ಬೆಂಗಳೂರು : ಅಲ್ಲು ಅರ್ಜುನ್ ಅಭಿನಯ ಬಹು ನಿರೀಕ್ಷಿತ ಪುಷ್ಪ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ವಿವಾದಕ್ಕೆ ಗುರಿಯಾಗುತ್ತಿದೆ. ಅದರಲ್ಲೂ ರಶ್ಮಿಕಾ ಕಾರಣಕ್ಕೆ ಕರ್ನಾಟಕದಲ್ಲಿ ವಿವಾದ ಸೃಷ್ಟಿಸುತ್ತಿರುವ ಸಿನಿಮಾ ಇದೀಗ ಮತ್ತೊಮ್ಮೆ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದೆ.
ಆಗಸ್ಟ್ 13 ರಂದು ಬಿಡುಗಡೆಯಾಗಬೇಕಾಗಿದ್ದ ಸಿನಿಮಾ ಅನಿವಾರ್ಯ ಕಾರಣಗಳಿಂದ ಮುಂದಕ್ಕೆ ಹೋಗಿತ್ತು, ಇದೀಗ ಸಿನಿಮಾ ಬಿಡುಗಡೆಗೆ ಮುಹೂರ್ತ ಕೂಡಿ ಬಂದಿದ್ದು, ಚಿತ್ರದ ಪ್ರಚಾರ ಭರ್ಜರಿಯಾಗಿ ಸಾಗಿದೆ. ಇದರ ಅಂಗವಾಗಿ ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯನ್ನು ಆಯೋಜಿಸಲಾಗಿತ್ತು. ಪತ್ರಿಕಾಗೋಷ್ಟಿಯನ್ನು ಆಯೋಜಿಸಿದ್ದ ಶ್ರೇಯಸ್ ಮೀಡಿಯಾ 11 ಗಂಟೆಗೆ ಸುದ್ದಿಗೋಷ್ಟಿ ಎಂದು ಹೇಳಿತ್ತು. ಹೀಗಾಗಿ ಪತ್ರಕರ್ತರು ನೇರ ಪ್ರಸಾರದ ಸಲುವಾಗಿ ಸರಿಯಾದ ಸಮಯಕ್ಕೆ ಹೋಗಿದ್ದರು. ಆದರೆ 11 ಆಯ್ತು 12 ಆಯ್ತು 1 ಗಂಟೆಯಾದರೂ ಅಲ್ಲು ಅರ್ಜುನ್ ಸುಳಿವಿಲ್ಲ. ಈಗ ಬರ್ತಾರೆ ಆಗ ಬರ್ತಾರೆ ಅನ್ನುವ ಭರವಸೆ ನಡುವೆ 1 ಗಂಟೆ ಕಳೆಯುತ್ತಿದ್ದಂತೆ ವೇದಿಕೆ ಹತ್ತಿದ್ದಾರೆ. ಅಷ್ಟು ಹೊತ್ತಿಗೆ ಸಿನಿ ಪತ್ರಕರ್ತರು ನಿಗಿ ನಿಗಿ ಕೆಂಡವಾಗಿದ್ದರು. ಶ್ರೇಯಸ್ ಮೀಡಿಯಾದ ಮಂದಿ ಮಾತ್ರ ದೊಡ್ಡ ಸ್ಟಾರ್ ಸಿನಿಮಾ ಕಾಯಿರಿ ಅನ್ನುವಂತೆ ವರ್ತಿಸಿದ್ದರು.
ಇನ್ನು ವೇದಿಕೆ ಹತ್ತಿ ಮಾತು ಪ್ರಾರಂಭಿಸುತ್ತಿದ್ದಂತೆ ಪತ್ರಕರ್ತರೊಬ್ಬರು ನಿಮಗಾಗಿ ಎರಡೂವರೆ ಗಂಟೆಯಿಂದ ಕಾಯುತ್ತಿದೇವೆ, ಕ್ಷಮೆ ಕೇಳುವ ಸೌಜನ್ಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಗಲಿಬಿಲಿಯಾದ ಅಲ್ಲು ಅರ್ಜುನ್ ಶ್ರೇಯಸ್ ಮೀಡಿಯಾ ಮುಖ್ಯಸ್ಥರತ್ತ ನೋಡಿದ್ದಾರೆ.
ನನಗೆ ನೀವು 11 ಗಂಟೆಯಿಂದ ಕಾಯೋದು ಗೊತ್ತಿಲ್ಲ. ನಾನು ಖಾಸಗಿ ಫ್ಲೈಟ್ ನಲ್ಲಿ ಬಂದೆ ತಾಂತ್ರಿಕ ಕಾರಣಗಳಿಂದ ತಡವಾಯ್ತು, ಕ್ಷಮಿಸಿ ಅಂದಿದ್ದಾರೆ. ಇನ್ನು ಸೂಪರ್ ಸ್ಟಾರ್ ಕ್ಷಮೆ ಕೇಳುತ್ತಿದ್ದಂತೆ ಅವರ ಅಭಿಮಾನಿಗಳ ಗುಂಪು ಮಾಧ್ಯಮಗಳ ಕೋಪದ ಕಣ್ಣುಗಳನ್ನು ಬೀರಿತು.
ಅಂದ ಹಾಗೇ ಇಷ್ಟೆಲ್ಲಾ ಯಡವಟ್ಟುಗಳಿಗೆ ಕಾರಣವಾಗಿದ್ದು ಶ್ರೇಯಸ್ ಮೀಡಿಯಾ ನವರಸನ್ ಅವರು ಕನ್ನಡ ಮಾಧ್ಯಮಗಳ ಬಗ್ಗೆ ತೋರಿದ ಉಡಾಫೆ ನಿಲುವು.
ಇದೇ ವೇಳೆ ಪುನೀತ್ ರಾಜ್ ಕುಮಾರ್ ಮನೆಗೆ ಈಗ ಹೋಗೋದಿಲ್ಲ. ಹಾಗೆಂದ ಮಾತ್ರಕ್ಕೆ ಹೋಗುವುದನ್ನು ಮರೆತಿಲ್ಲ. ಪುಷ್ಪ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಹೋದ್ರೆ ಪ್ರಚಾರದ ತಂತ್ರ ಅನ್ನುತ್ತಾರೆ. ಹೀಗಾಗಿ ಪುಷ್ಪ ಸಿನಿಮಾ ಬಿಡುಗಡೆಯಾಗಲಿ, ಬಳಿಕ ಪುನೀತ್ ಅವರ ಮನೆಗೆ ಭೇಟಿ ಕೊಡುವ ಸಲುವಾಗಿಯೇ ಬರುತ್ತೇನೆ ಅಂದರು.
allu arjun says sorry to media for attended late for pushpa movie press meet in bangalore
Discussion about this post