ಮಧ್ಯರಾತ್ರಿ ಆರಾಧ್ಯ ದೈವನ ಹುಟ್ಟುಹಬ್ಬ ಆಚರಿಸಿದ ವಿಜಿ
ಸ್ಟೈಲ್ ಗೆ, ಸರಳತೆಗೆ , ಸ್ಫೂರ್ತಿಗೆ, ಸ್ಟಾರಿಸಂಗೆ ಮತ್ತೊಂದು ಹೆಸ್ರೇ ಸೂಪರ್ ಸ್ಟಾರ್ ತಲೈವರ್ ರಜಿನಿಕಾಂತ್. ಸೂಪರ್ ಸ್ಟಾರ್ ರಜಿನಿಕಾಂತ್ ಸೂಪರ್ ಸ್ಟಾರ್ ಗಳಿಗೆಲ್ಲಾ ರೋಲ್ ಮಾಡೆಲ್.
ಕನ್ನಡ ನಾಡಲ್ಲಿ ಹುಟ್ಟಿ ಬೆಳೆದು ಕನ್ನಡಿಗನಾಗಿ, ಕಲಾವಿದನಾಗಿ ಜಗತ್ತಿಗೆ ಮಾದರಿಯಾದ, ಜಗತ್ತಿಗೆ ಸೂಪರ್ ಸ್ಟಾರ್ ಆದ ಶಿವಾಜಿ ಗಾಯ್ಕವಾಡ್ ಅಲಿಯಾಸ್ ರಜಿನಿಕಾಂತ್ ಗೆ ಇವತ್ತು ಹುಟ್ಟುಹಬ್ಬದ ಸಂಭ್ರಮ. 70ನೇ ವಸಂತಕ್ಕೆ ಕಾಲಿಟ್ಟಿರೋ ಈ ಚಿರ ಯುವಕ ಸ್ಟೈಲ್ ಕಿಂಗ್ ರಜಿನಿಕಾಂತ್ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಈ ನಡುವೆ ದುನಿಯಾ ಖ್ಯಾತಿಯ ವಿಜಿ ಕೂಡಾ ತನ್ನ ಆರಾಧ್ಯ ದೈವವಾಗಿರುವ ರಜನಿಕಾಂತ್ ಅವರ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಕೆ.ಆರ್ ಮಾರುಕಟ್ಟೆಯ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿಮಾನಿಗಳ ಸಂಘದವರು ಸಲಗ ಟೀಮ್ ಜೊತೆ ಮಧ್ಯರಾತ್ರಿ ಸೂಪರ್ ಸ್ಟಾರ್ ಹುಟ್ಟುಹಬ್ಬವನ್ನಆಚರಿಸಿದ್ದಾರೆ.
ಮಿಡ್ ನೈಟ್ ಕೇಕ್ ಕಟ್ ಮಾಡಿದ ಸಲಗ ಟೀಂ ರಜನಿಕಾಂತ್ ಅವರಿಗೆ ಶುಭ ಕೋರಿದೆ.
ತಲೈವರ್ ರಜಿನಿಕಾಂತ್ ಅವರನ್ನ ಸ್ಫೂರ್ತಿಯನ್ನಾಗಿಸಿಕೊಂಡೇ ಚಿತ್ರರಂಗಕ್ಕೆ ಬಂದವರಲ್ಲಿ ದುನಿಯಾ ವಿಜಯ್ ಕೂಡ ಒಬ್ಬರು. ದುನಿಯಾ ಚಿತ್ರ ಬಂದಾಗ ಸೂಪರ್ ಸ್ಟಾರ್ ವಿಜಿಯವರನ್ನ ಕರೆಸಿಕೊಂಡು ಬೆನ್ನು ತಟ್ಟಿದ್ದರು.
![rajani duniya](https://torrentspree.com/wp-content/uploads/2019/12/rajani-duniya.jpg)
ಸೂಪರ್ ಸ್ಟಾರ್ ರಜಿನಿಕಾಂತ್ ಅಂದ್ರೆ, ಇಂದಿಗೂ ಅದೇ ಅಭಿಮಾನ ಅದೇ ಪ್ರೀತಿಯನ್ನಿಟ್ಟುಕೊಂಡು ಸಾಯೋವರೆಗೂ ಸ್ಫೂರ್ತಿಯಾಗಿರುವ ರಜನಿಕಾಂತ್ ಅವರನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇನೆ ಅನ್ನುತ್ತಾರೆ ದುನಿಯಾ ವಿಜಯ್.
![rajani duniya2](https://torrentspree.com/wp-content/uploads/2019/12/rajani-duniya2.jpg)
ಈ ನಡುವೆ ಸಲಗ ಚಿತ್ರದೊಂದಿಗೆ ಡೈರೆಕ್ಟರ್ ಪಟ್ಟಕೇರಿರುವ ದುನಿಯಾ ವಿಜಯ್ ಹೀರೋ ಆಗಿ ಸ್ಟ್ರಾಂಗ್ ಕಂಬ್ಯಾಕ್ ಮಾಡೋ ಭರವಸೆಯಲ್ಲಿದ್ದಾರೆ.
ಈಗಾಗ್ಲೇ ಮೇಕಿಂಗ್ ವಿಡಿಯೋ ರಿಲೀಸ್ ಮಾಡೋದಕ್ಕೆ ತಯಾರಿ ನಡೆಸಿಕೊಂಡಿರೋ ಸಲಗ ಟೀಂ, ಇದೇ 18ರಂದು ಅದ್ದೂರಿಯಾಗಿ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಲಿದೆ.
ಕೆ.ಪಿ ಶ್ರೀಕಾಂತ್ ನಿರ್ಮಾಣದ ಈ ಚಿತ್ರದಲ್ಲಿ ದುನಿಯಾ ವಿಜಯ್ ಡಾಲಿ ಧನಂಜಯ ಮುಖಾಮುಖಿಯಾಗಿದ್ದು, ಬಹುತೇಕ ಮೆಗಾ ಹಿಟ್ ಟಗರು ಟೀಮ್ ಈ ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದೆ.
Discussion about this post