ಬೆಂಗಳೂರು : ಕರ್ನಾಟದ ಪರ ಆಡುತ್ತಿದ್ದ ಎಡಗೈ ದಾಂಡಿಗ ಬಿ ವಿಜಯ್ ಕೃಷ್ಣ ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಕಳೆದ ಎರಡು ದಿನಗಳಿಂದ ವಿಕ್ರಂ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹು ಅಂಗಾಂಗ ಸಮಸ್ಯೆಯನ್ನು ಎದುರಿಸುತ್ತಿದ್ದರು.
ಲೆಫ್ಟ್ ಆರ್ಮಿ ಸ್ಪಿನ್ನರ್ ಹಾಗೂ ಎಡಗೈ ದಾಂಡಿಗನಾಗಿ ಗುರುತಿಸಿಕೊಂಡಿದ್ದ ಅವರು 15 ವರ್ಷಗಳ ಕಾಲ 80ಕ್ಕೂ ಹೆಚ್ಚು ಪಂದ್ಯಗಳಲ್ಲಿ ತಮ್ಮ ಸಾಧನೆಗೈದಿದ್ದರು. ಒಟ್ಟು 2000ಕ್ಕೂ ಹೆಚ್ಚು ರನ್ ಹಾಗೂ 194 ವಿಕೆಟ್ ಪಡೆದ ಸಾಧನೆ ವಿಜಯ್ ಕೃಷ್ಣ ಅವರದ್ದು.
ಕರ್ನಾಟಕದ ಪರ ಆಡುತ್ತಿದ್ದ ಮತ್ತೊಬ್ಬ ಕ್ರಿಕೆಟಿಗ ಕೆ ನಾಗಭೂಷಣ ಪ್ರೋತ್ಸಾಹದಿಂದ ಮೈದಾನಕ್ಕಿಳಿದಿದ್ದ ವಿಜಯ್ ಕೃಷ್ಣ ಅತ್ಯುತ್ತಮ ಅಲ್ ರೌಂಡರ್ ಆಗಿ ಗುರುತಿಸಿಕೊಂಡಿದ್ದರು. 1968 -69ನೇ ಸಾಲಿನಲ್ಲಿ ಆಡಿದ ಮೊದಲ ರಣಜಿ ಪಂದ್ಯದಲ್ಲಿ ಹೈದರಬಾದ್ ವಿರುದ್ಧ ಮೂರು ವಿಕೆಟ್ ಪಡೆದು ಬಳಿಕ ಮದ್ರಾಸ್ ವಿರುದ್ದದ ಪಂಯದಲ್ಲಿ ಆರು ವಿಕೆಟ್ ಪಡೆದು ಹೆಸರು ಮಾಡಿದ್ದರು.
ಅಕ್ಯೋಬರ್ 12 1949ರಲ್ಲಿ ಇವರು ಜನಿಸಿದ್ದರು.
Discussion about this post