ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಅನ್ನಿಸಿಕೊಂಡಿರುವ ಬಿಗ್ ಬಾಸ್ ಹಿಂದಿ ಅವತರಣಿಕೆ 15ನೇ ಸೀಸನ್ ಗೆ ಕಾಲಿಟ್ಟಿದೆ. ಕೊರೋನಾ ಕಾರಣದಿಂದ ಎಲ್ಲಾ ಇತ್ತೀಚಿನ ಸೀಸನ್ ಗಳು ಆಯೋಮಯವಾಗಿದ್ದು, ಅಲೆಯ ಅಬ್ಬರ ತಗ್ಗಿದ ವೇಳೆ ವಾಹಿನಿಗಳು ಕಾರ್ಯಕ್ರಮ ಆಯೋಜಿಸುತ್ತಿದೆ.
ಅದರಂತೆ ಇದೀಗ ಒಟಿಟಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಮುಕ್ತಾಯಗೊಂಡು ಟಿವಿಯಲ್ಲಿ 15ನೇ ಸೀಸನ್ ಪ್ರಸಾರ ಪ್ರಾರಂಭಿಸಿದೆ. ಈ ಹಿಂದಿನ ವರ್ಷಗಳಲ್ಲಿ ಆಗಿರುವ ಲಾಸ್ ಅನ್ನು ತುಂಬಿಕೊಳ್ಳಲು ಮುಂದಾಗಿರುವ ವಾಹಿನಿ ಸ್ಟ್ರಾಂಗ್ ಕಂಟೆಸ್ಟ್ ಗಳನ್ನು ಮನೆಯೊಳಗೆ ಕಳುಹಿಸಿದೆ. ಜೊತೆಗೆ ಎಲ್ಲಾ ವರ್ಗ ಹಾಗೂ ಎಲ್ಲಾ ಭಾಗದ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನೂ ನಡೆಸಲಾಗಿದೆ.

ಈ ನಡುವೆ ಇದೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ತುಳುವಿನಲ್ಲಿ ಮಾತನಾಡಿದ್ದು ಕರಾವಳಿಗರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂಚ್ ಉಲ್ಲೆರ್ ಎಂದು ಮಾತು ಪ್ರಾರಂಭಿಸಿದ ಸಲ್ಮಾನ್ ಅವರಿಗೆ ಕರೆಕ್ಷನ್ ಹಾಕಿದ ಶಮಿತಾ ಶೆಟ್ಟಿ ಇಂಚ ಉಲ್ಲರ್, ಯಾನ್ ಸೌಖ್ಯ ಅಂದಿದ್ದಾರೆ. ಮುಂದುವರಿದು ತುಳು ಬರ್ಪುಂಡೆ ಅಂದಿದ್ದಾರೆ. ಈ ವೇಳೆ ಮತ್ತೊಬ್ಬ ಸ್ಪರ್ಧಿ ವಂತೆ ವಂತೆ ಕಲ್ಪವೊಂದು ಉಲ್ಲ ಅಂದಿದ್ದಾರೆ.
Discussion about this post