Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ರಾಜಧಾನಿಯಲ್ಲಿ ಕೊರೋನಾ ಅಬ್ಬರ – ಸಿಎಂ ಕ್ರೇಜಿವಾಲ್ ಗೂ ತಗುಲಿದ ಚೈನಾ ವೈರಸ್

Radhakrishna Anegundi by Radhakrishna Anegundi
January 4, 2022
in ದೇಶ
delhi-chief-minister-arvind-kejriwal-tests-positive-for-covid-19-positivity-rate-in-capital-crosses-6-as-delhi-battles-virus
Share on FacebookShare on TwitterWhatsAppTelegram

ನವದೆಹಲಿ : ದೇಶದ ರಾಜಧಾನಿಯಲ್ಲೂ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದ್ದು, ಅಗತ್ಯ ಕ್ರಮಗಳ ನಡುವೆಯೂ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ.

ಸೋಮವಾರ ದೆಹಲಿಯಲ್ಲಿ 4,099 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು. 2021ರ ಮೇ 18ರ ನಂತರ ನಾಲ್ಕು ಸಾವಿರ ಮೀರಿದ ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲು.

ಈ ನಡುವೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೂ ಕೊರೋನಾ ದೃಢಪಟ್ಟಿದೆ. ಈ ಬಗ್ಗೆ ಕೇಜ್ರಿವಾಲ್ ಅವರೇ ಟ್ವೀಟ್ ಮಾಡಿದ್ದು ತಾವು ಕೊರೋನಾ ಸೋಂಕಿಗೆ ತುತ್ತಾಗಿರುವುದಾಗಿ ಹೇಳಿದ್ದಾರೆ. ತಮಗೆ ಕಡಿಮೆ ರೋಗ ಲಕ್ಷಣಗಳಿದ್ದು ಮನೆಯಲ್ಲೇ ಪ್ರತ್ಯೇಕಗೊಂಡಿದ್ದೇನೆ ಅಂದಿದ್ದಾರೆ.

ಜೊತೆಗೆ ನನ್ನ ಸಂಪರ್ಕಕ್ಕೆ ಬಂದವರು ಪ್ರತ್ಯೇಕವಾಗಿರುವ ಜೊತೆಗೆ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

I have tested positive for Covid. Mild symptoms. Have isolated myself at home. Those who came in touch wid me in last few days, kindly isolate urself and get urself tested

— Arvind Kejriwal (@ArvindKejriwal) January 4, 2022
bommai meeting

ರಾಜ್ಯದಲ್ಲಿ ಒಮಿಕ್ರೋನ್ ಅಬ್ಬರ : ಸೋಂಕು ನಿಯಂತ್ರಣಕ್ಕೆ ತಜ್ಞರ ಜೊತೆ ಸಿಎಂ ಸಭೆ

ಬೆಂಗಳೂರು : ದೇಶದಲ್ಲಿ ಪ್ರಾರಂಭವಾಗಿರುವ ಕೊರೋನಾ ಸೋಂಕಿನ ಮೂರನೇ ಅಲೆ, ರಾಜ್ಯದಲ್ಲೂ ಭೀತಿ ಹುಟ್ಟಿಸಿದೆ. ಈಗಾಗಲೇ ಕರುನಾಡಿನಲ್ಲೂ ಕೊರೋನಾ ಸೋಂಕಿತರ ಸಂಖ್ಯೆ ಏರಲಾರಂಭಿಸಿದ್ದು ಸಹಜವಾಗಿಯೇ ಒಮಿಕ್ರೋನ್ ಅಬ್ಬರವೂ ಜೋರಾಗಿದೆ.

ವಾರದ ಹಿಂದೆ 300 ರಿಂದ 400 ಹೊಸ ಪ್ರಕರಣಗಳು ಪತೀ ನಿತ್ಯ ಪತ್ತೆಯಾಗುತ್ತಿತ್ತು. ಆದರೆ ಈಗ ಈ ಸಂಖ್ಯೆ 1200ರ ಗಡಿ ದಾಟಿದೆ. ಇದೇ ವೇಗ ಮುಂದುವರಿದರೆ ಜನವರಿ 15ರ ಹೊತ್ತಿಗೆ ನಿತ್ಯ 5 ಸಾವಿರ ಪ್ರಕರಣಗಳು ಪತ್ತೆಯಾಗಲಿದೆ. ಜನವರಿಗೆ ಅಂತ್ಯಕ್ಕೆ ಈ ಸಂಖ್ಯೆ 20 ಸಾವಿರ ತಲುಪಿದರೂ ಅಚ್ಚರಿ ಇಲ್ಲ. ಒಂದು ವೇಳೆ ಈ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಏರಿದರೆ ಆರೋಗ್ಯ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ.

 ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕೊರೋನಾ ನಿಯಂತ್ರಣ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಸಭೆ ಕರೆದಿದ್ದು, ಸೋಂಕು ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಚರ್ಚೆ ನಡೆಸಲಿದ್ದಾರೆ.

