ಬೆಂಗಳೂರು : ಜೆಡಿಎಸ್ ಕಾರ್ಯಕರ್ತರ ಸೋಮಾರಿತನದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕೆಲ ದಿನಗಳ ಹಿಂದೆ ಚಾಟಿ ಬೀಸಿದ್ದರು. ಕಾರ್ಯಕರ್ತರು ಸೋಮಾರಿಗಳಾಗಿದ್ದಾರೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ಕುಮಾರಸ್ವಾಮಿ ಹೇಳಿರುವ ಮಾತುಗಳಲ್ಲಿ ಸತ್ಯಾಂಶವಿತ್ತು. ಒಂದು ವೇಳೆ ಜೆಡಿಎಸ್ ಕಾರ್ಯಕರ್ತರು ಚುರುಕಾಗಿ ಪಕ್ಷ ಸಂಘಟನೆ ಮಾಡುತ್ತಿದ್ರೆ ಗಟ್ಟಿಯಾದ ನಿಲ್ಲಬೇಕಾದ ಪ್ರತಿಪಕ್ಷ ಈ ಸ್ಥಿತಿಗೆ ಬರುತ್ತಿರಲಿಲ್ಲ. ಮಾತ್ರವಲ್ಲದೆ ಕುಮಾರಸ್ವಾಮಿ ಪ್ರತಿಯೊಬ್ಬರ ಕೈಗೆ ಸಿಗುವ ಮನುಷ್ಯನಾಗಿರುವ ಕಾರಣ, ಪಕ್ಷ ಸಂಘಟನೆ ವಿಚಾರ ಕುರಿತಂತೆ ಮುಕ್ತವಾಗಿ ಚರ್ಚಿಸಲು ಅವಕಾಶವಿದೆ. ಆದರೆ ಕುಮಾರಸ್ವಾಮಿ ಹತ್ತಿರ ಬಂದವರೆಲ್ಲಾ ಅಣ್ಣಾ ನೀನು ಗ್ರೇಟ್ ಅಂದು, ಸೆಲ್ಫಿ ತೆಗೆದು ಹೊರಟ್ರೆ ಬಿಟ್ರೆ ಮತ್ತೇನೂ ಮಾಡಲಿಲ್ಲ. ಇನ್ನು ಕುಮಾರಸ್ವಾಮಿಯವರು ಕೂಡಾ ಪಕ್ಷಕ್ಕಾಗಿ ಬೆವರು ಸುರಿಸಬಲ್ಲವರನ್ನು ಬೆಳೆಸಲಿಲ್ಲ. ತಳಮಟ್ಟದಲ್ಲಿ ಕಾರ್ಯಕರ್ತರ ಪಡೆಯನ್ನೂ ಕೂಡಾ ಕಟ್ಟಲಿಲ್ಲ. ಸುತ್ತಮುತ್ತಲಿನವರ ಮಾತು ಕೇಳಿಯೇ ಅವರು ಸೋತರು.
ಒಂದು ವೇಳೆ ಸಂಘಟನೆ ಗಟ್ಟಿಯಾಗಿದೆ ಅನ್ನುವುದಾದ್ರೆ, ವಿಧಾನ ಪರಿಷತ್ ಸದಸ್ಯರಾಗಿರುವ ಬಿಎಂ ಫಾರೂಕ್ ಅವರು ತಮ್ಮ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಎಷ್ಟರ ಮಟ್ಟಿಗೆ ಪಕ್ಷ ಸಂಘಟನೆ ಮಾಡಿದ್ದಾರೆ.ಅದೆಷ್ಟು ಜೆಡಿಎಸ್ ಕಾರ್ಯಕರ್ತರನ್ನು ಅವರು ತಯಾರಿ ಮಾಡಿದ್ದಾರೆ.
