ಅಗ್ನಿಪಥ ವಿರೋಧಿಸಿ ಬೀದಿಗೆ ಬಂದವರಿಗೆ ನಾವ್ಯಾಕೆ ಹೋರಾಟಕ್ಕೆ ಇಳಿದಿದ್ದೇವೆ ಅನ್ನುವುದೇ ಗೊತ್ತಿರಲಿಲ್ಲ.. ಇದೀಗ ಸತ್ಯ ಬಯಲಾಗಿದೆ (Agneepath naxal)
ಬಿಹಾರ : ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆಯನ್ನು ಜಾರಿಗೆ ತಂದ ವೇಳೆ ದೊಡ್ಡ ಮಟ್ಟದಲ್ಲಿ ಹೋರಾಟಗಳು ನಡೆದಿತ್ತು. ಕೇಂದ್ರ ಸರ್ಕಾರ ಕೂಡಾ ಹೋರಾಟ ಈ ಮಟ್ಟಕ್ಕೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಹೋರಾಟ ಪ್ರಾರಂಭವಾದ ಹೊತ್ತಿಗೆ ದೇಶ ವಿರೋಧಿ ಶಕ್ತಿಗಳು (Agneepath naxal) ಹೋರಾಟದಲ್ಲಿ ಕೈ ಜೋಡಿಸಿರುವುದನ್ನು ಗುಪ್ತಚರ ಇಲಾಖೆ ಪತ್ತೆ ಹಚ್ಚಿತ್ತು.
ಇದೀಗ ಅದು ಸತ್ಯವಾಗಿದೆ. ಅಗ್ನಿಪಥ್ ವಿರೋಧಿಸಿ ಬಿಹಾರದಲ್ಲಿ ನಡೆದ ಹಿಂಸಾಚಾರದಲ್ಲಿ ಕೆಂಪು ಉಗ್ರರ (Agneepath naxal )ಕೈವಾಡವಿರುವುದು ಗೊತ್ತಾಗಿದೆ. ತೆಲಂಗಾಣ ಪೊಲೀಸರ ಮಾಹಿತಿ ಆಧಾರದಲ್ಲಿ ಬಿಹಾರ ಪೊಲೀಸರು ಶುಕ್ರವಾರ ಮನ ಶ್ಯಾಮ್ ದಾಸ್ ಅನ್ನುವ ನಕ್ಸಲ್ ನಾಯಕನನ್ನು ಬಂಧಿಸಿದ್ದರು.
ಇದನ್ನು ಓದಿ : TikTok back to India : ಶೀಘ್ರದಲ್ಲೇ ಭಾರತಕ್ಕೆ ರೀ ಎಂಟ್ರಿ ಕೊಡಲಿದೆ ಟಿಕ್ ಟಾಕ್
ಆತನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಪ್ರತಿಭಟನೆ ಸಂದರ್ಭದಲ್ಲಿ ರೈಲಿಗೆ ಬೆಂಕಿ ಹಚ್ಚುವುದು ಸೇರಿದಂತೆ ಹಲವು ಕಾನೂನು ವಿರೋಧಿ ಕೃತ್ಯಗಳನ್ನು ನಡೆಸಿರುವುದಾಗಿ ಶ್ಯಾಮ್ ದಾಸ್ ಒಪ್ಪಿಕೊಂಡಿದ್ದಾನೆ. ಜೊತೆಗೆ ಹಲವು ಯುವಕರಿಗೆ ಹಿಂಸಾಚಾರ ನಡೆಸಲು ತರಬೇತಿ ಕೊಟ್ಟಿರುವುದನ್ನು ಈ ನಕ್ಸಲ್ ನಾಯಕ ಬಹಿರಂಗ ಪಡಿಸಿದ್ದಾನೆ.
ಈ ಶ್ಯಾಮ್ ದಾಸ್ , ಬಿಹಾರದಲ್ಲಿ ವಾಸವಿದ್ದು, ಜಾರ್ಖಂಡ್, ಪಶ್ಚಿಮ ಬಂಗಾಳ, ತೆಲಂಗಾಣದ ನಕ್ಸಲ್ ಚಟುವಟಿಕೆಯನ್ನು ನಿಯಂತ್ರಿಸುತ್ತಿದ್ದ. ತೆಲಂಗಾಣ ಪೊಲೀಸರು ಇತ್ತೀಚೆಗೆ ನಕ್ಸಲ್ ಹೋರಾಟಗಾರನೊಬ್ಬನನ್ನು ವಶಕ್ಕೆ ಪಡೆದ ವೇಳೆ ಶ್ಯಾಮ್ ದಾಸ್ ರಾಯ್ ಕೃತ್ಯ ಬೆಳಕಿಗೆ ಬಂದಿತ್ತು.
ಇದನ್ನು ಓದಿ : Bigg Boss Kannada OTT : ಮನೆ ಪ್ರವೇಶಿಸಿದ ಸ್ಪರ್ಧಿಗಳ ವಿವರ ಇಲ್ಲಿದೆ
Discussion about this post