ಜನ ನಾಲ್ಕು ಕಾಸು ಮಾಡಿಕೊಳ್ಳಬೇಕು ಅಂತಾ ಏನೆಲ್ಲಾ ಮಾರ್ಗ ಹುಡುಕುತ್ತಾರೆ ಅನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಒಂದು ಹೆಜ್ಜೆ ಮುಂದೆ ಹೋಗಿರುವ ಈಜಿಪ್ಟ್ ಕೈರೋದ ಮೃಗಾಲಯ ಸಿಬ್ಬಂದಿ ಝೀಬ್ರಾ ಡ್ಯೂಪ್ ಸೃಷ್ಟಿಸಿದ್ದಾರೆ.
ಕೈರೋದಾ International Garden municipal park ಆಡಳಿತ ಮಂಡಳಿ ಬರೋ ಪ್ರವಾಸಿಗರಿಗೆ ಝೀಬ್ರಾ ದರ್ಶನ ನೀಡಲು ನಿರ್ಧರಿಸಿದೆ. ಆದರೆ ಎಲ್ಲೂ ಝೀಬ್ರಾ ಸಿಗಲಿಲ್ಲ. ಹಾಗಂತ ಅವರು ತಲೆ ಕೆಡಿಸಿಕೊಳ್ಳಲಿಲ್ಲ. ತಲೆ ಓಡಿಸಿದರು. ಎರಡು ಕತ್ತೆಗಳನ್ನು ಹಿಡಿದು ತಂದು ಅದಕ್ಕೆ ಝೀಬ್ರಾದಂತೆ ಬಣ್ಣ ಬಳಿದರು. ಬಂದ ಪ್ರವಾಸಿಗರಿ ಇದೇ ನೋಡಿ ಝೀಬ್ರಾ ಎಂದರು. ಬಂದವರು ಕೂಡಾ ತಲೆಯಾಡಿಸಿ ಹೋದರು.
ಆದರೆ ಇತ್ತೀಚೆಗೆ ಮೃಗಾಯಲಕ್ಕೆ ಭೇಟಿ ಕೊಟ್ಟ ಮಹಮ್ಮದ್ ಸರ್ಹಾನ್ ಎಂಬ ವಿದ್ಯಾರ್ಥಿಗೆ ಅನುಮಾನ ಬಂದಿದೆ. ಸಾಕಷ್ಟು ಝೀಬ್ರಾ ನೋಡಿದವನಿಗೆ ಇವು ಅವಲ್ಲ ಎಂದು ಅನ್ನಿಸಿದೆ. ಕಿವಿ, ಕುತ್ತಿಗೆ ಮೇಲಿಲ್ಲದ ರೋಮ ಅನುಮಾನಕ್ಕೆ ಪುಷ್ಟಿ ನೀಡಿದೆ. ಸೂಕ್ಷ್ಮವಾಗಿ ನೋಡಿದರೆ ಬಿಳಿ ಕತ್ತೆಗೆ ಹೊಡೆದ ಕಪ್ಪು ಬಣ್ಣ ಅಲ್ಲಲ್ಲಿ ಕಳಚಿಕೊಂಡಿತ್ತು. ವಿಡಿಯೋ ಮಾಡಿ ನೋಡಿದ್ರೆ ಇದು ಪಕ್ಕಾ ಕತ್ತೆಗಳು ಎಂದು ಸಾಬೀತಾಗಿದೆ.
ತಕ್ಷಣ ವಿಡಿಯೋವನ್ನು ಫೇಸ್ ಬುಕ್ ಪೇಜ್ ಗೆ ಹಾಕಿದ್ದಾನೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಅಂತರ್ ರಾಷ್ಟ್ರೀಯ ಮಾಧ್ಯಮಗಳು ಮೃಗಾಲಯದ ನಿರ್ದೇಶಕರನ್ನು ಸಂಪರ್ಕಿಸಿತು. ಆಗ ಉತ್ತರಿಸಿದ ಮೊಹಮ್ಮದ್ ಸುಲ್ತಾನ್, “ಅವನು ಹಾಕಿರುವುದು ಫೇಕ್ ನ್ಯೂಸ್ ನಮ್ಮಲ್ಲಿರುವುದು ಝೀಬ್ರಾಗಳೇ ಎಂದು ವಾದಿಸಿದ್ದಾರೆ.
ಹಾಗಂತ ಡ್ಯೂಪ್ ಗಳನ್ನು ಸೃಷ್ಟಿಸುವುದು ಮೊದಲೇನಲ್ಲ. 2009ರಲ್ಲಿ ಗಾಝಾದಲ್ಲಿ, ಕತ್ತೆಗಳಿಗೆ ಬಣ್ಣ ಬಳಿದು ಝೀಬ್ರಾ ಎಂದು ತೋರಿಸಲಾಗಿತ್ತು.
2012ರಲ್ಲೂ ಗಾಝಾದಲ್ಲಿ ಬೇರೆ ಬೇರೆ ಪ್ರಾಣಿಗಳಿಗೆ ಬೇರೆ ಬೇರೆ ಪ್ರಾಣಿಗಳ ಬಣ್ಣ ಬಳಿಯಲಾಗಿತ್ತು. ಇವು ಅಲ್ಲಿ ನಿರ್ಬಂಧ ಪರಿಸ್ಥಿತಿ ಇದ್ದ ಕಾರಣಕ್ಕೆ ಮಾಡಲಾಗಿತ್ತು.
2103 ರಲ್ಲಿ ಚೀನಾದ ಮೃಗಾಲಯವೊಂದು Tibetan mastiff ನಾಯಿಯನ್ನು ಇಟ್ಟು ಆಫ್ರಿಕಾ ಸಿಂಹ ಎಂದು ನಂಬಿಸಿತ್ತು. ಮತ್ತೊಂದು ಚೀನಾ ಮೃಗಾಲಯ ಪ್ಲಾಸ್ಟಿಕ್ ಪೆಂಗ್ವಿನ್ ಗೆ ಗಾಳಿ ತುಂಬಿ ನೀರಲ್ಲಿ ತೇಲಿ ಬಿಟ್ಟಿತ್ತು. ನೀರು ಖಾಲಿಯಾದ ವೇಳೆ ಎಡವಟ್ಟು ಬಹಿರಂಗಗೊಂಡಿತ್ತು. ಇತ್ತೀಚೆಗೆ ಚೀನಾದಲ್ಲಿ ಪ್ಲಾಸ್ಟಿಕ್ ಚಿಟ್ಟೆಗಳನ್ನು ಇಟ್ಟು ಜೀವಂತ ಚಿಟ್ಟೆಗಳೆಂದು ನಂಬಿಸಲಾಗಿತ್ತು.