ಮೊನ್ನೆ ಮೊನ್ನೆ ಸೋಮಣ್ಣ, ವಿಶ್ವನಾಥ್ ಅವರಿಗೂ ಶುಭ ಕೋರಲಾಗಿತ್ತು, ಅದ್ಯಾಕೋ ಕೇಸ್ ಬಿದ್ದ ಬಗ್ಗೆ ವರದಿಯಾಗಿಲ್ಲ – siddaramaiah birthday
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ (siddaramaiah birthday) ಶುಭಾಶಯ ಕೋರಿದ ಕಾಂಗ್ರೆಸ್ ಮುಖಂಡರ ಮೇಲೆ ಕೇಸ್ ದಾಖಲಾಗಿದೆ. ನೆಚ್ಚಿನ ನಾಯಕನ ಹುಟ್ಟು ಹಬ್ಬವನ್ನು ಸಂಭ್ರಮಿಸಿದ ಕರ್ಮಕ್ಕೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವಂತಾಗಿದೆ.
ವಸಂತನಗರ ಬಿಬಿಎಂಪಿ ಉಪ ವಿಭಾದ ಸಹಾಯಕ ಕಂದಾಯ ಅಧಿಕಾರಿ ಬಿ.ವಿ. ವೀಣಾ ಈ ಸಂಬಂಧ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಪ್ರಕಾರ ಕಾಂಗ್ರೆಸ್ ಮುಖಂಡರಾದ ಟಿ.ಎಸ್. ರಮೇಶ್ ಬಾಬು ಮತ್ತು ಜಯಬಾಲ ವಿರುದ್ಧ FIR ದಾಖಲಾಗಿದೆ. (siddaramaiah birthday)

ಇದನ್ನೂ ಓದಿ : jagan mohan reddy : ಸರ್ಕಾರದ ಸಾಧನೆ ಪ್ರಚಾರಕ್ಕೆ ಸರ್ಕಾರದಿಂದಲೇ ಟಿವಿ ಚಾನೆಲ್
ಚಾಲುಕ್ಯ ಜಂಕ್ಷನ್ನಲ್ಲಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಸಲುವಾಗಿ ಬೃಹತ್ ಬ್ಯಾನರ್ ಅಳವಡಿಸಲಾಗಿತ್ತು. ಪಾಲಿಕೆಯಿಂದ ಅನುಮತಿ ಪಡೆದಿಲ್ಲ ಮತ್ತು ಬೆಂಗಳೂರು ನಗರ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡಿದ ಆರೋಪದ ಹಿನ್ನಲೆಯಲ್ಲಿ ಬಿಬಿಎಂಪಿ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಮೊನ್ನೆ ಮೊನ್ನೆ ಸಚಿವ ಸೋಮಣ್ಣ ಅವರ ಬರ್ತ್ ಡೇ ಕಾರಣಕ್ಕೆ ಕಟೌಟ್ ಅಳವಡಿಸಿದ್ದನ್ನು KRS ಪಕ್ಷದ ಸದಸ್ಯರು ಪ್ರಶ್ನಿಸಿದ್ದರು. ಆಗ ಬಿಬಿಎಂಪಿಗೆ ನಗರದ ಸೌಂದರ್ಯ ಹಾಳಾಗುತ್ತಿದೆ ಅನ್ನುವುದು ಗೊತ್ತಿರಲಿಲ್ಲ.

ಅಷ್ಟೇ ಯಾಕೆ ಶಾಸಕ ವಿಶ್ವನಾಥ್ ಹುಟ್ಟು ಹಬ್ಬದಂದು ಅದೆಷ್ಟು ಫ್ಲೆಕ್ಸ್, ಬ್ಯಾನರ್ ಗಳಿಗೆ ಅನುಮತಿ ನೀಡಲಾಗಿತ್ತು ಅನ್ನುವುದು ಬಿಬಿಎಂಪಿ ಅಧಿಕಾರಿಗಳು ಹೇಳಬೇಕು. ವಿಧಾನಸೌಧದ ಮುಂದೆಯೇ ಸಿಟಿ ರವಿ ಹೆಸರಿನಲ್ಲೊಂದು ಬ್ಯಾನರ್ ಹಾಕಿದ್ದನ್ನು ಕಾಂಗ್ರೆಸ್ ಕಾರ್ಯಕರ್ತೆ ಹರಿದು ಹಾಕಿದಾಗ್ಲೂ ಬಿಬಿಎಂಪಿಗೆ ಎಚ್ಚರವಿರಲಿಲ್ಲ. ಇದೀಗ ಸಿದ್ದರಾಮಯ್ಯ ಅಭಿಮಾನಿಗಳ ಮೇಲೆ ಮಾತ್ರ ಕಟ್ಟು ನಿಟ್ಟಿನ ಕ್ರಮ.
Discussion about this post