ಈ ಹಿಂದೆ ಸೈಲೆಂಟ್ ಸುನೀಲನ ಹೆಸರಿನಲ್ಲಿ ಅಗ್ನಿ ಶ್ರೀಧರ್ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಿತ್ತು. ದುನಿಯಾ ಸೂರಿ ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದರು.
ನಿಗದಿಯಂತೆ ಈ ಚಿತ್ರದಲ್ಲಿ ಸೈಲೆಂಟ್ ಸುನೀಲ ನಟಿಸುವುದು ಪಕ್ಕಾ ಆಗಿತ್ತು. ಆಮೇಲೆ ಏನಾಯ್ತೋ ಗೊತ್ತಿಲ್ಲ. ಸಿನಿಮಾ ನಿಂತು ಹೋಯಿತು. ಇದೀಗ ಸಲಗ ಸಿನಿಮಾದ ಕೆಲವು ಚಿತ್ರಗಳು ಇದೇ ವಿಚಾರದಲ್ಲಿ ಸದ್ದು ಮಾಡ್ತಿದೆ.
ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಸಲಗ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು ಈ ಚಿತ್ರದಲ್ಲಿ ಧನಂಜಯ್ ಐಪಿಎಸ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದಾರೆ.
ದುನಿಯಾ ವಿಜಯ್ ರೌಡಿ ಶೀಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಸಲಗ ಚಿತ್ರದ ಮೇಕಿಂಗ್ ಫೋಟೋ ಒಂದು ಬಿಡುಗಡೆಯಾಗಿದೆ. ಇದರಲ್ಲಿ ಪೊಲೀಸ್ ಅಧಿಕಾರಿ ಧನಂಜಯ್ ರೌಡಿ ಶೀಟರ್ ನಂತೆ ಕಾಣಿಸಿಕೊಂಡಿರುವ ದುನಿಯಾ ವಿಜಿಗೆ ಅವಾಜ್ ಹಾಕುತ್ತಿರುವಂತಿದೆ.
ಈ ರೀಲ್ ಫೋಟೋ ರಿಯಲ್ ಕಥೆಯೊಂದನ್ನು ನೆನಪಿಸಿಕೊಂಡಿದೆ.
ಸಿಸಿಬಿ ಆಯುಕ್ತ ಅಲೋಕ್ ಕುಮಾರ್ ಮತ್ತು ಸೈಲೆಂಟ್ ಸುನೀಲ್ ನಡುವೆ ನಡೆದ ಘಟನೆ ಮತ್ತು ಸಲಗ ಚಿತ್ರದ ಮೇಕಿಂಗ್ ಚಿತ್ರ ಗಮನಿಸಿದಾಗ ಇವೆರಡಕ್ಕೂ ಸಂಬಂಧ ಇದ್ಯಾ ಎಂಬ ಪ್ರಶ್ನೆ ಮೂಡುತ್ತಿದೆ. ಅಂದು ನಿಜವಾಗಲೂ ನಡೆದ ಘಟನೆಯಂತೆ ಇಂದು ಸಿನಿಮಾದಲ್ಲಿ ಬಳಸಲಾಗಿದ್ಯಾ ಅನ್ನೋ ಕುತೂಹಲವೂ ಇದೆ.
Discussion about this post