ಈ ನಡುವೆ ಕುಮಾರಸ್ವಾಮಿಯವರು ಕಾರ್ಯಕರ್ತರ ಬಗ್ಗೆ ಹೇಳಿದ ಮಾತು ಇದೀಗ ವೈರಲ್ ಆಗಿದೆ. ಇದು ಕುಮಾರಸ್ವಾಮಿಯವರ ಬೇಸರಕ್ಕೆ ಕಾರಣವಾಗಿದ್ದು, ಈ ಬಗ್ಗೆ ನೇರವಾಗಿ ಪಬ್ಲಿಕ್ ಟಿವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾರ್ಯಕರ್ತರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ನಾನು ಬಂದಾಗ ನನ್ನ ಜೊತೆ ಬರ್ತಾರೆ, ನಾನು ಬೆಂಗಳೂರಿಗೆ ಹೋದ್ರೆ ಮನೆಗೆ ಹೋಗಿ ಮಲಗುತ್ತಾರೆ, ಈ ಬಗ್ಗೆ ನಾನು ಅಸಮಾಧಾನ ಹೊರ ಹಾಕಿರುವುದು ಹೌದು.
ಪಕ್ಷ ಸಂಘಟನೆ ಸಲುವಾಗಿ ಈ ಮೂಲಕ ಮನವಿ ಮಾಡಿದ್ದೇನೆ. ಆದರೆ ಅದನ್ನೇ ಇಟ್ಟುಕೊಂಡು ಕುಮಾರಸ್ವಾಮಿ ಕಾರ್ಯಕರ್ತರಿಗೆ ಅವಮಾನ ಮಾಡಿದ. ಅವಹೇಳನ ಎಂದು ಬಿಂಬಿಸಲಾಗುತ್ತಿದೆ. ನಿಮಗೆ ದೇವರು ಅನ್ನುವಂತಿದ್ದು ಇದ್ರೆ, ನಿಮ್ಮ ಆತ್ಮಕ್ಕೆ ನೀವೇ ಪ್ರಶ್ನೆ ಹಾಕಿಕೊಳ್ಳಿ, ಕುಮಾರಸ್ವಾಮಿ ನಾಡಿನ ಜನತೆಗೆ ಏನು ಅನ್ಯಾಯ, ದ್ರೋಹ, ಮೋಸ ಮಾಡಿದ್ದಾನೆ,
ಜನರ ಪ್ರೀತಿ ವಿಶ್ವಾಸ ನೋಡಿ ಪಬ್ಲಿಕ್ ಟಿವಿ ರಂಗಣ್ಣನಿಗೆ ಸಹಿಸಲಾಗುತ್ತಿಲ್ಲ. ನಾನು ನನ್ನ ಕಾರ್ಯಕರ್ತರಿಗೆ ಹುರುಪು ತುಂಬಿಸಲು ಹೊರಟ್ರೆ, ಕಾರ್ಯಕರ್ತರಿಗೆ ಅವಮಾನ ಎಂದು ಬಿಂಬಿಸಲಾಗುತ್ತಿದೆ. ಈ ಪಕ್ಷವನ್ನು ಉಳಿಸಿರುವುದು ಕಾರ್ಯಕರ್ತರು, ಅದನ್ನು ಮಾಧ್ಯಮದವರು ಹೇಳುವುದಿಲ್ಲ.
ಪಕ್ಷ ಉಳಿದಿರುವುದು ಬೆಳೆದಿರುವುದು ನಾಯಕರಿಂದ ಅಲ್ಲ, ಲಕ್ಷಾಂತರ ಕಾರ್ಯಕರ್ತರಿಂದ. ಈ ಪಕ್ಷ ಇನ್ನೂ ಬದುಕಿದ್ರೆ ರಂಗಣ್ಣವರೇ, ಪಬ್ಲಿಕ್ ಟಿವಿಯವರಿಗೆ ಹೇಳ್ತೇನೆ, ಮೈಸೂರು ಕೆ ಆರ್ ಎಸ್ ಬಗ್ಗೆ ಹಳ್ಳಿಯ ಭಾಷೆಯಲ್ಲಿ ಮಾತನಾಡಿದ್ದಕೆ ಒಂದು ವಾರ ಪ್ರಚಾರ ಕೊಟ್ರು. ನನಗೆ ಪ್ರಚಾರವೇ ಬೇಕಾಗಿಲ್ಲ ಎಂದು ಮಾಧ್ಯಮಗಳ ವಿರುದ್ಧ ಗುಡುಗಿದ್ದಾರೆ.
Discussion about this post