ನವದೆಹಲಿ : ಭಾರತದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಸೃಷ್ಟಿಸಿದ ಅವಾಂತರವನ್ನು ಯಾರೂ ಕೂಡಾ ಮರೆಯುವಂತಿಲ್ಲ. ಮೂರನೇ ಅಲೆ ಇನ್ನೇನು ಬರುತ್ತದೆ ಅನ್ನುವ ಹೊತ್ತಿಗೆ ತಜ್ಞರು ಮೂರನೇ ಅಲೆ ತೀವ್ರವಾಗಿರುವುದಿಲ್ಲ ಅಂದಿದ್ದಾರೆ. ಹಾಗಂತ ನಿಟ್ಟುಸಿರುಬಿಡುವ ಹಾಗಿಲ್ಲ. ಜರ್ಮಿನಿ ಸೇರಿದಂತೆ ಪಶ್ಚಿಮ ರಾಷ್ಟ್ರಗಳಲ್ಲಿ ಕೊರೋನಾ ಸೋಂಕು ಮತ್ತೆ ಅಬ್ಬರಿಸಲಾರಂಭಿಸಿದೆ. ಅತ್ಯಂತ ಹೆಚ್ಚು ಲಸಿಕೆ ನೀಡಿದ ದೇಶಗಳೇ ಕಂಗಲಾಗಿದೆ.
ಈ ನಡುವೆ ಭಾರತದಲ್ಲಿ ಅಪಾರ ಸಾವು ನೋವಿಗೆ ಕಾರಣವಾಗಿದ್ದ ಡೆಲ್ಟಾ ರೂಪಾಂತರಿ ವೈರಸ್ ಗಿಂತಲೂ ಅಪಾಯಕಾರಿ ಅನ್ನಿಸಿಕೊಂಡಿರುವ ಕೊರೋನಾ ತಳಿಯೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಬೋಟ್ಸ್ ವಾನಾ ಎಂದು ಕರೆಯಲಾಗಿರುವ ಈ ಹೊಸ ತಳಿ ಈಗಾಗಲೇ ಮೂರು ದೇಶಗಳಲ್ಲಿ ಕಾಣಿಸಿಕೊಂಡಿದ್ದು, ಲಸಿಕೆ ಈ ರೂಪಾಂತರಿಗೆ ಲೆಕ್ಕಲೇ ಇಲ್ಲವಂತೆ.
ದಕ್ಷಿಣ ಆಫ್ರಿಕಾದಲ್ಲಿ 7 ,ಹಾಂಕಾಂಗ್ ನಲ್ಲಿ 1 ಪ್ರಕರಣ ಈಗಾಗಲೇ ದೃಢಪಟ್ಟಿದೆ. ದಕ್ಷಿಣ ಆಫ್ರಿಕಾದ ಬೋಟ್ಸ್ ವಾನಾ ದಲ್ಲಿ ಇದು ಪತ್ತೆಯಾಗಿರುವ ಕಾರಣ ಇದಕ್ಕೆ ಅದೇ ಹೆಸರಿಡಲಾಗಿದೆ. ಬೋಟ್ಸ್ ವಾನಾ ರೂಪಾಂತರಿಯಲ್ಲಿ 32 ವಿಧಗಳಿದ್ದು ಅತ್ಯಂತ ವೇಗವಾಗಿ ಗುಣ ಹೊಂದಿರುವುದರಿಂದ ಆತಂಕ ಸೃಷ್ಟಿಯಾಗಿದೆ.
ಇದೀಗ ಬೋಟ್ಸ್ ವಾನಾ ಸೋಂಕು ಅಪಾಯಕಾರಿ ಅನ್ನುವ ವರದಿ ಬೆನ್ನಲ್ಲೇ ಕಟ್ಟೆಚ್ಚರ ವಹಿಸುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಹೊಸ ರೂಪಾಂತರಿ ವೈರಸ್ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ದಕ್ಷಿಣ ಆಫ್ರಿಕಾ, ಬೋಟ್ಸ್ ವಾನಾ, ಸಿಂಗಾಪುರದಿಂದ ಬರೋ ಪ್ರಯಾಣಿಕರ ಮೇಲೆ ನಿಗಾ ವಹಿಸುವಂತೆ ಸೂಚಿಸಲಾಗಿದೆ.
Discussion about this post