ನವದೆಹಲಿ : ಕತಾರ್ ನಲ್ಲಿ ಆಯೋಜಿಸಲಾಗಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ವೇಳೆ ವಿವಾಹೇತರ ಲೈಂಗಿಕ ಸಂಪರ್ಕಕ್ಕೆ ನಿಷೇಧ ಹೇರಲಾಗಿದೆ. ಈ ಸಂಬಂಧ ಹಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಹೇಳಿ ಕೇಳಿ ಆರಬ್ ರಾಷ್ಟ್ರದಲ್ಲಿರುವ ಕಾನೂನುಗಳು ಸಿಕ್ಕಾಪಟ್ಟೆ ಕಠಿಣ, ಮಾತ್ರವಲ್ಲದೆ ಶಿಕ್ಷೆಯೂ ಕೂಡಾ ಅಲ್ಲೇ ಡ್ರಾ ಅಲ್ಲೇ ಬಹುಮಾನ ಅನ್ನುವಂತಿದೆ. ಹೀಗಿರುವಾಗ ವಿವಾಹೇತರ ಲೈಂಗಿಕ ಸಂಪರ್ಕ ಕಾನೂನು ಫಿಫಾ ವಿಶ್ವಕಪ್ ಸಂದರ್ಭದಲ್ಲಿ ಹೇಗೆ ಜಾರಿಗೆ ಬರುತ್ತದೆ ಅನ್ನುವ ಕುತೂಹಲವಿದೆ.
ದಂಪತಿಗಳು ಮಾತ್ರ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಅವಕಾಶವಿದ್ದು, ಸಲಿಂಗಕಾಮವನ್ನು ಕೂಡಾ ನಿಷೇಧಿಸಿದೆ. ಅರಬ್ ರಾಷ್ಟ್ರಗಳಲ್ಲಿ ಸಲಿಂಗ ಸಂಬಂಧಕ್ಕೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ.
ಇನ್ನು ಮಾದಕ ವಸ್ತುಗಳ ಬಳಕೆ ಬಗ್ಗೆ ಕೂಡಾ ಇಲ್ಲಿ ಕಠಿಣ ನಿಯಮಗಳಿದೆ. ಹೀಗಾಗಿ ಪಂದ್ಯದ ಸಂದರ್ಭದಲ್ಲಿ ಮಾದಕವಸ್ತು ಕಳ್ಳ ಸಾಗಾಣಿಕೆ ಮಾಡಿದರೆ ಶಿಕ್ಷೆ ಖಚಿತ ಎಂದು ಎಚ್ಚರಿಸಲಾಗಿದೆ. ಆದರೆ ಮದ್ಯದ ವಿಚಾರದಲ್ಲಿ ಅರಬ್ ರಾಷ್ಟ್ರ ರಿಲ್ಯಾಕ್ಸ್ ನೀಡಿದ್ದು, ಮದ್ಯ ಸೇವನೆಗೆ ಪ್ರತ್ಯೇಕ ವಲಯ ತೆರೆಯಲು ನಿರ್ಧರಿಸಲಾಗಿದೆ.
ವಿಶ್ವಕಪ್ ಪುಟ್ಭಾಲ್ ಪಂದ್ಯಾಟ ಸಂದರ್ಭದಲ್ಲಿ ಸೆಕ್ಸ್ ಚಟುವಟಿಕೆಗಳು ಸಿಕ್ಕಾಪಟ್ಟೆ ನಡೆಯುತ್ತದೆ. ಮಾದಕ ವಸ್ತು ವ್ಯವಹಾರ ಕೂಡಾ ಕಡಿಮೆ ಇರೋದಿಲ್ಲ. ಹಾಗಿರುವಾಗ ಕತಾರ್ ಹೇಗೆ ಪಂದ್ಯಾಟವನ್ನು ಯಶಸ್ವಿಯಾಗಿಸುತ್ತದೆ ಅನ್ನುವ ಕುತೂಹಲವಿದೆ. ನವೆಂಬರ್ 21 ರಂದು ಪಂದ್ಯಾಟ ಪ್ರಾರಂಭವಾಗಲಿದ್ದು, 32 ತಂಡಗಳು ಆಡುತ್ತಿರುವ ಕೊನೆಯ ವಿಶ್ವಕಪ್ ಇದಾಗಿದೆ. 2026ರಲ್ಲಿ 48 ತಂಡಗಳು ವಿಶ್ವಕಪ್ ಕಣಕ್ಕೆ ಇಳಿಯಲಿದೆ.
Discussion about this post