ದಿನಕ್ಕೆ ‘996’ ಫಾರ್ಮುಲ ಪ್ರಕಾರ ದುಡಿಯುವಂತೆ ಆದೇಶಿಸಿ ವಿವಾದಕ್ಕೀಡಾಗಿದ್ದ ಚೀನಾ ಮೂಲದ ಅಲಿಬಾಬ ಕಂಪನಿ ಸಂಸ್ಥಾಪಕ ಜಾಕ್ ಮಾ ಅವರು, ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ಧಾರೆ. ತಮ್ಮ ಕಂಪನಿ ಸಿಬ್ಬಂದಿಗೆ “ಮನೆ ಮತ್ತು ಕೆಲಸ ಎರಡನ್ನೂ ಹೊಂದಾಣಿಕೆ ಮಾಡಿಕೊಂಡು ಸುಧಾರಿತ ಜೀವನ ನಡೆಸಲು “669” ಸೂತ್ರ ಪಾಲಿಸಿ” ಎಂದು ಸಲಹೆ ನೀಡಿದ್ದಾರೆ.
ಅಲಿಬಾಬ ಸಂಸ್ಥೆಯ ಸಿಬ್ಬಂದಿಗಳ ವಿವಾಹ ಸಮಾರಂಭದಲ್ಲಿ ಮಾತನಾಡಿದ್ದ ಯಶಸ್ವಿ ಉದ್ಯಮಿ ಜಾಕ್ ಮಾ ಅವರು, ಸುಧಾರಿತ ಜೀವನಕ್ಕಾಗಿ ಈ ಸೂತ್ರ ಪಾಲಿಸಿ ಎಂದಿದ್ದಾರೆ. ಹಾಗೆಯೇ ಕೆಲಸದ ವೇಳೆ 996 ಸೂತ್ರ, ಜೀವನದಲ್ಲಿ 669 ಸೂತ್ರ ಪಾಲಿಸಿ ಎನ್ನುವ ಮೂಲಕ ವಿವಾದಕ್ಕೀಡಾಗಿದ್ದಾರೆ.
ಈ ಹಿಂದೆಯೇ ಜಾಕ್ ಮಾ, ದಿನಕ್ಕೆ 12 ಗಂಟೆಗಳಂತೆ ವಾರದ 6 ದಿನಗಳಲ್ಲಿ ಶ್ರಮಿಸಬಲ್ಲ ಉದ್ಯೋಗಿಗಳು ಮಾತ್ರ ತಮ್ಮ ಕಂಪನಿಗೆ ಬೇಕು, ಉಳಿದವರಿಗೆ ಇಲ್ಲಿ ಜಾಗವಿಲ್ಲ ಎಂದಿದ್ದರು. ಅಲಿಬಾಬ ಕಂಪನಿಯ ಆಂತರಿಕ ಸಭೆಯೊಂದರಲ್ಲಿ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ ಇವರು, 8 ಗಂಟೆಗಳ ಆಫೀಸ್ ಲೈಫ್ ಸ್ಟೈಲ್ ಬಯಸುವ ಉದ್ಯೋಗಿಗಳು ಆಲಿಬಾಬಾ ಗ್ರೂಪ್ಗೆ ಅಗತ್ಯವಿಲ್ಲ ಎಂದಿದ್ದರು.
ಸುಧಾರಿತ ಜೀವನಕ್ಕಾಗಿ ಕೆಲಸದ ವೇಳೆ 996 ಸೂತ್ರ, ಜೀವನದಲ್ಲಿ 669 ಸೂತ್ರ ಪಾಲಿಸಿ ಎನ್ನುವ ಮೂಲಕ ವಿವಾದಕ್ಕೀಡಾಗಿದ್ದಾರೆ. ಅಂದರೆ ಉತ್ತಮ ಜೀವನಕ್ಕೆ ‘669’ (6 ದಿನ, 6 ಬಾರಿ ಎಷ್ಟು ಹೊತ್ತು ಎಂಬುದನ್ನು ನಿರ್ಧರಿಸಿ ಲೈಂಗಿಕ ಕ್ರಿಯೆ ನಡೆಸಿ ಅನ್ನುವುದು ಅವರ ಸಲಹೆ.
ಆದರೆ ಅವರ ಸಲಹೆಯನ್ನು ಕಿಚಾಯಿಸಿರುವ ನೆಟ್ಟಿಗರು 996 ಸೂತ್ರದ ಪ್ರಕಾರ ಕೆಲಸ ಮಾಡಿ ಸುಸ್ತಾದ ಬಳಿಕ ಮನೆಯಲ್ಲಿ 669 ಸೂತ್ರ ಪಾಲಿಸಲು ಶಕ್ತಿ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
Discussion about this post