ನವದೆಹಲಿ : ಕೊರೋನಾ ವಿರುದ್ದದ ಹೋರಾಡುವ ನಿಟ್ಟಿನಲ್ಲಿ ದೇಶಿಯವಾಗಿ ಸಂಶೋಧಿಸಿರುವ ಕೋವ್ಯಾಕ್ಸಿನ್ ( Covaxin ) ಲಸಿಕೆ ಈಗಾಗಲೇ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದೆ. ಕೊರೋನಾ ವೈರಸ್ ವಿರುದ್ಧ ಹೋರಾಡಿದ ಲಸಿಕೆಗೆ ಅಂತರರಾಷ್ಟ್ರೀಯ ಮಟ್ಟದ ಲಾಬಿಯೊಂದಿಗೆ ಹೋರಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಕೋವ್ಯಾಕ್ಸಿನ್ ಲಸಿಕೆಗೆ ಜಾಗತಿಕ ಮನ್ನಣೆ ಸಿಗುವುದು ವಿಳಂಭವಾಗಿದೆ.
ಜಾಗಕ ಮನ್ನಣೆ ವಿಳಂಭವಾದ ಕಾರಣ ಅನೇಕ ಸಮಸ್ಯೆಗಳನ್ನು ಕೂಡಾ ಎದುರಿಸಬೇಕಾಗಿದೆ. ಅದರಲ್ಲೂ ಲಸಿಕೆ ಪಡೆದವರು ವಿದೇಶ ಹಾರಲಾಗದೆ ಒದ್ದಾಡುವಂತಾಗಿದೆ. ಈ ನಡುವೆ ಕೋವ್ಯಾಕ್ಸಿನ್ ಲಸಿಕೆಗೆ ಜಾಗತಿಕ ಮನ್ನಣೆ ತರುವ ನಿಟ್ಟಿನಲ್ಲಿ ಭಾರತ್ ಬಯೋಟೆಕ್ ಕೂಡಾ ಸಾಕಷ್ಟು ಶ್ರಮ ಪಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಕೇಳಿದ ಎಲ್ಲಾ ದಾಖಲೆಗಳನ್ನು ಕೂಡಾ ಒದಗಿಸುತ್ತಿದೆ.

ಇದೀಗ ಭಾರತದ ಸ್ವದೇಶಿ ಲಸಿಕೆ ಕೋವ್ಯಾಕ್ಸಿನ್ ಗೆ ಆಕ್ಟೋಬರ್ 26 ರಂದು ಜಾಗತಿಕ ಮನ್ನಣೆ ಲಭಿಸುವ ಸಾಧ್ಯತೆಗಳಿದೆ ಅನ್ನುವ ಸುದ್ದಿ ಬಂದಿದೆ. ಆಕ್ಟೋಬರ್ 26ರಂದು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿ ಸಭೆ ನಿಗದಿಯಾಗಿದ್ದು, ಈ ಸಭೆಯಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಬಗ್ಗೆ ಚರ್ಚೆ ನಡೆಯಲಿದೆ. ಹೀಗಾಗಿ ಅಂದೇ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
The World Health Organisation (WHO) technical advisory group will meet on October 26 to consider EUL (Emergency use listing) for Bharat Biotech’s Covaxin, Soumya Swaminathan, Chief Scientist at WH
Discussion about this post