ಈಗಾಗಲೇ ತಜ್ಞರ ಸಮಿತಿ ವರದಿಯೊಂದನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಯಲ್ಲೋ, ಆರೆಂಜ್, ರೆಡ್ ಎಂದು ಮೂರು ವಲಯಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಹೇಳಿದೆ. ಪಾಸಿಟಿವಿಟಿ ಶೇ 1 ರಷ್ಟು ಇರುವ ಪ್ರದೇಶವನ್ನು ಹಳದಿ ವಲಯ ಎಂದು ಗುರುತಿಸಿ, ಶೇ50ರ ನಿಯಮವನ್ನು ಜಾರಿಗೆ ತರಬೇಕು, ಇದರಲ್ಲಿ ಚಿತ್ರಮಂದಿರ, ಶಾಲೆ, ರೆಸ್ಟೋರೆಂಟ್ ಗಳು ಸೇರಿದೆ. ಜೊತೆಗೆ ಮಾಲ್, ಮಳಿಗೆಗಳಿಗೆ ಸಮಯದ ಮಿತಿ ಅಳವಡಿಸಿಕೊಳ್ಳಿ ಅಂದಿದೆ.

ಪಾಸಿಟಿವಿಟಿ ದರ ಶೇ 2ರಷ್ಟಿದ್ರೆ, ಕಿತ್ತಳೆ ವಲಯವೆಂದು ಗುರುತಿಸಿ, ಶಾಲಾ ಕಾಲೇಜುಗಳನ್ನು ಮುಚ್ಚಿ ಆನ್ ಲೈನ್ ತರಗತಿ ಪ್ರಾರಂಭಿಸಬೇಕು, ಸಿನಿಮಾ, ಮಾಲ್ ಸೇರಿ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಮತ್ತು ಜಿಮ್, ಬ್ಯೂಟಿ ಪಾರ್ಲರ್, ಈಜುಕೊಳ, ಪಾರ್ಕ್ ಗಳನ್ನೂ ಬಂದ್ ಮಾಡುವಂತೆ ಹೇಳಿದೆ.

ಪಾಸಿಟಿವಿಟಿ ದರ ಶೇ 3ರಷ್ಟು ಇದ್ರೆ ಅದನ್ನು ರೆಡ್ ಆಲರ್ಟ್ ವಲಯ ಎಂದು ಗುರುತಿಸಿ ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಸಲಹೆ ನೀಡಲಾಗಿದೆ. ಈ ರೀತಿ ಕಠಿಣ ಕ್ರಮಗಳನ್ನು ಕೈಗೊಂಡರೆ ಉತ್ತುಂಗಕ್ಕೆ ಏರಬೇಕಾದ ಸೋಂಕಿತರ ಸಂಖ್ಯೆನ್ನು 20 ಸಾವಿರಕ್ಕೆ ತಗ್ಗಿಸಬಹುದಾಗಿದೆ. ಹೀಗಾಗಿ ಫೆಬ್ರವರಿ ಕೊನೆಯ ವಾರದಲ್ಲಿ ಕೊರೋನಾ ಉಚ್ಚ್ರಾಯ ಸ್ಥಿತಿ ತಲುಪಿದಾಗ ದೊಡ್ಡ ಸಮಸ್ಯೆಯಾಗದು ಎಂದು ಸಮಿತಿಯ ವರದಿಯಲ್ಲಿ ಹೇಳಲಾಗಿದೆ.

Tags: CoronaFEATURED
Share5TweetSendShare

Discussion about this post

Related News

g20-summit-delhi-police-books-photographer-for-flying-drone-during-birthday-party

ಜನ್ಮದಿನ ಚಿತ್ರೀಕರಿಸಿದ ಕ್ಯಾಮಾರಮನ್ ವಿರುದ್ಧ ಕೇಸ್ : 1 ತಿಂಗಳ ಸೆರೆವಾಸ ಸಾಧ್ಯತೆ

ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಗ್ಗಿನ ಉಪಹಾರ : ಒಂದೊಳ್ಳೆ ಸ್ಕೀಂ ಜಾರಿಗೆ ತಂದ ಸಿಎಂ ಸ್ಟಾಲಿನ್ ಸರ್ಕಾರ

ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಗ್ಗಿನ ಉಪಹಾರ : ಒಂದೊಳ್ಳೆ ಸ್ಕೀಂ ಜಾರಿಗೆ ತಂದ ಸಿಎಂ ಸ್ಟಾಲಿನ್ ಸರ್ಕಾರ

ಕರ್ತವ್ಯದ ವೇಳೆಯೇ ಕುಸಿದು ಬಿದ್ದು ಮೃತಪಟ್ಟ ಯುವ ವೈದ್ಯಾಧಿಕಾರಿ

Police station : ಪೊಲೀಸ್ ಠಾಣೆಯಲ್ಲಿ ವಿಡಿಯೋ ಚಿತ್ರೀಕರಣ ಅಪರಾಧವಲ್ಲ : ಬಾಂಬೆ ಹೈಕೋರ್ಟ್

Karnataka Election : ಕರ್ನಾಟಕಕ್ಕೆ ಬರುತ್ತಿದೆ ಬಿಜೆಪಿ ಸೀಕ್ರೆಟ್ ಟೀಮ್: ದೀಪಾವಳಿಗೆ ಸಿಗಲಿದ್ಯಾ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ

