿಕ್ರೋನ್ ಚಿಕಿತ್ಸೆಗೆ ಮಾರ್ಗಸೂಚಿ
ಗುಜರಾತ್ ನ ಅಮ್ರೇಲಿಯಲ್ಲಿ ಶಿವಭಾಯಿ ರಾಮ್ ಎಂಬಾತ ರಾವತ್ ಸಾವನ್ನು ಸಂಭ್ರಮಿಸಿದ ಕರ್ಮಕ್ಕೆ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾನೆ. ಈತ ಈ ಹಿಂದೆಯೂ ಹಿಂದೂ ದೇವತೆಗಳನ್ನು ಅವಮಾನಿಸಿ ಪೋಸ್ಟ್ ಹಾಕಿದ್ದ. ಮತ್ತೊಂದು ಕಡೆ ರಾವತ್ ಸಾವಿನ ಸುದ್ದಿಯ ಮಾಧ್ಯಮ ವರದಿಗೆ ಅಸಭ್ಯ ಇಮೋಜಿ ಹಾಕಿದ ಕಾರಣಕ್ಕೆ ಜಮ್ಮು ಕಾಶ್ಮೀರ ಬ್ಯಾಂಕ್ ನ ಮಹಿಳಾ ಉದ್ಯೋಗಿ ಆಫ್ರೀನ್ ಳನ್ನು ಅಮಾನತು ಮಾಡಲಾಗಿದೆ. ಈ ನಡುವೆ ಕೇರಳದ ಸರ್ಕಾರಿ ವಕೀಲರೊಬ್ಬರು ರಾವತ್ ಸಾವಿನ ಬಗ್ಗೆ ಅತ್ಯಂತ ಕೀಳು ಮನಸ್ಥಿತಿಯ ಪೋಸ್ಟ್ ಹಾಕಿದ್ದಾರೆ. ಆದರೆ ಈ ಬಗ್ಗೆ ಪಿಣರಾಯಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ತಮಿಳುನಾಡಿನ Maridhas ಹೆಸರಿಗ ಯೂ ಟ್ಯೂಬರ್ ಒಬ್ಬನನ್ನು ತಮಿಳುನಾಡು ಪೊಲೀಸರು ತಾಲಿಬಾನಿ ಮನಸ್ಥಿತಿಯ ಕಾರಣಕ್ಕೆ ಬಂಧಿಸಿದ್ದಾರೆ. ಈ ಯೂಟ್ಯೂಬರ್ ರಾವತ್ ಸಾವಿನ ಕುರಿತಂತೆ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ.
ಶಿಕ್ಷಕರ ತಲೆಗೆ ಕಸದ ಬುಟ್ಟಿ ಹಾಕಿ ಹಲ್ಲೆ : ದಾವಣಗೆರೆಯಲ್ಲಿ ಅನಾಗರಿಕ ಘಟನೆ
ದಾವಣಗೆರೆ : ಭವಿಷ್ಯದ ಪ್ರಜೆಗಳೆಂದು ಕರೆಸಿಕೊಂಡಿರುವ ಯುವ ಸಮಾಜ ಸಿಕ್ಕಾಪಟ್ಟೆ ಹಾದಿ ತಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಓದಿನಲ್ಲಿ ಮಗ್ನರಾಗಬೇಕಾಗಿರುವುದು ಅಪರಾಧ ಪ್ರಕಣಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಲ್ಲ.
ಈ ನಡುವೆ ಬುದ್ದಿ ಹೇಳ್ತಾರೆ ಅನ್ನುವ ಏಕೈಕ ಕಾರಣಕ್ಕೆ ವಿದ್ಯಾರ್ಥಿಗಳ ಗುಂಪೊಂದು ಶಿಕ್ಷಕರ ತಲೆಗೆ ಕಸದ ಬುಟ್ಟಿ ಹಾಕಿ ಹಲ್ಲೆ ನಡೆಸಿದ ಘಟನೆ ಚನ್ನಗಿರಿ ತಾಲೂಕಿನ ನಲ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ವಿದ್ಯಾರ್ಥಿಗಳನ್ನು ಟಿಸಿ ಕೊಟ್ಟು ಕಳುಹಿಸಲಾಗಿದೆ. ಈ ನಡುವೆ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸುವಂತೆ ಆಗ್ರಹ ಕೇಳಿ ಬಂದಿದೆ.
ಇನ್ನು ಘಟನೆಯ ಬೆನ್ನಲ್ಲೇ ಶಾಲೆಗೆ ದೌಡಾಯಿಸಿದ ಶಾಸಕ ಮಾಡಾಳಿ ವಿರೂಪಾಕ್ಷಪ್ಪ, ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಗ್ರಾಮಸ್ಥರು, ಪೋಷಕರು, ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಇದೇ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಟಿಸಿ ಕೊಡುವ ನಿರ್ಧಾರಕ್ಕೆ ಬರಲಾಯ್ತು.
ಈ ಹಲ್ಲೆ ನಡೆಸಿದ 10ನೇ ತರಗತಿಯ ಹುಡುಗರ ಗ್ಯಾಂಗ್ ಕಳೆದ ಕೆಲ ದಿನಗಳಿಂದ ಕಿಡಿಗೇಡಿ ಕೃತ್ಯಗಳನ್ನು ಎಸಗುತ್ತಿತ್ತು. ಈ ಬಗ್ಗೆ ಶಾಲೆಯ ಹಿಂದಿ ಶಿಕ್ಷಕರೊಬ್ಬರು ಪದೇ ಪದೇ ಬುದ್ದಿಮಾತು ಹೇಳಿದ್ದರು. ಹುಡುಗು ಬುದ್ದಿ ಇಂದಲ್ಲ ನಾಳೆ ಬದಲಾಗುತ್ತಾರೆ ಅನ್ನುವುದು ಅವರ ನಿರೀಕ್ಷೆಯಾಗಿತ್ತು. ಆದರೆ ಸಂಯಮದಿಂದ ಕಾದ ಶಿಕ್ಷಕರಿಗೆ ಹಲ್ಲೆ ಮಾಡಲು ಮುಂದಾದ ಈ ಪುಂಡರ ಗ್ಯಾಂಗ್ ಹಿಂದಿ ಶಿಕ್ಷಕರ ತಲೆಗೆ ಕಸದ ಬುಟ್ಟಿ ಮುಚ್ಚಿ ಹಲ್ಲೆ ನಡೆಸಿದೆ. ಈ ಘಟನೆಯನ್ನು ಕೆಲ ವಿದ್ಯಾರ್ಥಿಗಳು ವಿಡಿಯೋ ಮಾಡಿಕೊಂಡಿದ್ದರು.
Discussion about this post