ಜುಲೈ ತಿಂಗಳಲ್ಲಿ ಬ್ಯಾಂಕ್ ಕೆಲಸಗಳನ್ನು ಸಮಯ ಸಿಕ್ಕಾಗ ಮುಗಿಸಿಕೊಳ್ಳಿ ಯಾಕಂದ್ರೆ 15 ದಿನ ರಜೆಯಿದ್ದು 14 ದಿನ ಮಾತ್ರ ಬ್ಯಾಂಕ್ ಬಾಗಿಲು ತೆರೆಯುತ್ತದೆ
ಬೆಂಗಳೂರು : ಜುಲೈ ತಿಂಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಭರ್ಜರಿ ರಜೆ ಸಿಗಲಿದೆ. ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್ ಗಳು ಈ ತಿಂಗಳು ಏನಿಲ್ಲ ಅಂದ್ರೂ ಅರ್ಧ ತಿಂಗಳು ಬಾಗಿಲು ಹಾಕಿರುತ್ತದೆ. ಹಾಗಂತ ದೇಶದ ಎಲ್ಲಾ ಕಡೆ ಅಂತ ಗಾಬರಿಯಾಗಬೇಡಿ. ಭಾನುವಾರ ಹಾಗೂ ಎರಡು ಮತ್ತು ನಾಲ್ಕನೇ ಶನಿವಾರ ಎಂದಿನಂತೆ ದೇಶದೆಲ್ಲೆಡೆ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಇನ್ನುಳಿದಂತೆ ರಾಜ್ಯದಿಂದ ರಾಜ್ಯಕ್ಕೆ ರಜೆಯಲ್ಲಿ ವ್ಯತ್ಯಯಗಳಾಗುತ್ತವೆ.
ಜುಲೈ 1 ರಂದು ಒಡಿಸ್ಸಾದಲ್ಲಿ ಬ್ಯಾಂಕ್ ಗೆ ರಜೆ ಇದ್ರೆ ದೇಶ ಉಳಿದ ಭಾಗದಲ್ಲಿ ಬ್ಯಾಂಕ್ ಎಂದಿನಂತೆ ಕಾರ್ಯ ನಿರ್ವಹಿಸುತ್ತದೆ. ಜುಲೈ 9 ರಂದು ಕೊಚ್ಚಿ ಹಾಗೂ ತಿರುವನಂತಪುರದಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕ್ ಗಳಿಗೆ ರಜೆ ನೀಡಲಾಗಿದೆ. ಆದರೆ ಅದು ಎರಡನೇ ಶನಿವಾರವಾಗಿರುವ ಕಾರಣ ದೇಶದ ಎಲ್ಲಾ ಕಡೆ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
ಹಾಗಾದ್ರೆ ಯಾವೆಲ್ಲಾ ದಿನ ಎಲ್ಲೆಲ್ಲಿ ಬ್ಯಾಂಕ್ ಗಳಿಗೆ ರಜೆ ಘೋಷಿಸಲಾಗಿದೆ
ಜುಲೈ 1 – ರಥಯಾತ್ರೆ – ಭುವನೇಶ್ವರದಲ್ಲಿ ರಜೆ
ಜುಲೈ 7 – ಖರ್ಚಿ ಪೂಜಾ – ಅಗರ್ತಾಲದಲ್ಲಿ ರದೆ
ಜುಲೈ 9 – ಬಕ್ರೀದ್ – ಕೊಚ್ಚಿ, ತಿರುವನಂತಪುರದಲ್ಲಿ ರಜೆ – ಎರಡನೇ ಶನಿವಾರದ ಕಾರಣ ದೇಶದ ಎಲ್ಲಾ ಭಾಗಗಳಲ್ಲಿ ಬ್ಯಾಂಕ್ ಗೆ ರಜೆ ಇರುತ್ತದೆ
ಜುಲೇ 11 – ಈದ್ ಉಲ್ ಅಜಾ – ಶ್ರೀನಗರ ಮತ್ತು ಜಮ್ಮುವಿನಲ್ಲಿ ರಜೆ
ಜುಲೈ 13 – ಭಾನು ಜಯಂತಿ – ಗ್ಯಾಂಗ್ಟಾಕ್ ( ಅಸ್ಸಾಂ) ರಜೆ
ಜುಲೈ 14 – ಬೆಹ್ ದೀಂಕ್ಲಾಮ್ – ಶಿಲ್ಲಾಂಗ್ ನಲ್ಲಿ ರಜೆ
ಜುಲೈ 16 – ಹರೆಲಾ – ಡೆಹರಡೂನ್ ನಲ್ಲಿ ರಜೆ
ಜುಲೈ 26 – ಕೀರ್ ಪೂಜಾ – ಅಗರ್ತಾಲದಲ್ಲಿ ರಜೆ
ಇದು ಮಾತ್ರವಲ್ಲದೆ 7 ವಾರಾಂತ್ಯದ ರಜೆ ಹಾಗೂ ಬಕ್ರೀದ್ ಸಲುವಾಗಿ ಬ್ಯಾಂಕ್ ಇಡೀ ರಾಷ್ಟ್ರದಲ್ಲಿ ರಜೆಯಲ್ಲಿರುತ್ತದೆ.
ಜುಲೈ 3 – ಮೊದಲ ಭಾನುವಾರ
ಜುಲೈ 9 – ಎರಡನೇ ಶನಿವಾರ ಮತ್ತು ಬಕ್ರೀದ್
ಜುಲೈ 10 – ಎರಡನೇ ಭಾನುವಾರ
ಜುಲೈ 17 – ಮೂರನೇ ಭಾನುವಾರ
ಜುಲೈ 23 – ನಾಲ್ಕನೇ ಶನಿವಾರ
ಜುಲೈ 24 – ನಾಲ್ಕನೇ ಭಾನುವಾರ
ಜುಲೈ 31 – ಐದನೇ ಭಾನುವಾರ
ಹಾಗಂತ ಕರ್ನಾಟಕದ ಬ್ಯಾಂಕ್ ಉದ್ಯೋಗಿಗಳಿಗೆ ರಜಾ ಪಟ್ಟಿಯಲ್ಲಿ ಜಾಗವೇ ಇಲ್ಲ. ಬಕ್ರೀದ್ ಬಿಟ್ರೆ ಮತ್ಯಾವುದೇ ಹಬ್ಬಗಳು ಇಲ್ಲದಿರುವುದರಿಂದ ಈ ಬಾರಿ ಕರ್ನಾಟಕದ ಬ್ಯಾಂಕಿಂಗ್ ವ್ಯವಹಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
Discussion about this post