Saturday, March 6, 2021

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಮನ್ ರಂಗನಾಥ್

Must read

- Advertisement -
- Advertisement -

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಚೆಲುವೆ ಸುಮನ್ ರಂಗನಾಥನ್, ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನ ಉದ್ಯಮಿ ಸಾಜನ್ ಎಂಬುವವರ ಜೊತೆ ಸಪ್ತಪದಿ ತುಳಿದಿದ್ದಾರೆ. ಸುಮಾರು 8 ತಿಂಗಳಿಂದ ಡೇಟಿಂಗ್ ಮಾಡುತ್ತಿದ್ದ ಇಬ್ಬರೂ, ಸರಳವಾಗಿ ಕುಟುಂಬ ಮತ್ತು ಗೆಳೆಯರ ಉಪಸ್ಥಿತಿಯಲ್ಲಿ ಮದುವೆಯಾಗಿದ್ದಾರೆ.

ಸುಮನ್ ರಂಗನಾಥನ್ ಅವರಿಗೆ 44 ವರ್ಷ ವಯಸ್ಸು. ಇದಕ್ಕೂ ಮೊದಲು ಖ್ಯಾತ ಬಾಲಿವುಡ್ ನಿರ್ಮಾಪಕ ಬಂಟಿ ವಾಲಿಯಾ ಅವರನ್ನು ವಿವಾಹವಾಗಿದ್ದ ಸುಮನ್, 2007ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.

https://www.youtube.com/watch?v=DB_k_0QLMjk

ಸುಮನಾ ಅವರು ಮೂಲತಃ ತುಮಕೂರು ಜಿಲ್ಲೆ, ಸಿರಾ ತಾಲ್ಲೂಕಿನ ಗಿಡಗನಹಳ್ಳಿ ಎಂಬ ಊರಿನವರು.

ಇನ್ನು ತಮ್ಮ ಮದುವೆ ಕುರಿತಂತೆ ಮಾತನಾಡಿರುವ ಸುಮನಾ “ಕೊಡಗು ಮೂಲದವರಾದ ಸಜನ್ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕಾಮನ್ ಫ್ರೆಂಡ್ ಮೂಲಕ ಎಂಟು ತಿಂಗಳ ಹಿಂದೆ ನಮ್ಮಿಬ್ಬರಿಗೂ ಪರಿಚಯವಾಯಿತು. ಅಂದಿನಿಂದ ಡೇಟಿಂಗ್ ಮಾಡುತ್ತಿದ್ದೆವು. ಕಡೆಗೆ ಮದುವೆಗೆ ಇದೇ ಸೂಕ್ತ ಸಮಯ ಎಂದು ಭಾವಿಸಿದೆವು. ಸೋಮವಾರ ಆತ್ಮೀಯರು ಹಾಗೂ ಫ್ರೆಂಡ್ಸ್ ನಡುವೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದೇವೆ. ರಿಜಿಸ್ಟರ್ಡ್ ಮದುವೆ ಆಗಿದ್ದೇವೆ” ಎಂದಿದ್ದಾರೆ. 

https://www.youtube.com/watch?v=-oElbS3WEHY&t=4s

ಮದುವೆ ಇಷ್ಟು ಸರಳವಾಗಿ ಆಗಲು ಕಾರಣ ಏನು ಎಂಬ ಪ್ರಶ್ನೆಗೆ, “ನಾವಿಬ್ಬರೂ ತುಂಬಾ ಖಾಸಗಿತನ ಬಯಸುವ ವ್ಯಕ್ತಿಗಳು. ಹಾಗಾಗಿ ಕೇವಲ ಆತ್ಮೀಯರು ಹಾಗೂ ಗೆಳೆಯರ ನಡುವೆ ಮದುವೆಯಾಗಲು ಬಯಸಿದೆವು. ಇನ್ನೊಂದು ಮುಖ್ಯ ಸಂಗತಿ ಎಂದರೆ ಇಬ್ಬರೂ ಸಮಾನ ಮನಸ್ಕರು. ಹಾಗಾಗಿ ಸರಳವಾಗಿ ಮದುವೆಯಾಗಲು ನಿರ್ಧರಿಸಿದೆವು. ನಮ್ಮಿಬ್ಬರದ್ದೂ ಹೇಳಿ ಮಾಡಿಸಿದ ಜೋಡಿ” ಎಂದಿದ್ದಾರೆ ಸುಮನ್ ರಂಗನಾಥನ್ 

ಸಿದ್ಲಿಂಗು, ಸಿಬಿಐ ಶಂಕರ್, ಡಾಕ್ಟರ್ ಕೃಷ್ಣ, ಬುದ್ಧಿವಂತ, ಕಟಾರಿ ವೀರಿ ಸುರಸುಂದರಾಂಗಿ, ನೀರ್ ದೋಸೆ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಸುಮನ್ ರಂಗನಾಥನ್ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಡ್ಯಾನ್ಸ್ ರಿಯಾಲಿಟಿ ಶೋನ ಜಡ್ಜ್ ಸಹ ಆಗಿದ್ದಾರೆ ಸುಮನ್. 

- Advertisement -
- Advertisement -
- Advertisement -

Latest article