ಭಾರತೀಯ ಕಾರು ಉತ್ಪಾದನ ಸಂಸ್ಥೆಗಳ ಪೈಕಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ, ಕಾರು ಮಾರಾಟ ಜಾಲವನ್ನು ವಿಸ್ತರಿಸಿಕೊಳ್ಳುವ ಸಲುವಾಗಿ ಮೇ ತಿಂಗಳ ಆಫರ್ ಅನ್ನು ಘೋಷಿಸಿದೆ.
ಈ ಆಫರ್ ಗಳು ಸಿಟಿಯಿಂದ ಸಿಟಿಗೆ ಮತ್ತು ಡೀಲರ್ ನಿಂದ ಡೀಲರ್ ಗೆ ಸಣ್ಣ ಮಟ್ಟಿನ ವ್ಯತ್ಯಾಸವಾಗುವ ಸಾಧ್ಯತೆಗಳಿದೆ.
ಈಗ ಬೆಂಗಳೂರಿನಲ್ಲಿ ಲಭ್ಯ ಮಾಹಿತಿ ಪ್ರಕಾರ 20 ರಿಂದ 30 ಸಾವಿರ ಡಿಸ್ಕೌಂಟ್ ಗಳನ್ನು ಘೋಷಿಸಲಾಗಿದೆ.
Maruti Suzuki S-Cross ಕಾರಿನ ಮೇಲೆ 20 ಸಾವಿರ Consumer discount ಮತ್ತು 10 ಸಾವಿರ Corporate Discount ಘೋಷಿಸಲಾಗಿದೆ. ಒಂದು ವೇಳೆ ನೀವು ಕೆಲಸ ಮಾಡುವ ಕಂಪನಿ Nexa ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರೆ 30 ಸಾವಿರ ವಿನಾಯತಿ ದೊರೆಯಲಿದೆ. ಇಲ್ಲವಾದರೆ 20 ಸಾವಿರ ದರ ಕಡಿತವಾಗಲಿದೆ. ( S-Cross ಡಿಸೇಲ್ ಮಾದರಿ ಮಾತ್ರ ಲಭ್ಯ)

Maruti Suzuki S-Cross ನಲ್ಲಿ ನಾಲ್ಕು ಮಾದರಿಗಳು ಲಭ್ಯವಿದ್ದು , Smart Hybrid Sigma ex showroom ದರ 8,85,688 ರೂಪಾಯಿಗಳು. Smart Hybrid Delta 9,97,688 ರೂಪಾಯಿಗಳು, Smart Hybrid Zeta 10,48,688 ರೂಪಾಯಿಗಳು, Smart Hybrid Alpha 11.48.688 ರೂಪಾಯಿಗಳು.
ಇನ್ನು Maruti Suzuki Ciaz ಕಾರುಗಳ ಮೇಲೂ ಆಫರ್ ಗಳನ್ನು ನೀಡಲಾಗಿದ್ದು, 15 ರಿಂದ 25 ಸಾವಿರ ತನಕ ಆಫರ್ ಘೋಷಿಸಲಾಗಿದೆ. 15 ಸಾವಿರ Consumer discount ಮತ್ತು 10 ಸಾವಿರ Corporate Discount ಘೋಷಿಸಲಾಗಿದೆ.
Maruti Suzuki Ciaz ನಲ್ಲಿ 14 ಮಾಡೆಲ್ ಗಳು ಲಭ್ಯವಿದ್ದು, ಅವುಗಳ ದರ ಹೀಗಿದೆ.




ಇನ್ನು Maruti Suzuki Ignis ಮೇಲೆ ಮೇಲೆ 15 ಸಾವಿರ Consumer discount ಮತ್ತು 2.5 ಸಾವಿರ Corporate Discount ಘೋಷಿಸಲಾಗಿದೆ. ಪೆಟ್ರೋಲ್ ಮಾದರಿಯಲ್ಲಿ ಲಭ್ಯವಿರುವ ಕಾರಿನ ದರ ಪಟ್ಟಿ ಹೀಗಿದೆ.


ಇನ್ನು ಬಲೆನೋ ಪ್ರಿಯರಿಗೆ ನಿರಾಶೆ ಕಾದಿತ್ತು, ಹಾಟ್ ಕೇಕ್ ರೀತಿಯಲ್ಲಿ ಕಾರು ಮಾರಾಟ ನಡೆಯುತ್ತಿರುವ ಕಾರಣದಿಂದ Consumer discount ನೀಡಲಾಗಿಲ್ಲ. ಆದರೆ 2.5 ಸಾವಿರ Corporate Discount ಘೋಷಿಸಲಾಗಿದೆ.
Discussion about this post