ಆತ ಸಾಮಾಜಿಕ ಸಂಸ್ಥೆಯೊಂದರ ಮುಖ್ಯಸ್ಥ, ಆತನ ಪತ್ನಿ ಶಾಲೆಯೊಂದರಲ್ಲಿ ಶಿಕ್ಷಕಿ ಜೊತೆಗೆ ಟ್ಯೂಷನ್ ಕೂಡ ನೀಡುತ್ತಿದ್ದರು. 15 ವರ್ಷದ ಅನ್ಯೋನ್ಯ ಸಂಬಂಧವದು. 15 ವರ್ಷದ ವೈವಾಹಿಕ ಸಂಬಂಧಕ್ಕೆ 14 ವರ್ಷದ ಪುತ್ರನೂ ಇದ್ದ.
ಆದರೆ ತಪ್ಪು ಮಾಡಿದವರು ಒಂದಲ್ಲ ಒಂದು ದಿನ ಸಿಕ್ಕಿ ಬೀಳಲೇ ಬೇಕು ತಾನೇ. ಬೆಕ್ಕು ಎಷ್ಟು ದಿನ ಎಂದು ಕಣ್ಣು ಮುಚ್ಚಿ ಹಾಲು ಕುಡಿಯಲು ಸಾಧ್ಯ. ಹಾಗೇ ಪತಿ ತನ್ನ ಮಗನಿಗೆ ಆಟವಾಡಲೆಂದು ಫೋನ್ ಕೊಟ್ಟಿದ್ದ. ಆ ವೇಳೆ ಮೊಬೈಲ್ ಫೋನ್ನಲ್ಲಿ ಆಟವಾಡುತ್ತಿದ್ದ ಪುತ್ರ, ಆಕಸ್ಮಿಕವಾಗಿ ಫೋನ್ ರೆಕಾರ್ಡರ್ ತೆರೆದು ನೋಡಿದಾಗ ಹಾಗೂ ವಾಟ್ಸ್ಆ್ಯಪ್ನಲ್ಲಿ ಚಾಟ್ ಸಂಭಾಷಣೆಗಳು ಹಾಗೂ ಅಶ್ಲೀಲ ಸಂದೇಶಗಳು, ಆಡಿಯೋಗಳನ್ನು ನೋಡಿದ್ದಾನೆ. ಅದ್ಯಾಕೋ ತಂದೆ ತಾಯಿ ಮೋಸ ಮಾಡುತ್ತಿದ್ದಾನೆ ಅನ್ನಿಸಿ, ತನ್ನ ತಂದೆ ಹಾಗೂ ಮತ್ತೊಬ್ಬ ಮಹಿಳೆಯೊಂದಿಗಿನ ಈ ಸಂಭಾಷಣೆಗಳನ್ನು ನೋಡಿದವನೇ ತಕ್ಷಣ ತನ್ನ ತಾಯಿಗೆ ತೋರಿಸಿದ್ದಾನೆ.
ಅದ್ಯಾವ ಪತ್ನಿ ತಾನೇ ಪತಿಯ ಪರಸ್ತ್ರೀ ವ್ಯಾಮೋಹವನ್ನು ಸಹಿಸಿಕೊಳ್ಳಲು ಸಾಧ್ಯ. 39 ವರ್ಷದ ಪತ್ನಿ 43 ವರ್ಷದ ಪತಿಯನ್ನು ಪ್ರಶ್ನಿಸಿದ್ದಾರೆ. ಈ ಕಾರಣಕ್ಕೆ ಜಗಳವೂ ನಡೆದಿದೆ. ಕೊನೆಗೆ ತನ್ನ ಪತಿ ವಿರುದ್ಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಅಕ್ರಮ ಸಂಬಂಧ ಪ್ರಶ್ನಿಸಿದ ತನ್ನ ಮೇಲೆ ಪತಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಹೀಗಾಗಿ ತನ್ನ ಮಗನಿಗೆ ಗೇಮ್ ಆಡಲು ಮೊಬೈಲ್ ಕೊಟ್ಟು ತನ್ನ 15 ವರ್ಷದ ದಾಂಪತ್ಯ ಜೀವನವನ್ನೇ ಮುರಿದುಕೊಳ್ಳುವಂತಾಗಿದೆ.
ಈ ಘಟನೆ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Discussion about this post