Saturday, February 27, 2021

ಜೂನ್ 4 ರಿಂದ ಇಂಟರ್ ನೆಟ್ ನಲ್ಲೇ ಬುಕ್ ಮಾಡಿ ಇಂಟರ್ ನೆಟ್ ಕಾರು

Must read

ಮೋರಿಸ್ ಗ್ಯಾರೇಜ್ ( MG) ಭಾರತದಲ್ಲಿ ಬಿಡುಗಡೆ ಮಾಡಿರುವ ಮೊದಲ ವಾಹನ ಎಂಜಿ ಹೆಕ್ಟರ್ ನ ಬುಕ್ಕಿಂಗ್ ಇದೇ ಜೂನ್ 4 ರಿಂದ ಪ್ರಾರಂಭಗೊಳ್ಳಲಿದೆ.

ಸಂಸ್ಥೆಯೂ ಈ ಸಂಬಂಧ ತನ್ನ ವೆಬ್ ಸೈಟ್ ನಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದು, ಜೂನ್ 4 ರ ಮಧ್ಯಾಹ್ನ 12 ರ ನಂತ್ರ ಬುಕ್ಕಿಂಗ್ ಕಾರ್ಯಕ್ಕೆ ಚಾಲನೆ ಸಿಗಲಿದೆ.

ದೇಶದ 50 ಮಹಾನಗರಗಳಲ್ಲಿ ಈ ಕಾರು ಲಭ್ಯವಾಗಲಿದ್ದು, ದೇಶದ ಮೊದಲ ಇಂಟರ್ ನೆಟ್ ಕಾರ್ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿಶೇಷ ಫೀಚರ್​ ಅಳವಡಿಸಿಕೊಂಡಿರುವ ಹೆಕ್ಟರ್​ ಕಾರ್​​ನಲ್ಲಿ​​​ ಮುಂದಿನ ಜನರೇಷನ್​ಗೆ ಅನುಗುಣವಾದ ಐ-ಸ್ಮಾರ್ಟ್​ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ನೂತನ ಎಮ್​ಜಿ ಹೆಕ್ಟರ್​​ ಕಾರ್​​​​ 1835 ಮಿಲಿಮೀಟರ್​ ಅಗಲವನ್ನು, 1760 ಮಿಲಿಮೀಟರ್​​ ಎತ್ತರವನ್ನು ಹೊಂದಿದೆ.  ಕಾರಿನಲ್ಲಿ 10 ಸ್ಪೋಕ್​ ಅಲಾಯ್​ ವೀಲ್​ ಅಳವಡಿಸಲಾಗಿದೆ, ಪವರ್​​ ಎಜೆಸ್ಟೇಬಲ್​ ಸೀಟ್​, ಎಲೆಕ್ಟ್ರಾನಿಕ್​​ ಪಾರ್ಕಿಂಗ್​ ಬ್ರೇಕ್​, 360 ಡಿಗ್ರಿ ಕ್ಯಾಮೆರಾ ನೀಡಲಾಗಿದೆ.

ಇನ್ನು ಕಾರಿನಲ್ಲಿ  10.4 ಈಚಿನ ಅಲ್ಟ್ರಾ ಡಿಸ್​ಪ್ಲೇವೊಂದನ್ನು ಅಳವಡಿಸಲಾಗಿದೆ. ನಿಮ್ಮ ಬಳಕೆಗೆ ತಕ್ಕಂತೆ ಸೆಟ್ಟಿಂಗ್​ ಮಾಡಬಹುದಾಗಿದೆ. ಅಂತೆಯೇ, ವಾತಾವರಣಕ್ಕೆ ಅನುಗುಣವಾಗಿ ಅಲ್ಟ್ರಾ ಡಿಸ್​​ಪ್ಲೇಯನ್ನು ತಯಾರಿಸಲಾಗಿದೆ.

ನೂತನ ಕಾರಿನಲ್ಲಿ ಸಿಮ್​ ಅಳವಡಿಸುವ ತಂತ್ರಜ್ನಾನವನ್ನು ಅಳವಡಿಸಿದ್ದಾರೆ. ಅಂತೆಯೇ 5-ಜಿ ನೆಟ್​ವರ್ಕ್​ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ಮಾತ್ರವಲ್ಲದೆ, ರಿಯಲ್​ ಟೈಮ್​ ನ್ಯಾವಿಗೇಷನ್​, ರಿಮೋಟ್​ ಲೊಕೇಶನ್​ ನೀಡಲಾಗಿದೆ.

ಎಮ್​ಜಿ ಹೆಕ್ಟರ್​ ಕಾರ್​ನಲ್ಲಿ​​ ವಾಯ್ಸ್​ ಕಮಾಂಡ್​ ಸಿಸ್ಟಮ್​ ಅಳವಡಿಸಿಕೊಂಡ ಕೀ ಫೀಚರ್​ ತಂತ್ರಜ್ಞಾನವನ್ನು ಅಳವಡಿಸಿದೆ. ಕಾರು ಚಾಲಕನ ವಾಯ್ಸ್​ಗೆ ತಕ್ಕಂತೆ ಸನ್​ ರೂಪ್​, ಕ್ಲೈ ಮೇಟ್​ ಕಂಟ್ರೋಲ್​, ನ್ಯಾವಿಗೇಷನ್​ ಮುಂತಾದ ಫೀಚರ್​ ಅನ್ನು ಕಂಟ್ರೋಲ್​ ಮಾಡಬಹುದಾಗಿದೆ.

ಸ್ಮಾರ್ಟ್​ ಕಾರಿನ ಬಳಕೆಗಾಗಿ ಎಮ್​ಜಿ ಮೋಟಾರ್​ ಸಂಸ್ಥೆ ​ಐ-ಸ್ಮಾರ್ಟ್ ಆ್ಯಪ್​ವೊಂದನ್ನು ತಯಾರಿಸಿದೆ. ಈ ಆ್ಯಪ್​ ಮೂಲಕ ಕಾರಿನ ಟಯರ್​ ಪ್ರೆಶರ್​, ಲೊಕೇಷನ್​, ಡೋರ್​ ಲಾಕ್​, ಏರ್​​ ಕಂಡೀಷನರ್ ಅನ್ನು ಪರಿಶೀಲಿಸಬಹುದಾಗಿದೆ.

ಇನ್ನು MG ಹೆಕ್ಟರ್​ ಕಾರು ಪೆಟ್ರೋಲ್​ ಮತ್ತು ಡೀಸೆಲ್​ ಎಂಜಿನ್​ಗಳಲ್ಲಿ ಲಭ್ಯವಿದೆ. 1.5 ಲೀಟರ್​ ಅಳವಡಿಕೆ 4 ಸಿಲಿಂಡರ್​ ಇಂಜಿನ್​​ ಇದರಲ್ಲಿದೆ. ಅಲ್ಲದೇ, ಮ್ಯಾನುವಲ್​ ಮತ್ತು ಅಟೊಮೇಟಿಕ್​ ಆಯ್ಕೆಯಲ್ಲೂ ಲಭ್ಯವಿದೆ. 

- Advertisement -
- Advertisement -

Latest article