ಹೈದರಾಬಾದ್ : ತೆಲುಗು ಮೂವೀಸ್ ಆರ್ಟಿಸ್ಟ್ಸ್ ಅಸೋಶಿಯೇಷನ್ (MAA – ಮಾ) ಗೆ ಭಾನುವಾರ ನಡೆದ ಚುನಾವಣೆಯಲ್ಲಿ ನಟ ಪ್ರಕಾಶ್ ರಾಜ್ ಹೀನಾಯವಾಗಿ ಸೋತಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ನಟ ಹಾಗೂ ನಿರ್ಮಾಪಕ ಮೋಹನ್ ಬಾಬು ಅವರ ಮಗ ಮಂಚು ವಿಷ್ಣು ವಿರುದ್ಧ ಸ್ಪರ್ಧಿಸಿದ್ದ ಅವರು, ಅಂದಾಜು 107 ಮತಗಳ ಅಂತರದಿಂದ ಸೋಲಿನ ರುಚಿ ಕಂಡಿದ್ದಾರೆ. ಅಂತಿಮವಾಗಿ ವಿಷ್ಣು ಮಂಚು 381 ಮತ ಗಳಿಸಿದರೆ ಪ್ರಕಾಶ್ ರಾಜ್ 274 ಮತ ಗಳಿಸಿದ್ದಾರೆ.
ಅಸೋಶಿಯೇಷನ್ ಚುನಾವಣೆಯಲ್ಲಿ ಪ್ರಕಾಶ್ ರಾಜ್ ಬಳಗದ ನಟ ಶ್ರೀಕಾಂತ್ ಅವರು ಉಪಾಧ್ಯಕ್ಷ ಸ್ಥಾನವನ್ನು ಗೆದ್ದಿದ್ದು ಒಟ್ಟು 8 ಸ್ಥಾನಗಳನ್ನು ಪ್ರಕಾಶ್ ರಾಜ್ ಪ್ಯಾನಲ್ ಗೆದ್ದುಕೊಂಡಿದೆ. 10 ಸ್ಥಾನಗಳನ್ನು ಮಂಚು ವಿಷ್ಣು ಬಳಗ ಗೆದ್ದುಕೊಂಡಿದೆ.
ಪ್ರಕಾಶ್ ರೈ ಅವರು ಮೂಲತಃ ತೆಲುಗು ನಟರಲ್ಲ. ಹೀಗಾಗಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ವಿರೋಧ ವ್ಯಕ್ತವಾಗಿತ್ತು. ಹಲವು ಸ್ಟಾರ್ ಕಲಾವಿದರು ಪ್ರಕಾಶ್ ರಾಜ್ ಬೆಂಬಲಕ್ಕೆ ಧಾವಿಸಿದ್ದ ಕಾರಣ ಚುನಾವಣೆಗೆ ಸ್ಪರ್ಧಿಸಿದ್ದರು.
ಅಸೋಸಿಯೇಷನ್ನ 925 ಸದಸ್ಯರಲ್ಲಿ 883 ಸದಸ್ಯರು ಮತದಾನದ ಹಕ್ಕು ಹೊಂದಿದ್ದರು. ಈ ಪೈಕಿ 655 ಮತ ಚಲಾವಣೆಗೊಂಡಿದ್ದವು.
Discussion about this post