NDTV ಖರೀದಿಗಾಗಿ ಅದಾನಿ ಮಾಸ್ಟರ್ ಪ್ಲಾನ್ : ಮಾಧ್ಯಮ ಲೋಕದಲ್ಲಿ ಸಂಚಲನ ಮೂಡಿಸಿದ ನಡೆ

Youtube :ದೇಶ ವಿರೋಧಿ 8 ಯೂಟ್ಯೂಬ್ 1 ಫೇಸ್ ಬುಕ್ ಅಕೌಂಟ್ ಬಂದ್ : Ministry of I&Bಯಿಂದ ಆದೇಶ

Shrikant Tyagi : ಕಠಿಣ ಕ್ರಮ ಅಂದ್ರೆ ಇದಪ್ಪ : BJP ನಾಯಕನ ಮನೆಗೆ ಬುಲ್ಡೋಜರ್ ನುಗ್ಗಿಸಿದ ಯೋಗಿ

Agneepath naxal : ಅಗ್ನಿಪಥ ಹಿಂಸಾಚಾರದಲ್ಲಿ ನಕ್ಸಲ್ ಕೈವಾಡ

Amazon pressure cooker : ಕೆಟ್ಟು ಹೋದ ಕುಕ್ಕರ್ ಮಾರಿದ ಅಮೆಜಾನ್ 1 ಲಕ್ಷ ರೂಪಾಯಿ ದಂಡ

Latest News

jail

ಕುವೈತ್ ನಲ್ಲಿ ಜೈಲುಪಾಲಾದ ಕೇರಳ ಮೂಲದ 19 ಮಂದಿ ನರ್ಸ್

bantwal city police arrest two thef kannada news

ಕರಾವಳಿಯಲ್ಲಿ ಚಿಗುರಿದ ಕಳ್ಳರ ಗ್ಯಾಂಗ್ ಹೆಡೆಮುರಿ ಕಟ್ಟಿದ ಬಂಟ್ವಾಳ ಪೊಲೀಸರು

Chaitra Kundapura govinda-babu-poojari-ccb-police arrest

ಕಬಾಬ್ ವ್ಯಾಪಾರಿಗೆ ಎಲೆಕ್ಷನ್ ಸಮಿತಿ ಸದಸ್ಯನ ವೇಷ : ಸ್ವಯಂ ಘೋಷಿತ ಹಿಂದೂ ನಾಯಕಿಯ ಖತರ್ನಾಕ್ ಕಹಾನಿ

/ks-eshwarappa-meets-hd-kumaraswamy-bengaluru

ಜೆಡಿಎಸ್ ಬಿಜೆಪಿ ಮೈತ್ರಿ ಪ್ರಸ್ತಾಪ : ಕುಮಾರಸ್ವಾಮಿ ಶಕ್ತಿ ವರ್ಧನೆ ಸುಳಿವು ಬೆನ್ನಲ್ಲೇ ಚುರುಕಾದ ಈಶ್ವರಪ್ಪ

g20-summit-delhi-police-books-photographer-for-flying-drone-during-birthday-party

ಜನ್ಮದಿನ ಚಿತ್ರೀಕರಿಸಿದ ಕ್ಯಾಮಾರಮನ್ ವಿರುದ್ಧ ಕೇಸ್ : 1 ತಿಂಗಳ ಸೆರೆವಾಸ ಸಾಧ್ಯತೆ

https://torrentspree.com/karnataka-weather-forecast-and-rain-alert-for-monday-september-11/

11.09.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

puttur mahalingeshwara temple ex president N Sudhakar Shetty no more

ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ‌ಸಮಿತಿ ಮಾಜಿ ಅಧ್ಯಕ್ಷ ಎನ್ ಸುಧಾಕರ ಶೆಟ್ಟಿ ಇನ್ನಿಲ್ಲ

brindavana-kannada-serial-ramji-colours-kannada

ರಾಮ್ ಜೀ ನಿರ್ದೇಶನದಲ್ಲಿ ಮತ್ತೊಂದು ಸೀರಿಯಲ್ : ಬಿಗ್ ಬಾಸ್ ನಂತ್ರ ಬೃಂದಾವನ

chinese-reporter what-if-india-renamed-as-bharat-heres-what-un-chiefs-spokesperson-said

ಭಾರತ ಹೆಸರು ಬದಲಾವಣೆ : ಚೀನಾದ ಮಾಧ್ಯಮ ಪ್ರತಿನಿಧಿಗೆ ತಲೆ ಬಿಸಿ

bigg boss kannada season 10 contestants

ಬಿಗ್ ಬಾಸ್ ವೇದಿಕೆ ಇವರೆಲ್ಲಾ ಎಲ್ಲಿ ಹೋದ್ರು : ಮಹಾಮನೆಯಲ್ಲಿ ನಿರಾಸೆಯಾದವರು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್