ವಿಶ್ವಕ್ಕೆ ಕೊರೋನಾ ಹಂಚಿದ್ದ ಚೀನಾದಲ್ಲಿ ಕಳೆದ ಕೆಲ ತಿಂಗಳುಗಳಿಂದ ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾಗಿದೆ. ಹೀಗಾಗಿ ಡ್ರ್ಯಾಗನ್ ರಾಷ್ಟ್ರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿತ್ತು. ಈ ನಡುವೆ ಬುಧವಾರ ಚೀನಾದಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ನೂರಾರು ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದ್ದು, ಶಾಲೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ.
Shanghai, Xi’an ಕ್ಸಿಯಾನ್, Gansu ( ಗಾನ್ಸೂ ) ಪ್ರದೇಶದಲ್ಲಿ ಪ್ರವಾಸಕ್ಕೆಂದು ಬಂದ ಹಿರಿಯ ದಂಪತಿಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇವರ ಪ್ರಾಥಮಿಕ ಸಂಪರ್ಕಿತ ಸಂಖ್ಯೆ ಸಿಕ್ಕಾಪಟ್ಟೆ ಇರುವ ಕಾರಣ ಬೀಜಿಂಗ್ನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಪ್ರವಾಸಿಗರಿಗೆ ಕಡ್ಡಾಯ ಕೊರೋನಾ ಪರೀಕ್ಷೆ, ಬೇರೆ ದೇಶಗಳಿಗೆ ನಿಗದಿಯಾಗಿದ್ದ ವಿಮಾನಗಳ ಹಾರಾಟ ರದ್ದು, ಶಾಲೆಗಳಿಗೆ ಕಡ್ಡಾಯ ರಜೆ ನೀಡಲಾಗಿದೆ.
ಮಾತ್ರವಲ್ಲದೆ ಎರೆನ್ ಹೋಟ್ ನಗರದಲ್ಲಿ ಪ್ರಯಾಣವನ್ನು ನಿರ್ಬಂಧಿಸಲಾಗಿದೆ. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬರುವಂತೆ ಜನರಿಗೆ ಹೇಳಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಜೊತೆಗೆ ಪ್ರವಾಸಿ ತಾಣ, ಮನೋರಂಜನಾ ಸ್ಥಳಗಳ ಭೇಟಿ ನಿಷೇಧಿಸಲಾಗಿದೆ. ಬೀಜಿಂಗ್ ಹತ್ತಿರದ ಕೆಲ ಪ್ರದೇಶಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಇನ್ನು ಸೋಂಕು ಪತ್ತೆಯಾದ ದಂಪತಿ ಶಾಂಘೈನಲ್ಲಿದ್ದ ಕಾರಣ ಅಲ್ಲೂ ಎಚ್ಚರಿಕೆ ವಹಿಸಲಾಗಿದೆ.
Discussion about this post