ಬೆಂಗಳೂರು : ಡ್ರಗ್ಸ್ ಪ್ರಕರಣದ ಆರೋಪಿ, ಗಂಡ ಹೆಂಡತಿ ಚಲನಚಿತ್ರ ಖ್ಯಾತಿಯ ಸಂಜನಾ ಗಲ್ರಾನಿ ಕ್ಯಾಬ್ ಚಾಲಕನೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಈ ಸಂಬಂಧ ಕ್ಯಾಬ್ ಚಾಲಕ ಆರೋಪಿಸಿದ್ದು, ಅವಾಚ್ಯ ಶಬ್ಧದಿಂದ ನಿಂದಿಸಿದ್ದಾರೆ ಅಂದಿದ್ದಾರೆ.
ಶೂಟಿಂಗ್ ಹೋಗುವ ಸಲುವಾಗಿ ಓಲಾ ಕ್ಯಾಬ್ ಬುಕ್ ಮಾಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇಂದಿರಾ ನಗರದಿಂದ ಕೆಂಗೇರಿಗೆ ನಟಿ ಓಲಾ ಬುಕ್ ಮಾಡಬೇಕಿತ್ತು. ಆದರೆ ನಟಿ ಸಂಜನಾ ಇಂದಿರಾ ನಗರ ಟೂ ಆರ್ ಆರ್ ನಗರಕ್ಕೆ ಕ್ಯಾಬ್ ಬುಕ್ ಮಾಡಿದ್ದಾರೆ.
ಟ್ಯಾಕ್ಸಿ ಹತ್ತಿದ ವೇಳೆ ಡ್ರಾಪ್ ಪಾಯಿಂಟ್ ಆರ್.ಆರ್. ನಗರವಲ್ಲ ಕೆಂಗೇರಿ ಎಂದು ಗೊತ್ತಾಗಿದೆ. ಹೀಗಾಗಿ ಡ್ರಾಪ್ ಪಾಯಿಂಟ್ ಎಡಿಟ್ ಮಾಡುವಂತೆ ವಿನಂತಿಸಿದ್ದಾರೆ. ಈ ವೇಳೆ ಸಂಜನಾ ಕ್ಯಾತೆ ತೆಗೆದಿದ್ದು, ಲೊಕೇಶನ್ ಬದಲಿಸದೆ ವಾಗ್ವಾದ ಮಾಡಿದ್ದಾರೆ. ಜೊತೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಕ್ಯಾಬ್ ಚಾಲಕ ದೂರಿದ್ದಾರೆ.
Discussion about this post