ಬೆಂಗಳೂರು : ಚೈನಾ ವೈರಸ್ ಕೊರೋನಾದ ಹೊಸ ರೂಪಾಂತರಿ ತಳಿ ಒಮಿಕ್ರೋನ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ ಚಿಕಿತ್ಸೆಗಳ ಬಗ್ಗೆ ಮಾರ್ಗಸೂಚಿ ಪ್ರಕಟಿಸಿದೆ.
ಒಮಿಕ್ರೋನ್ ಸೋಂಕು ದೃಢಪಟ್ಟವರಿಗೆ 10 ದಿನ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾಗಿದ್ದು, ಆಸ್ಪತ್ರೆ ಬಿಡುಗಡೆಯೂ ಮುನ್ನ ಎರಡು ಸಲ ನೆಗೆಟಿವ್ ವರದಿ ಮತ್ತು ಒಂದು ವಾರ ಹೋಮ್ ಕ್ವಾರಂಟೈನ್ ಗೆ ಆದೇಶಿಸಿ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಒಂದು ವೇಳೆ ಹೋಮ್ ಕ್ವಾರಂಟೈನ್ ವ್ಯವಸ್ಥೆ ಇಲ್ಲದಿದ್ರೆ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಗಾಗಬೇಕಾಗುತ್ತದೆ.
ಈ ಬಾರಿಯ ಮಾರ್ಗಸೂಚಿ ಕಠಿಣವಾಗಿದ್ದು, 10 ದಿನಗಳ ಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂರು ದಿನಗಳ ಮುನ್ನ ಸೋಂಕಿನ ಯಾವುದೇ ಲಕ್ಷಣಗಳಿರಬಾರದು. ಸತತ ನಾಲ್ಕು ಆಮ್ಲಜನಕ ಪ್ರಮಾಣ ಶೇ95ಕ್ಕಿಂತ ಹೆಚ್ಚಿರಬೇಕು. 24 ಗಂಟೆಗಳಲ್ಲಿ ಎರಡು ಬಾರಿ ನೆಗೆಟಿವ್ ವರದಿ ಬರಬೇಕು.
ಈ ನಡುವೆ ಮುಂಬೈನಲ್ಲಿ ಒಮಿಕ್ರೋನ್ ಅಬ್ಬರ ಹೆಚ್ಚಾಗಿದೆ. ಗುಜರಾತ್ ನಲ್ಲಿ ಶುಕ್ರವಾರ ಇಬ್ಬರಿಗೆ ಸೋಂಕು ತಗುಲಿದ ಬೆನ್ನಲ್ಲೇ ಮುಂಬೈನಲ್ಲಿ ಮೂರು ವರ್ಷದ ಮಗು 7 ಮಂದಿಗೆ ಒಮಿಕ್ರೋನ್ ಪಾಸಿಟಿವ್ ಬಂದಿದೆ. ಈ ಮೂಲಕ ದೇಶದಲ್ಲಿ ಒಮಿಕ್ರೋನ್ ಪೀಡಿತರ ಸಂಖ್ಯೆ 32ಕ್ಕೆ ಏರಿದೆ.
ಗುಜರಾತ್ ನಲ್ಲಿ ಜಿಂಬಾಬ್ವೆಯಿಂದ ಬಂದ ಇಬ್ಬರಲ್ಲಿ ಒಮಿಕ್ರೋನ್ ಪತ್ತೆಯಾದರೆ, ಮುಂಬೈನಲ್ಲಿ ತಾಂಜೇನಿಯಾ, ಬ್ರಿಟನ್, ದಕ್ಷಿಣ ಆಫ್ರಿಕಾದಿಂದ ಬಂದವರಿಗೆ ಒಮಿಕ್ರೋನ್ ಪಾಸಿಟಿವ್ ಬಂದಿದೆ.ಪುಣೆಯಲ್ಲಿ ನೈಜಿರಿಯಾ ಮಹಿಳೆಯ ಸಂಪರ್ಕದಲ್ಲಿದ್ದ ನಾಲ್ಕು ಮಂದಿಯಲ್ಲೂ ಒಮಿಕ್ರೋನ್ ಪತ್ತೆಯಾಗಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಒಮಿಕ್ರೋನ್ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
Discussion about this post