ಈ ಜಗತ್ತಿನಲ್ಲಿ ಕಾರಣವಿಲ್ಲದೆ ಕೊಲೆಗಳು ನಡೆದಿದೆ. 10 ರೂಪಾಯಿ 20 ರೂಪಾಯಿಗಾಗಿ ಕೊಲೆಗಳು ನಡೆದಿದೆ. ಈ ನಡುವೆ ಇದೀಗ ಮುತ್ತು ಕೊಟ್ಟಿಲ್ಲ ಅನ್ನುವ ಕಾರಣಕ್ಕೆ ಮಹಿಳೆಯೊಬ್ಬಳು ಯುವಕನನ್ನು ಸಾಯಿಸಿದ್ದಾಳೆ.
ಇಂತಹುದೊಂದು ವಿಲಕ್ಷಣ ಘಟನೆ ನಡೆದಿದ್ದು ಅಮೆರಿಕದ ಇಲಿನೋಯಿಯಲ್ಲಿ ಜರುಗಿದೆ. ಕ್ಲಾಡಿಯ ರೆಸೆಂಡಿಜ್ ಫ್ಲೋರೆಸ್ ಹೆಸರಿನ 28 ವರ್ಷದ ಮಹಿಳೆ ತನ್ನಿಬ್ಬರು ಗೆಳೆಯರೊಂದಿಗೆ NightOut ಪಾರ್ಟಿಯಲ್ಲಿ ಭಾಗಿಯಾಗಿದ್ದಳು. ಇದೇ ವೇಳೆ ಆಕೆಯ ಆಪಾರ್ಟ್ ಮೆಂಟ್ ನಲ್ಲೇ ವಾಸವಾಗಿದ್ದ ಜೇಮ್ಸ್ ಜೋನ್ಸ್ ತನ್ನ ಗೆಳೆತಿಯೊಂದಿಗೆ ಪಾರ್ಟಿಗೆ ಬಂದಿದ್ದಾನೆ.
ಇದನ್ನೂ ಓದಿ : ಕೊನೆಗೂ ಬಯಲಾಯ್ತು ಕಿರುತೆರೆ ನಟಿ ಸೌಜನ್ಯಾ ಸಾವಿನ ರಹಸ್ಯ
ಹೇಗಿದ್ದರೂ ಇಬ್ಬರಿಗೂ ಪರಿಚಯವಿತ್ತು, ಹೀಗಾಗಿ ಜೊತೆಗೆ ಪಾರ್ಟಿ ಸಾಗಿದೆ. ಈ ವೇಳೆ ಎಣ್ಣೆ ಕಿಕ್ ಏರಿಸಿಕೊಂಡಿದ್ದ ಕ್ಲಾಡಿಯ ಜೇಮ್ಸ್ ಬಳಿ ಬಂದು ಕಿಸ್ ಕೊಡು ಅಂದಿದ್ದಾಳೆ, ಒಲ್ಲೆನೆಂದ ಆತ ತನ್ನ ಗರ್ಲ್ ಫ್ರೆಂಡ್ ಕೆನ್ನೆಗೆ ತುಟಿಯೊತ್ತಿದ್ದಾನೆ.
ಅಷ್ಟೇ ರೊಚ್ಚಿಗೆದ್ದ ಕ್ಲಾಡಿಯ ಕಾಮದ ಮದ ಏರಿದವಳಂತೆ ಕಿಸ್ ಮಿ ಎಂದು ಏರಿ ಹೋಗಿದ್ದಾಳೆ, ಜೇಮ್ಸ್ ಕಡೆಯಿಂದ ಮತ್ತೇ ಅದೇ ರಿಯಾಕ್ಷನ್… No I Can’t kiss you. ಇದರಿಂದ ರಾಕ್ಷಸಿಯಾದ ಕ್ಲಾಡಿಯಾ ಆತನ ಪಿಸ್ತೂಲ್ ಅನ್ನು ಕಸಿದು ಆತನಿಗೆ ಗುಂಡಿಟ್ಟು ಸಾಯಿಸಿದ್ದಾಳೆ.
Woman shot man dead when he wouldn’t kiss her
Discussion about this post